Last Updated:
ಬಲರಾಮನ ದಿನಗಳು ಚಿತ್ರಕ್ಕೆ ಧ್ರುವ ಸರ್ಜಾ ಸಪೋರ್ಟ್ ಮಾಡಿದ್ದಾರೆ. ಚಿತ್ರದ ಟ್ರೈಲರ್ ನೋಡಿಯೇ ಥ್ರಿಲ್ ಆಗಿದ್ದಾರೆ. ವ್ಹಾವ್ ಅಂತಲೂ ಹೇಳಿದ್ದಾರೆ. ಇನ್ನು ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಬಲರಾಮನ ದಿನಗಳು ಚಿತ್ರಕ್ಕೆ (Balaramana Dingalu Movie) ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸಪೋರ್ಟ್ ಮಾಡಿದ್ದಾರೆ. ಧ್ರುವ ಸರ್ಜಾ ಈ ಚಿತ್ರದ ಟ್ರೈಲರ್ ರಿಲೀಸ್ (Trailer Release) ಮಾಡಿದ್ದಾರೆ. ಈ ಮೂಲಕ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನ ನೋಡಿದಾಕ್ಷಣದ ಒಂದೇ ಪದದಲ್ಲಿ ಹೇಳ್ಬೇಕು ಅಂತ ಅಂದ್ರೆ ಅದು “ವ್ಹಾವ್” ಅನ್ನೋದೇ ಆಗಿದೆ. ಇದರಲ್ಲಿ ವಿಷ್ಯೂಲ್ ಟ್ರೀಟ್ ಇದೆ. ಆ ದಿನಗಳ ಫೀಲ್ ಕೊಡುವ ಸಂಗೀತ ಕೊಟ್ಟಿದ್ದಾರೆ. ಇದು ತುಂಬಾನೆ ಚೆನ್ನಾಗಿಯೇ ಇದೆ. ಆ ದಿನಗಳು ಬಂದಾಗ ನಾನು ಸೆಕೆಂಡ್ ಪಿಯುಸಿ ಜಸ್ಟ್ ಪಾಸ್ ಆಗಿದ್ದೆ. ಅದನ್ನ ಸೆಲೆಬ್ರೇಟ್ ಮಾಡ್ತಾ ಇದ್ದೆ. ಆಗ ಈ ಚಿತ್ರ ನೋಡಿ ತುಂಬಾನೆ ಖುಷಿ ಆಯಿತು. ಆ ದಿನಗಳ ಫೀಲ್ ಅನ್ನ ಈ ಬಲರಾಮನ ದಿನಗಳಲ್ಲಿ (Balaramana Dingalu) ನೋಡುತ್ತಿದ್ದೇನೆ ಅಂತಲೂ ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜಸ್ಟ್ ವ್ಹಾವ್
ಆ ದಿನಗಳು ಚಿತ್ರ ಬಂದಾಗ ನಾನು ಪಿಯುಸಿ ಸೆಕೆಂಡ್ ಇಯರ್ ಜಸ್ಟ್ ಪಾಸ್ ಆಗಿದ್ದೆ, ಅದನ್ನೆ ಸೆಲೆಬ್ರೇಟ್ ಮಾಡ್ತಾ ಇದ್ದೆ. ಆ ನಾನು ಆ ದಿನಗಳ ಚಿತ್ರವನ್ನ ನೋಡಿ ತುಂಬಾನೆ ಖುಷಿಪಟ್ಟಿದ್ದೇನೆ. ಈ ರೀತಿಯ ಚಿತ್ರಗಳೆಲ್ಲ ಡೈರೆಕ್ಟರ್ ಕೆ.ಎಂ.ಚೈತನ್ಯ ಅವರಿಂದಲೇ ಸಾಧ್ಯವಾಗುತ್ತದೆ.
ನಾವೆಲ್ಲ ಫ್ಯಾಮಿಲಿ
ನಮ್ಮ ತಾತ ಶಕ್ತಿ ಪ್ರಸಾದ್ ಅವರ ಜೊತೆಗೆ ಪ್ರಭಾಕರ್ ಅಂಕಲ್ ಅವರು ಕೆಲಸ ಮಾಡಿದ್ದಾರೆ. 40 ರಿಂದ 45 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಮನೆಯಲ್ಲಿ ದಿನೇಶ್ ಅಪ್ಪಾಜಿ, ತೂಗುದೀಪ್ ಶ್ರೀನಿವಾಸ್ ಅಪ್ಪಾಜಿ, ವಜ್ರಮುನಿ ಅಪ್ಪಾಜಿ, ಸುಧೀರ್ ಅಪ್ಪಾಜಿ, ಇವರೆಲ್ಲ ನಮ್ಮ ಮನೆಯಲ್ಲಿಯೇ ಒಟ್ಟಿಗೆ ಇಸ್ಪೆಟ್ ಆಡ್ತಾ ಇದ್ದರು ಅನ್ನೋದನ್ನ ಮನೆಯಲ್ಲಿ ಹೇಳೋದನ್ನ ಕೇಳಿದ್ದೇನೆ. ಹಾಗೆ ಪ್ರಭಾಕರ್ ಅಂಕಲ್ ಅವರು ನಮ್ಮ ಅಂಕಲ್ ಅರ್ಜುನ್ ಸರ್ಜಾ ಅವರೊಟ್ಟಿಗೇನು ಕೆಲಸ ಮಾಡಿದ್ದಾರೆ.
