Last Updated:
ವಿನೋದ್ ಪ್ರಭಾಕರ್ ಅಭಿನಯದ ಬಲರಾಮನ ದಿನಗಳು ಈ ವಾರ ತೆರೆ ಕಾಣ್ತಿದೆ. ಸಿಂಪಲ್ ಸುನಿ ಮೋಡ ಕವಿದ ವಾತಾವರಣ ಸಹ ಬರ್ತಿದೆ. ಈ ದಿನ ಕನ್ನಡದ ಇನ್ನು ಮೂರು ಚಿತ್ರಗಳೂ ಇವೆ. ಈ ಎಲ್ಲ ಚಿತ್ರಗಳ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಬಲರಾಮನ ದಿನಗಳು ಚಿತ್ರ (Balaraman Dingalu Movie) ರಿಲೀಸ್ ಆಗುತ್ತಿದೆ. ಮೋಡ ಕವಿದ ವಾತಾವರಣ ಚಿತ್ರವೂ (Moda Kavida Vatavarana Movie) ಬರ್ತಿದೆ. ಇವುಗಳೊಟ್ಟಿಗೆ ಇನ್ನೆರಡು ಸಿನಿಮಾಗಳು ಇವೆ. ಈ ಚಿತ್ರಗಳಲ್ಲಿ ಮೋಡ ಕವಿದ ವಾತಾವರಣವನ್ನ ಸಿಂಪಲ್ ಸುನಿ ಡೈರೆಕ್ಷನ್ (Simple Suni Direction) ಮಾಡಿದ್ದಾರೆ. ನವ ನಾಯಕ ನಟ ಇದರಲ್ಲಿ ಪರಿಚಯ ಆಗುತ್ತಿದ್ದಾರೆ. ಬಲರಾಮನ ದಿನಗಳು ಚಿತ್ರ ಈ ಹಿಂದಿನ ಆ ದಿನಗಳು ಚಿತ್ರದ ಮುಂದುವರೆ ಭಾಗವೇ ಆಗಿದೆ. ಕೆ.ಎಂ.ಚೈತನ್ಯ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ವಿನೋದ್ ಪ್ರಭಾಕರ್ (Vinod Prabhakar) ಈ ಸಿನಿಮಾ ನಾಯಕರಾಗಿದ್ದಾರೆ. ಈ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಲರಾಮನ ದಿನಗಳು..
ಈ ಹಿಂದಿನ ಮಾದೇವ ಇವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಕೆ.ಎಂ.ಚೈತನ್ಯ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಆ ದಿನಗಳು ಚಿತ್ರವನ್ನ ಇವರೇ ನಿರ್ದೇಶನ ಮಾಡಿದ್ದರು. ಈ ಚಿತ್ರ ಬಂದು 19 ವರ್ಷದ ಬಳಿಕ ಈ ಬಲರಾಮನ ದಿನಗಳು ಸಿನಿಮಾ ಮಾಡಿದ್ದಾರೆ.
ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಕೊಟ್ಟಿದ್ದಾರೆ. ಆಲ್ ಓಕೆ ಅಲೋಕ್ ಸಹ ಒಂದು ರಾಪ್ ಶೈಲಿಯ ಹಾಡು ಮಾಡಿಕೊಟ್ಟಿದ್ದಾರೆ.
ಈ ಚಿತ್ರದಲ್ಲಿನಟ ವಿನೋದ್ ಪ್ರಭಾಕರ್ ಅವರಿಗೆ ಪ್ರಿಯಾ ಆನಂದ್ ಜೋಡಿ ಆಗಿದ್ದಾರೆ. ಆ ದಿನಗಳು ಚಿತ್ರದಲ್ಲಿ ಅಭಿನಯಿಸಿದ್ದ ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ ಇದರಲ್ಲೂ ಅಭಿನಯಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ ಸೇರಿದಂತೆ ಇನ್ನು ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಜೂನ್-26 ರಂದು ರಿಲೀಸ್ ಆಗುತ್ತಿದೆ.
ಮೋಡ ಕವಿದ ವಾತಾವರಣ ಚಿತ್ರವನ್ನ ಸಿಂಪಲ್ ಸುನಿ ಡೈರೆಕ್ಷನ್ ಮಾಡಿದ್ದಾರೆ. ಮೋಕ್ಷಾ ಕುಶಾಲ್, ಸಾತ್ವಿಕಾ ಈ ಚಿತ್ರದಲ್ಲಿದ್ದಾರೆ. ಶೀಲಮ್ ಎಂ.ಸ್ವಾಮಿ ಈ ಚಿತ್ರದ ಮೂಲಕವೇ ಹೀರೋ ಆಗುತ್ತಿದ್ದಾರೆ.
ಶೀಲಮ್ ಎಂ.ಸ್ವಾಮಿ ಕಳೆದ 10 ವರ್ಷದಿಂದ ಸಿಂಪಲ್ ಸುನಿ ಜೊತೆಗೆ ಕೆಲಸ ಮಾಡಿದ್ದಾರೆ. ಡೈರೆಕ್ಷನ್ ವಿಭಾಗದಲ್ಲಿ ಕೋ ಡೈರೆಕ್ಟರ್ ಆಗಿಯೇ ದುಡಿದಿದ್ದಾರೆ.
ಮೋಡ ಕವಿದ ವಾತಾವರಣ
ಆದರೆ, ಮೋಡ ಕವಿದ ವಾತಾವರಣ ಚಿತ್ರದ ಕತೆ ಹೊಸಬರನ್ನೆ ಬೇಡಿದೆ. ಅದಕ್ಕೇನೆ ಸಿಂಪಲ್ ಸುನಿ ಶೀಲಮ್ ಅವರನ್ನ ನಾಯಕರನ್ನಾಗಿ ಮಾಡಿದ್ದಾರೆ. ಜುಡಾ ಸ್ಯಾಂಡಿ ಸಂಗೀತ ಕೊಟ್ಟಿದ್ದಾರೆ. ಜೂನ್-26 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ.
ಕನ್ನಡದಲ್ಲಿ ಈ ಜೂನ್-26 ಕ್ಕೆ ಇನ್ನು ಕೆಲವು ಚಿತ್ರ ಬರ್ತಿವೆ. ಅಂಬರದ ಗುಡ್ಡ, ಪಂಚಮುಖಿ, ಗರುಡ ಅನ್ನುವ ಚಿತ್ರ ಬರ್ತಿವೆ. ಈ ಎಲ್ಲ ಚಿತ್ರಗಳಲ್ಲಿ ಬಲರಾಮನ ದಿನಗಳು ಚಿತ್ರದ ಪ್ರಚಾರ ಜೋರಾಗಿದೆ. ವಿನೋದ್ ಪ್ರಭಾಕರ್ ಬ್ಯಾಕ್ ಟು ಬ್ಯಾಕ್ ಪ್ರೆಸ್ ಮೀಟ್ ಮಾಡ್ತಿದ್ದಾರೆ.
ಬಲರಾಮನ ದಿನಗಳು ಹಾಗೂ ಮೋಡ ಕವಿದ ವಾತಾವರಣ ಸಿನಿಮಾ ಒಂದಷ್ಟು ಗಮನ ಸೆಳೆಯುವ ಕೆಲಸ ಮಾಡಿವೆ. ಜೂನ್-26 ಕ್ಕೆ ಈ ಎರಡೂ ಚಿತ್ರಗಳು ಹೇಗಿವೆ ಅನ್ನೋದು ತಿಳಿಯುತ್ತದೆ ಅಂತ ಹೇಳಬಹುದು.
Bangalore [Bangalore],Bangalore,Karnataka













