Crime News: ಟ್ರೆಕ್ಕಿಂಗ್​ಗೆಂದು ಕರೆದೊಯ್ದು ಭಾವಿ ಪತಿಯನ್ನೇ ಫೀನಿಶ್ ಮಾಡಿದ ಯುವತಿ! 2 ಸಾರಿ ಬಚಾವ್ ಆದ್ರೂ 3ನೇ ಪ್ರಯತ್ನದಲ್ಲಿ ಮುಗಿಸೇ ಬಿಟ್ಳು ಕಿರಾತಕಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

Crime News: ಟ್ರೆಕ್ಕಿಂಗ್ ಹೆಸರಲ್ಲಿ ವರನೇ ಫೀನಿಶ್! ಎರಡು ಬಾರಿ ಸಾವಿನಿಂದ ಪಾರಾದ್ರೂ ವಿಧಿ ಬಿಡಲಿಲ್ಲ; ಹನಿಮೂನ್ ಬೇಡ ಎನ್ನುತ್ತಾ, ಮೂರನೇ ಯತ್ನದಲ್ಲಿ ಟ್ರಿಪ್ ಕರೆದೊಯ್ದು ವರನನ್ನು ವರನನ್ನೇ 400 ಅಡಿ ಕಂದಕದಿಂದ ತಳ್ಳಿ ಮುಗಿಸಿದ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿ! ಆ ಕುರಿತ ವರದಿ ಇಲ್ಲಿದೆ.

News18
News18

ಪುಣೆ (ಮಹಾರಾಷ್ಟ್ರ): ಪ್ರೀತಿಗಾಗಿ ಕೊಲೆಯಾದನಾ ಉದ್ಯಮಿ? ಮಹಾರಾಷ್ಟ್ರದ (Maharashtra) ಪುಣೆ (Pune) ಬಳಿಯ ಲೋಹಗಡ್ ಕೋಟೆಯಲ್ಲಿ (Lohagad Fort) ನಡೆದಿದ್ದು ಟ್ರೆಕ್ಕಿಂಗ್ (Trekking) ಅಪಘಾತ ಅಲ್ಲ, ಅದು ಪಕ್ಕಾ ಪ್ಲಾನ್ ಮಾಡಿ ನಡೆಸಿದ ಭೀಕರ ಹತ್ಯೆ.! ತಂದೆ ಕೋಟಿ ಕೋಟಿ ಸುರಿದು ರಾಜಸ್ಥಾನದಲ್ಲಿ (Rajasthan) ಮಾಡಿಸಬೇಕಿದ್ದ ಅದ್ದೂರಿ ಮದುವೆ ಬೇಡವೆಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೇ ಪ್ರಿಯಕರನ ಜೊತೆ ಸೇರಿ ವರನನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿದ್ದಾಳೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ಮಹಾರಾಷ್ಟ್ರದ ಪುಣೆ ಸಮೀಪದ ಐತಿಹಾಸಿಕ ಲೋಹಗಡ್ ಕೋಟೆಯಲ್ಲಿ ನಡೆದ ಭೀಕರ ದುರಂತವೊಂದು ಇದೀಗ ಇಡೀ ದೇಶವನ್ನೇ ಬೆಚ್ಚಿಬೀಳಿಸುವ ಕೊಲೆ ಪಿತೂರಿಯಾಗಿ ಹೊರಹೊಮ್ಮಿದೆ. ಆರಂಭದಲ್ಲಿ ಟ್ರೆಕ್ಕಿಂಗ್ ವೇಳೆ ಸಂಭವಿಸಿದ ಅಪಘಾತ ಎಂದು ಭಾವಿಸಲಾಗಿದ್ದ ಪ್ರಕರಣ, ಪೊಲೀಸ್ ತನಿಖೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆದ ಕ್ರೂರ ಹತ್ಯೆ ಎಂದು ಸಾಬೀತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು 20 ವರ್ಷದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ 22 ವರ್ಷದ ಚೇತನ್ ಚೌಧರಿಯನ್ನು ಬಂಧಿಸಿದ್ದಾರೆ. ತನಗೆ ಇಷ್ಟವಿಲ್ಲದ ಅದ್ದೂರಿ ಮದುವೆಯನ್ನು ತಪ್ಪಿಸಲು ಸಿಯಾ ತನ್ನ ಪ್ರಿಯಕರನೊಂದಿಗೆ ಸೇರಿ, ನಿಶ್ಚಿತಾರ್ಥವಾಗಿದ್ದ 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರನ್ನು 400 ಅಡಿ ಆಳದ ಕಂದಕಕ್ಕೆ ತಳ್ಳಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಕೋಟಿ ಕೋಟಿ ವೆಚ್ಚದ ಮದುವೆ ಸಿದ್ಧತೆ!

ವರದಿಗಳ ಪ್ರಕಾರ, ಮೃತ ಕೇತನ್ ತಂದೆ ವಿಶಾಲ್ ಅಗರ್ವಾಲ್ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ರಾಜಸ್ಥಾನದ ಉದಯಪುರದಲ್ಲಿ ಬರೋಬ್ಬರಿ ₹17 ಕೋಟಿ ವೆಚ್ಚದಲ್ಲಿ ಮಗನ ಅದ್ದೂರಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು. ಆದರೆ, ಸಿಯಾ ಗೋಯಲ್, ಚೇತನ್‌ನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಹೆತ್ತವರ ಒತ್ತಾಯಕ್ಕೆ ಮಣಿದು ಕೇತನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಆಕೆಗೆ ಈ ಮದುವೆ ಇಷ್ಟವಿರಲಿಲ್ಲ. ಮದುವೆಗೂ ಮುನ್ನ ಕೇತನ್ ಯೋಜಿಸಿದ್ದ ಬಾಲಿ ಪ್ರವಾಸವನ್ನು ತಪ್ಪಿಸಲು ಸಿಯಾ ತನ್ನ ಪಾಸ್‌ಪೋರ್ಟ್ ಕಳೆದುಹೋಗಿದೆ ಎಂದು ಸುಳ್ಳು ಹೇಳಿದ್ದಳು. ಕೊನೆಗೆ ಜೂನ್ 14 ರಂದು ಮಹಾಬಲೇಶ್ವರದಲ್ಲಿ ಕೇತನ್‌ನನ್ನು ಬೆಟ್ಟದಿಂದ ಕೆಳಕ್ಕೆ ತಳ್ಳಿ ಕೊಲ್ಲಲು ಈ ಪ್ರೇಮಿಗಳು ಮೊದಲ ಯತ್ನ ನಡೆಸಿದ್ದರು, ಆದರೆ ಅದು ವಿಫಲವಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: Ketan Agarwal: ಮದುವೆಗೂ ಮೊದಲೇ ಭಾವಿ ಪತ್ನಿಯಿಂದ ಬಲಿಯಾದ್ನಾ ಯುವಕ? ಟ್ರೆಕ್ಕಿಂಗ್​ ಹೋದವನಿಗೆ ಆಗಿದ್ದೇನು?

ಮುಂದುವರೆದು, ಮೊದಲ ಯತ್ನ ವಿಫಲವಾದ ನಂತರ, ಜೂನ್ 18 ರಂದು ಸಿಯಾ ಟ್ರೆಕ್ಕಿಂಗ್ ನೆಪದಲ್ಲಿ ಕೇತನ್‌ನನ್ನು ಪುಣೆಯ ಲೋಹಗಡ್ ಕೋಟೆಗೆ ಕರೆದೊಯ್ದಿದ್ದಳು. ತನ್ನ ಪ್ಲಾನ್ ಪ್ರಕಾರ ಪ್ರೇಮಿ ಚೇತನ್‌ನನ್ನು ಮೊದಲೇ ಅಲ್ಲಿಗೆ ಬರುವಂತೆ ಮಾಡಿದ್ದಳು. ಕೋಟೆಯ ಅತ್ಯಂತ ನಿರ್ಜನ ಹಾಗೂ ಅಪಾಯಕಾರಿ ತುದಿಗೆ ಕೇತನ್‌ನನ್ನು ಕರೆದೊಯ್ದು, ಇಬ್ಬರೂ ಸೇರಿ ಆತನನ್ನು ಹಿಂದಿನಿಂದ 400 ಅಡಿ ಆಳದ ಪ್ರಪಾತಕ್ಕೆ ತಳ್ಳಿದ್ದಾರೆ. ನಂತರ ಸಿಯಾ ತಾನೇ ಪೊಲೀಸರಿಗೆ ಫೋನ್ ಮಾಡಿ, “ಕೋಟೆಯ ತುದಿಯಲ್ಲಿ ಫೋಟೋ ಕ್ಲಿಕ್ಕಿಸುವಾಗ ಕೇತನ್ ಕಾಲು ಜಾರಿ ಬಿದ್ದರು” ಎಂದು ಕಣ್ಣೀರಿಟ್ಟು ಸುಳ್ಳು ಕಥೆ ಕಟ್ಟಿದ್ದಾಳೆ.

ಆದರೆ ಕೇತನ್ ಕುಟುಂಬಕ್ಕೆ ಆಕೆಯ ನಡವಳಿಕೆಯ ಮೇಲೆ ಅನುಮಾನ ಬಂದು ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಲೋನಾವಾಲಾ ಪೊಲೀಸರು ಸಾಕ್ಷ್ಯಗಳು ಮತ್ತು ಚೇತನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಸುದ್ದಿ/ ನ್ಯೂಸ್/ದೇಶ-ವಿದೇಶ/

Crime News: ಟ್ರೆಕ್ಕಿಂಗ್​ಗೆಂದು ಕರೆದೊಯ್ದು ಭಾವಿ ಪತಿಯನ್ನೇ ಫೀನಿಶ್ ಮಾಡಿದ ಯುವತಿ! 2 ಸಾರಿ ಬಚಾವ್ ಆದ್ರೂ 3ನೇ ಪ್ರಯತ್ನದಲ್ಲಿ ಮುಗಿಸೇ ಬಿಟ್ಳು ಕಿರಾತಕಿ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed