Darshan Case: ಪ್ರದೋಷ್​ಗೆ ಶಾಕ್ ಕೊಟ್ಟ ದರ್ಶನ್, ಅರ್ಜಿಯಲ್ಲೇನಿದೆ ಗೊತ್ತಾ? ’ renukaswsamy case darshan plea session court order today | | ACTPnews

Darshan Case: ಪ್ರದೋಷ್​ಗೆ ಶಾಕ್ ಕೊಟ್ಟ ದರ್ಶನ್, ಅರ್ಜಿಯಲ್ಲೇನಿದೆ ಗೊತ್ತಾ? ’ renukaswsamy case darshan plea session court order today |


ಈ ಎಲ್ಲ ಬೆಳವಣಿಗೆಗಳ ಮಧ್ಯೆ ದರ್ಶನ್ ಪ್ರದೋಷ್​ ಶಾಕ್ ಕೊಟ್ಟಿದ್ದಾರೆ. ಈಗಾಗಲೇ ಮಾಫಿ ಸಾಕ್ಷಿ ವಿರುದ್ಧ ದರ್ಶನ್ ಹಾಗೂ ವಿಜಯಲಕ್ಷ್ಮಿ ಸೇರಿ ಒಟ್ಟು 3 ಅರ್ಜಿ ಸಲ್ಲಿಸಿದ್ದಾರೆ. ಹೀಗಿರುವಾಗಲೇ ದರ್ಶನ್ ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ.

ಮಾಫಿ ಸಾಕ್ಷಿ ಹೇಳುತ್ತಿರುವ ಪ್ರದೋಷ್​ನನ್ನು ಜೈಲಿನಿಂದ ಕೋರ್ಟ್​ಗೆ ಕರೆತರುವಾಗ ಯಾರೊಂದಿಗೆ ಮಾತನಾಡಲು ಅವಕಾಶ ನೀಡದಂತೆ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. 59ನೇ ಸಿಸಿಹೆಚ್ ಕೋರ್ಟ್ ಗೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ದರ್ಶನ್ ಲಾಯರ್ ಸಲ್ಲಿಸಿದ ಅರ್ಜಿಯ ಆದೇಶ ಇಂದು ಹೊರಬೀಳುವ ಸಾಧ್ಯತೆ ಇದೆ. ಒಟ್ಟು ಎರಡು ಅರ್ಜಿ‌ ಸಲ್ಲಿಕೆ ಮಾಡಿರುವ ದರ್ಶನ್ ಪರ ವಕೀಲರು Cr.P.C ಸೆಕ್ಷನ್ 267 ಮತ್ತು BNSS ಸೆಕ್ಷನ್ 302 ಅಡಿಯಲ್ಲಿ ಒಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಕೋರ್ಟ್​ಗೆ ಬಂದಾಗ ಪ್ರದೋಷ್ ಬೇರೆ ಯಾರ ಭೇಟಿಗೆ ಅವಕಾಶ ನೀಡಬಾರದೆಂದು ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ ಯಾರೊಂದಿಗೂ ಮಾತನಾಡಲು ಅವಕಾಶ ನೀಡದಂತೆ CR ಎಸ್ಕಾರ್ಟ್ ಗೆ ಸೂಚನೆ ನೀಡಬೇಕು ಎನ್ನಲಾಗಿದೆ.

ಕೋರ್ಟ್ ಆದೇಶದಂತೆ ಪ್ರದೋಷ್ ಹಾಜರು ಪಡಿಸಲಾಗ್ತಿದೆ ಎಂದು ಎಸ್.ಪಿ.ಪಿ ಅಕ್ಷೇಪಣೆ ಸಲ್ಲಿಸಿದ್ದು ಸೆ. 24ರ ಕೋರ್ಟ್ ಆದೇಶದಂತೆ ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ವೆವೋ ಸಲ್ಲಿಕೆ ಮಾಡಿದ್ದಾರೆ. Body Camera ಧರಿಸಿಕೊಂಡು ಕೋರ್ಟ್‌ಗೆ ಕರೆತಂದಿದ್ದರು ಎಂದು SPP ತಿಳಿಸಿದ್ದು ಈ ಬಗ್ಗೆ ಇಂದು 59ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಲಿದೆ.

ಅಲ್ಲದೆ ಎವಿಡೆನ್ಸ್ ಆ್ಯಕ್ಟ್ ಸೆಕ್ಷನ್ 137 ಮತ್ತು 138 ಅಡಿಯಲ್ಲಿ ಮತ್ತೊಂದು ಅರ್ಜಿ ಸಲ್ಲಿಕೆ ಮಾಡಲಿದ್ದು ಮಾಫಿ ಸಾಕ್ಷಿ ಪ್ರಕ್ರಿಯೆ ಹೇಗೆ ಮಾಡಬೇಕು ಎಂಬ ಬಗ್ಗೆ ಅರ್ಜಿ ಸಲ್ಲಿಕೆಯೂ ಮಾಡಲಾಗಿದೆ. ಇವತ್ತು SPP ಈ ಎವಿಡೆನ್ಸ್ ಆ್ಯಕ್ಟ್ ಅಡಿ ಸಲ್ಲಿಸಿದ ಅರ್ಜಿಗೆ ಅಕ್ಷೇಪಣೆ ಸಲ್ಲಿಸಲಿದ್ದಾರೆ.

ಮೂರು ದಿನಗಳಲ್ಲಿ ಬರೋಬ್ಬರಿ 83 ಪುಟಗಳ ಹೇಳಿಕೆ ದಾಖಲಿಸಲಾಗಿದೆ. 59 ನೇ ಸಿಸಿಎಚ್ ಕೋರ್ಟ್​ನಲ್ಲಿ ಮಾಫಿ ಸಾಕ್ಷ್ಯ ನುಡಿದಿರೋ ಪ್ರದೋಷ್ ಇನ್ನು ಹೇಳಿಕೆ ದಾಖಲು ಬಾಕಿ ಇದ್ದು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ಮುಂದೆ ಇವೇ ಹೇಳಿಕೆಗಳು ದರ್ಶನ್ ಅಂಡ್ ಗ್ಯಾಂಗ್ ಗೆ ಮುಳುವಾಗೋ ಸಾಧ್ಯತೆ ಇದ್ದು, ಮೃತದೇಹ ಸತ್ವಾ ಅಪಾರ್ಟ್ಮೆಂಟ್ ಬಳಿ ಬಿಸಾಡೋ ವರೆಗೂ ಹೇಳಿಕೆ ದಾಖಲಿಸಲಾಗಿದೆ. ಬಳಿಕ ರೇಣುಕಾಸ್ವಾಮಿ ಮೊಬೈಲ್ ನಾಶ ಪಡಿಸಿರೋವರೆಗೂ ಹೇಳಿಕೆ ಕೊಡಲಾಗಿದೆ ಎನ್ನಲಾಗಿದೆ.

ವರದಿ: ಮಂಜುನಾಥ್ ಎನ್, ನ್ಯೂಸ್ 18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed