Flirt Kannada Movie: ‘ಲಕ್ಷ್ಮಿ ಬಾರಮ್ಮ’ ಚಂದನ್‌ರ ಸಿನಿಮಾ ರೀ-ರಿಲೀಸ್; ಆದರೆ ಈ ಸಲ ‘ಫ್ಲರ್ಟ್‌’ಗೆ ಹೊಸ ಟಚ್! | | ACTPnews

ಬಿಗ್ ಬಾಸ್ ಚಂದನ್ ಫ್ಲರ್ಟ್ ಚಿತ್ರ ರೀ-ರಿಲೀಸ್; ಆದರೆ ಈ ಸಲ ಹೊಸ ಟಚ್ ಬಂದಿದೆ!


Last Updated:

ಚಂದನ್ ಕುಮಾರ್ ಅಭಿನಯದ ಫ್ಲರ್ಟ್ ಚಿತ್ರ ರೀ-ರಿಲೀಸ್ ಆಗುತ್ತಿದೆ. ಚಂದನ್ ಇದನ್ನ ಯಾಕೆ ಮರು ಬಿಡುಗಡೆ ಮಾಡ್ತಿದ್ದಾರೆ ಅನ್ನುವ ಕುತೂಹಲವು ಹೆಚ್ಚಾಗಿದೆ. ಅದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಬಿಗ್ ಬಾಸ್ ಚಂದನ್ ಫ್ಲರ್ಟ್ ಚಿತ್ರ ರೀ-ರಿಲೀಸ್; ಆದರೆ ಈ ಸಲ ಹೊಸ ಟಚ್ ಬಂದಿದೆ!
ಬಿಗ್ ಬಾಸ್ ಚಂದನ್ ಫ್ಲರ್ಟ್ ಚಿತ್ರ ರೀ-ರಿಲೀಸ್; ಆದರೆ ಈ ಸಲ ಹೊಸ ಟಚ್ ಬಂದಿದೆ!

ಪ್ರೇಮ ಬರಹ ಚಿತ್ರ (Prema Baraha Movie) ಖ್ಯಾತಿಯ ನಟ ಚಂದನ್‌ ಕುಮಾರ್ (Chandan Kumar) ಮತ್ತೊಂದು ಸಾಹಸ ಮಾಡಿದ್ದಾರೆ. 7 ತಿಂಗಳ ಹಿಂದೆ ಬಂದಿದ್ದ ತಮ್ಮ ಫ್ಲರ್ಟ್ ಚಿತ್ರವನ್ನ (Flirt Movie) ಮತ್ತೊಮ್ಮೆ ತೆರೆಗೆ ತರೋಕೆ ನಿರ್ಧಾರ ಮಾಡಿದ್ದಾರೆ. ಒಳ್ಳೆ ವಿಮರ್ಶೆ ಕೂಡ ಬಂದಿತ್ತು. ಆದರೆ, ಆ ಟೈಮ್ ಅಲ್ಲಿ ಸಾಕಷ್ಟು ಸಿನಿಮಾಗಳು ಬಂದಿದ್ದವು. ಹಾಗಾಗಿಯೇ ಈಗ ಈ ಚಿತ್ರವನ್ನ ಮತ್ತೊಮ್ಮೆ ರಿಲೀಸ್ (Re-Release) ಮಾಡ್ತಾ ಇದ್ದೇವೆ ಅಂತಲೂ ಹೇಳಿಕೊಂಡಿದ್ದಾರೆ. ತಮ್ಮ ಈ ಚಿತ್ರಕ್ಕೆ ಹೊಸ ಸ್ಪರ್ಶವನ್ನು ಕೂಡ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.

ಫ್ಲರ್ಟ್ ಚಿತ್ರಕ್ಕೆ ಹೊಸ ಸ್ಪರ್ಶ

ಫ್ಲರ್ಟ್ ಚಿತ್ರ ಕಳೆದ ವರ್ಷ 2025 ನವೆಂಬರ್-28 ರಂದು ರಿಲೀಸ್ ಆಗಿತ್ತು. ಈ ಚಿತ್ರ ಬಂದು ಈಗ 7 ತಿಂಗಳಾಗುತ್ತದೆ. ಆದರೆ, ಇಷ್ಟು ದಿನಗಳ ಬಳಿಕ ಚಿತ್ರದ ನಾಯಕ, ನಿರ್ದೇಶಕ, ನಿರ್ಮಾಪಕ ಚಂದನ್ ತಮ್ಮ ಈ ಚಿತ್ರವನ್ನ ರೀ-ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
Chandan Kumar Flirt Movie Rereleasing after 7 months soon

ಫ್ಲರ್ಟ್ ಚಿತ್ರಕ್ಕೆ ಹೊಸ ಸ್ಪರ್ಶ

ಈ ಚಿತ್ರವನ್ನ ಟ್ರಿಮ್ ಕೂಡ ಮಾಡಿದ್ದಾರೆ. ಜನರ ಅಭಿಪ್ರಾಯದಂತೆ ಯಾವುದು ಜಾಸ್ತಿ ಅನಿಸ್ತದೋ ಅದನ್ನ ಟ್ರಿಮ್ ಮಾಡಿದ್ದಾರೆ. ಆಗ ಈ ಚಿತ್ರ ಜನರಿಗೆ ರೀಚ್ ಆಗಿರಲಿಲ್ಲ. ಈ ಸಲ ಪಕ್ಕಾ ತಲುಪುತ್ತದೆ ಅನ್ನುವ ನಂಬಿಕೆಯಲ್ಲಿಯೇ ಈ

