Last Updated:
ಬಾಲಿವುಡ್‌ನ ಜನಪ್ರಿಯ ನಟ ಗೋವಿಂದ (Actor Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ವಿಚಾರಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ.
ಬಾಲಿವುಡ್‌ನ ಜನಪ್ರಿಯ ನಟ ಗೋವಿಂದ (Actor Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ವಿಚಾರಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ. ನಟಿ ಕೋಮಲ್ ರಾಣಿ ಜೊತೆ ಗೋವಿಂದ ಕಾಣಿಸಿಕೊಂಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಸುನೀತಾ ಅಹುಜಾ, ತಮ್ಮ ಪತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಗಳ ವಯಸ್ಸಿನ ಯುವತಿಯೊಂದಿಗೆ ಓಡಾಡುತ್ತಿರುವುದನ್ನು ಪ್ರಶ್ನಿಸಿರುವ ಅವರು, ಗೋವಿಂದ ಅವರ ನಡೆಗೆ ಕಿಡಿಕಾರಿದ್ದಾರೆ. ಈ ಹೇಳಿಕೆಗಳು ಇದೀಗ ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.