ಇದೀಗ ಬಲರಾಮನ ದಿನಗಳು ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿದ್ದಾರೆ. ಪ್ರಭಾಕರ್ ಅವರ ಮಗ ವಿನೋದ್ ಅವರ ಈ ಒಂದು ಚಿತ್ರ ವಿಂಟೇಜ್ ಫೀಲ್ ಕೊಡುತ್ತಿದೆ ಅಂತಲೇ ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ.
ಅಣ್ಣ ಚಿರು ಜೊತೆಗೆ ಆಟಗಾರ, ಅಮ್ಮ ಐ ಲವ್ ಯುವ ಚಿತ್ರವನ್ನು ಕೆ.ಎಂ.ಚೈತನ್ಯ ಚಿತ್ರ ಮಾಡಿದ್ದಾರೆ. ಸಿಕ್ಕಾಗ ನನಗೂ ಚಿತ್ರ ಮಾಡಿ ಅಂತ ಹೇಳ್ತಾನೇ ಇರ್ತೀನಿ ಅನ್ನೋದನ್ನು ಧ್ರುವ ಸರ್ಜಾ ಇಲ್ಲಿ ಹೇಳಿಕೊಂಡಿದ್ದಾರೆ.
ಬಲರಾಮನ ದಿನಗಳು ಚಿತ್ರದ ನಾಯಕ ನಟ ವಿನೋದ್ ಪ್ರಭಾಕರ್ ಅವರು ಆರೋಗ್ಯದಲ್ಲಿ ವ್ಯತ್ಯಾಸ ಆಗಿತ್ತು. ಅವರಿಗೆ ಲೋಬಿ ಆಗಿತ್ತು. ಈಗ ಆ ರೀತಿ ಏನೂ ಇಲ್ಲ. ರೂಮರ್ಸ್‌ಗೆ ಕಿವಿಕೊಡಬೇಡಿ.
ಬಲರಾಮನ ದಿನಗಳು
ನಾಳೆಯಿಂದಲೇ ವಿನೋದ್ ಪ್ರಭಾಕರ್ ಅವರು ಮತ್ತೆ ಪ್ರಚಾರ ಬರ್ತಾರೆ ಅಂತ ಚಿತ್ರದ ನಿರ್ಮಾಪಕ ಶ್ರೇಯಸ್ ಹೇಳಿಕೊಂಡಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಜೂನ್-25 ರಂದು ಚಿತ್ರದ ಪ್ರೀಮಿಯರ್ ಶೋ ಕೂಡ ಇದೆ.
ಸಿಂಗಲ್ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಸೇರಿ ಈ ಚಿತ್ರ 100 ಪ್ಲಸ್ ಥಿಯೇಟರ್ ಅಲ್ಲಿ ರಿಲೀಸ್ ಆಗುತ್ತಿದೆ ಅಂತ ಚಿತ್ರವನ್ನ ವಿತರಣೆ ಮಾಡ್ತಿರೋ ಕೆವಿಎನ್ ಸುಪ್ರೀತ್ ಹೇಳಿಕೊಂಡಿದ್ದಾರೆ.
ವಿನೋದ್ ಪ್ರಭಾಕರ್ ಅವರಿಗೆ ನಿಜವಾಗಲೂ ಆರೋಗ್ಯ ಏರುಪೇರಾಗಿದೆ. ಆದರೆ, ಇದು ಸಿನಿಮಾ ಪ್ರಚಾರಕ್ಕೆ ಮಾಡಿರೋ ಗಿಮಿಕ್ ಅಲ್ವೆ ಅಲ್ಲ. ವಿನೋದ್ ಪ್ರಭಾಕರ್ ತುಂಬಾನೆ ಸ್ಟ್ರಾಂಗ್ ಆಗಿದ್ದಾರೆ. ಅವರು ಕುಸಿದು ಬಿದ್ದಿದ್ದಾರೆ ಅಂದ್ರೆ ಯಾರು ನಂಬೋದಿಲ್ಲ.
ಆದರೆ, ಅವರು ನಿಜವಾಗಲೂ ಆರೋಗ್ಯ ತಪ್ಪಿದ್ದಾರೆ. ಅಷ್ಟು ಬಿಟ್ಟರೆ, ಇದು ಗಿಮಿಕ್ ಅಲ್ವೇ ಅಲ್ಲ ಅಂತ ಚಿತ್ರದ ನಿರ್ದೇಶಕ ಕೆ.ಎಂ.ಚೈತನ್ಯ ಅವರು ಚಿತ್ರದ ಈ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ. ಹಾಗೆ ಈ ಚಿತ್ರ ಜೂನ್-26 ರಂದು ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