ಚಿತ್ರವನ್ನ ಮತ್ತೊಮ್ಮೆ ಬಿಡುಗಡೆ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಕಿಚ್ಚನ ಸ್ನೇಹದ ಹಾಡು

ಫ್ಲರ್ಟ್ ಚಿತ್ರದಲ್ಲಿ ಕಿಚ್ಚ ಸುದೀಪ್ ಒಂದು ಹಾಡು ಹಾಡಿದ್ದಾರೆ. ಇದು ಸ್ನೇಹದ ಹಾಡೇ ಆಗಿದೆ. ಈ ಒಂದು ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಮಾಡಿದ್ದಾರೆ. ಆದರೆ, ಇತರ ಮೂರು ಹಾಡುಗಳನ್ನ ಜಸ್ಸಿ ಗಿಫ್ಟ್ ಕಂಪೋಸ್ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಮಾಡಿದ್ದಾರೆ.

ಈ ಚಿತ್ರ ROMCOM ಕಂಟೆಂಟ್ ಹೊಂದಿದೆ. ಪ್ರೀತಿನೂ ಇದೆ. ಹಾಸ್ಯವೂ ಇದೆ. ಎರಡೂ ಇರೋ ಈ ಚಿತ್ರದಲ್ಲಿ ಸ್ನೇಹದ ಗಟ್ಟಿ ಬಾಂಧವ್ಯ ಕೂಡ ಇದೆ.

ಚಂದನ್ ನಮ್ಮ ಮನೆ ಹುಡುಗ

ಕಿಚ್ಚ ಸುದೀಪ್ ಸಪೋರ್ಟ್ ಮಾಡ್ತಾನೇ ಬಂದಿದ್ದಾರೆ. ಈ ಚಿತ್ರಕ್ಕೆ ಆರಂಭದಿಂದಲೂ ಸಾಥ್ ಕೊಟ್ಟಿದ್ದಾರೆ. ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಮಾಡಿದ್ದಾರೆ. ಚಂದನ್ ನಮ್ಮ ಮನೆಯ ಹುಡುಗ ಅಂತಲೂ ಹೇಳಿ ಬೆನ್ನು ತಟ್ಟಿದ್ದಾರೆ.

Chandan Kumar Flirt Movie Rereleasing after 7 months soon

ಈ ಚಿತ್ರ ಯಾವಾಗ ರಿಲೀಸ್

ಚಂದನ್ ಕುಮಾರ್ ಅವರ ಈ ಚಿತ್ರದಲ್ಲಿ ನಿಮಿಕಾ ರತ್ನಾಕರ್ ಅಭಿನಯಿಸಿದ್ದಾರೆ. ಅಕ್ಷತಾ ಬೋಪಣ್ಣ ಸಹ ಈ ಸಿನಿಮಾದ ಮತ್ತೊಬ್ಬ ನಾಯಕಿ ಆಗಿದ್ದಾರೆ.

ದಡಿಯಾ ಗಿರೀಶ್

ಈ ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಇದ್ದಾರೆ. ದಡಿಯಾ ಗಿರಿ ಕೂಡ ನಟಿಸಿದ್ದಾರೆ. ವಿನಯ್ ಗೌಡ, ಸಾಧು ಕೋಕಿಲಾ, ಶ್ರುತಿ ಕೃಷ್ಣ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಎಚ್.ಸಿ.ವೇಣು ಕ್ಯಾಮರಾವರ್ಕ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಫ್ಲರ್ಟ್ ಅನ್ನೋದನ್ನ ಚಂದನ್ ಹೀಗೆ ಅರ್ಥೈಸಿದ್ದಾರೆ. ‘ಫ್ಲರ್ಟ್’ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎಂದೇ ಕರೆಯುತ್ತಾರೆ.

ಈ ಚಿತ್ರ ಯಾವಾಗ ರಿಲೀಸ್

ಚಂದನ್ ತಮ್ಮ ಈ ಚಿತ್ರವನ್ನ ರೀ-ರಿಲೀಸ್ ಮಾಡ್ತಿದ್ದೇವೆ ಅಂತ ಹೇಳಿದ್ದಾರೆ. ಅಧಿಕೃತವಾಗಿಯೇ ಇದನ್ನ ಹೇಳಿಕೊಂಡಿದ್ದಾರೆ. ಆದರೆ, ಯಾವ ದಿನ? ಯಾವ ತಿಂಗಳು ಅಂತ ಇನ್ನು ಹೇಳಿಕೊಂಡಿಲ್ಲ. ಈ ಮೂಲಕ ಫ್ಲರ್ಟ್ ಚಿತ್ರ ಯಾವಾಗ ಬರ್ತದೆ ಅನ್ನುವ ಕುತೂಹಲವನ್ನ ಹುಟ್ಟುಹಾಕಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed