Last Updated:
ಚಂದನ್ ಕುಮಾರ್ ಅಭಿನಯದ ಫ್ಲರ್ಟ್ ಚಿತ್ರ ರೀ-ರಿಲೀಸ್ ಆಗುತ್ತಿದೆ. ಚಂದನ್ ಇದನ್ನ ಯಾಕೆ ಮರು ಬಿಡುಗಡೆ ಮಾಡ್ತಿದ್ದಾರೆ ಅನ್ನುವ ಕುತೂಹಲವು ಹೆಚ್ಚಾಗಿದೆ. ಅದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಪ್ರೇಮ ಬರಹ ಚಿತ್ರ (Prema Baraha Movie) ಖ್ಯಾತಿಯ ನಟ ಚಂದನ್ ಕುಮಾರ್ (Chandan Kumar) ಮತ್ತೊಂದು ಸಾಹಸ ಮಾಡಿದ್ದಾರೆ. 7 ತಿಂಗಳ ಹಿಂದೆ ಬಂದಿದ್ದ ತಮ್ಮ ಫ್ಲರ್ಟ್ ಚಿತ್ರವನ್ನ (Flirt Movie) ಮತ್ತೊಮ್ಮೆ ತೆರೆಗೆ ತರೋಕೆ ನಿರ್ಧಾರ ಮಾಡಿದ್ದಾರೆ. ಒಳ್ಳೆ ವಿಮರ್ಶೆ ಕೂಡ ಬಂದಿತ್ತು. ಆದರೆ, ಆ ಟೈಮ್ ಅಲ್ಲಿ ಸಾಕಷ್ಟು ಸಿನಿಮಾಗಳು ಬಂದಿದ್ದವು. ಹಾಗಾಗಿಯೇ ಈಗ ಈ ಚಿತ್ರವನ್ನ ಮತ್ತೊಮ್ಮೆ ರಿಲೀಸ್ (Re-Release) ಮಾಡ್ತಾ ಇದ್ದೇವೆ ಅಂತಲೂ ಹೇಳಿಕೊಂಡಿದ್ದಾರೆ. ತಮ್ಮ ಈ ಚಿತ್ರಕ್ಕೆ ಹೊಸ ಸ್ಪರ್ಶವನ್ನು ಕೂಡ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
ಫ್ಲರ್ಟ್ ಚಿತ್ರಕ್ಕೆ ಹೊಸ ಸ್ಪರ್ಶ
ಈ ಚಿತ್ರವನ್ನ ಟ್ರಿಮ್ ಕೂಡ ಮಾಡಿದ್ದಾರೆ. ಜನರ ಅಭಿಪ್ರಾಯದಂತೆ ಯಾವುದು ಜಾಸ್ತಿ ಅನಿಸ್ತದೋ ಅದನ್ನ ಟ್ರಿಮ್ ಮಾಡಿದ್ದಾರೆ. ಆಗ ಈ ಚಿತ್ರ ಜನರಿಗೆ ರೀಚ್ ಆಗಿರಲಿಲ್ಲ. ಈ ಸಲ ಪಕ್ಕಾ ತಲುಪುತ್ತದೆ ಅನ್ನುವ ನಂಬಿಕೆಯಲ್ಲಿಯೇ ಈ
ಚಿತ್ರವನ್ನ ಮತ್ತೊಮ್ಮೆ ಬಿಡುಗಡೆ ಮಾಡುತ್ತಿದ್ದಾರೆ.
ಫ್ಲರ್ಟ್ ಚಿತ್ರದಲ್ಲಿ ಕಿಚ್ಚ ಸುದೀಪ್ ಒಂದು ಹಾಡು ಹಾಡಿದ್ದಾರೆ. ಇದು ಸ್ನೇಹದ ಹಾಡೇ ಆಗಿದೆ. ಈ ಒಂದು ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಮಾಡಿದ್ದಾರೆ. ಆದರೆ, ಇತರ ಮೂರು ಹಾಡುಗಳನ್ನ ಜಸ್ಸಿ ಗಿಫ್ಟ್ ಕಂಪೋಸ್ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಮಾಡಿದ್ದಾರೆ.
ಈ ಚಿತ್ರ ROMCOM ಕಂಟೆಂಟ್ ಹೊಂದಿದೆ. ಪ್ರೀತಿನೂ ಇದೆ. ಹಾಸ್ಯವೂ ಇದೆ. ಎರಡೂ ಇರೋ ಈ ಚಿತ್ರದಲ್ಲಿ ಸ್ನೇಹದ ಗಟ್ಟಿ ಬಾಂಧವ್ಯ ಕೂಡ ಇದೆ.
ಕಿಚ್ಚ ಸುದೀಪ್ ಸಪೋರ್ಟ್ ಮಾಡ್ತಾನೇ ಬಂದಿದ್ದಾರೆ. ಈ ಚಿತ್ರಕ್ಕೆ ಆರಂಭದಿಂದಲೂ ಸಾಥ್ ಕೊಟ್ಟಿದ್ದಾರೆ. ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ. ಚಂದನ್ ನಮ್ಮ ಮನೆಯ ಹುಡುಗ ಅಂತಲೂ ಹೇಳಿ ಬೆನ್ನು ತಟ್ಟಿದ್ದಾರೆ.
ಈ ಚಿತ್ರ ಯಾವಾಗ ರಿಲೀಸ್
ಚಂದನ್ ಕುಮಾರ್ ಅವರ ಈ ಚಿತ್ರದಲ್ಲಿ ನಿಮಿಕಾ ರತ್ನಾಕರ್ ಅಭಿನಯಿಸಿದ್ದಾರೆ. ಅಕ್ಷತಾ ಬೋಪಣ್ಣ ಸಹ ಈ ಸಿನಿಮಾದ ಮತ್ತೊಬ್ಬ ನಾಯಕಿ ಆಗಿದ್ದಾರೆ.
ಈ ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಇದ್ದಾರೆ. ದಡಿಯಾ ಗಿರಿ ಕೂಡ ನಟಿಸಿದ್ದಾರೆ. ವಿನಯ್ ಗೌಡ, ಸಾಧು ಕೋಕಿಲಾ, ಶ್ರುತಿ ಕೃಷ್ಣ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಎಚ್.ಸಿ.ವೇಣು ಕ್ಯಾಮರಾವರ್ಕ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಫ್ಲರ್ಟ್ ಅನ್ನೋದನ್ನ ಚಂದನ್ ಹೀಗೆ ಅರ್ಥೈಸಿದ್ದಾರೆ. ‘ಫ್ಲರ್ಟ್’ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ.
ಚಂದನ್ ತಮ್ಮ ಈ ಚಿತ್ರವನ್ನ ರೀ-ರಿಲೀಸ್ ಮಾಡ್ತಿದ್ದೇವೆ ಅಂತ ಹೇಳಿದ್ದಾರೆ. ಅಧಿಕೃತವಾಗಿಯೇ ಇದನ್ನ ಹೇಳಿಕೊಂಡಿದ್ದಾರೆ. ಆದರೆ, ಯಾವ ದಿನ? ಯಾವ ತಿಂಗಳು ಅಂತ ಇನ್ನು ಹೇಳಿಕೊಂಡಿಲ್ಲ. ಈ ಮೂಲಕ ಫ್ಲರ್ಟ್ ಚಿತ್ರ ಯಾವಾಗ ಬರ್ತದೆ ಅನ್ನುವ ಕುತೂಹಲವನ್ನ ಹುಟ್ಟುಹಾಕಿದ್ದಾರೆ ಅಂತ ಹೇಳಬಹುದು.
Jun 22, 2026 11:17 PM IST













