IPL 2026, GT vs CSK: ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸಿಎಸ್​ಕೆ! ಚೆನ್ನೈಗೆ ಗೆದ್ದರೆಷ್ಟೇ ಉಳಿಗಾಲ | ಕ್ರೀಡಾ ಸುದ್ದಿ | ACTPnews

ಗುಜರಾತ್ ಟೈಟನ್ಸ್ vs ಚೆನ್ನೈ ಸೂಪರ್ ಕಿಂಗ್ಸ್


Last Updated:

ಅಹ್ಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪ್ಲೇಆಫ್​ ರೇಸ್​​​​ನಲ್ಲಿ ಉಳಿಯಬೇಕಾದರೆ ಸಿಎಸ್​ಕೆ ಈ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕಿದೆ.

ಗುಜರಾತ್ ಟೈಟನ್ಸ್ vs ಚೆನ್ನೈ ಸೂಪರ್ ಕಿಂಗ್ಸ್
ಗುಜರಾತ್ ಟೈಟನ್ಸ್ vs ಚೆನ್ನೈ ಸೂಪರ್ ಕಿಂಗ್ಸ್

IPL 2026ರ ಪ್ರಮುಖ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪ್ಲೇಆಫ್​ ರೇಸ್​​​​ನಲ್ಲಿ ಉಳಿಯಬೇಕಾದರೆ ಸಿಎಸ್​ಕೆ ಈ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ನೇರ ಪ್ಲೇಆಫ್ ಗೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಚೆನ್ನೈ ಗೆದ್ದರೂ, ಅದು ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಇದು ಎರಡೂ ತಂಡಗಳಿಗೆ ಕೊನೆಯ ಲೀಗ್ ಪಂದ್ಯವಾಗಿದೆ. ಚೆನ್ನೈ 13 ಪಂದ್ಯಗಳನ್ನು ಆಡಿದ್ದು, 6 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಏಳು ಸೋತಿದೆ.

ಜಿಟಿ ಈಗಾಗಲೇ ಪ್ಲೇಆಫ್​​ಗೆ ಅರ್ಹತೆ ಪಡೆದಿದೆ. ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ಅಗ್ರ ಎರಡರಲ್ಲಿ ಸ್ಥಾನ ಪಡೆಯುವತ್ತ ಅವರ ಕಣ್ಣುಗಳು ನೆಟ್ಟಿವೆ. ಶುಭ್​ಮನ್ ಗಿಲ್ ನೇತೃತ್ವದ ಗುಜರಾತ್ ತಂಡವು 13 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ಪಂದ್ಯಗಳನ್ನು ಗೆದ್ದಿದೆ. ಗುಜರಾತ್ ಪ್ರಸ್ತುತ 16 ಅಂಕಗಳನ್ನು ಹೊಂದಿದ್ದು, ಪಾಯಿಂಟ್ಸ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರೆ, ಆರ್​ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶವೂ ಇದೆ.

ಪಿಚ್ ವರದಿ

ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟ್ಸ್ಮನ್ ಸ್ನೇಹಿಯಾಗಿದೆ. ಕಳೆದ ಬಾರಿ ಈ ಪಿಚ್ ನಲ್ಲಿ ಪಂದ್ಯ ನಡೆದಾಗ ಒಟ್ಟು 414 ರನ್ ಗಳಿಸಲಾಗಿತ್ತು. ವೇಗಿಗಳು ಸಹ ಇಲ್ಲಿ ಸಹಾಯ ಪಡೆಯುತ್ತಾರೆ ಮತ್ತು ಬ್ಯಾಟ್ಸ್ ಮನ್ ಗಳು ನಿಧಾನಗತಿಯ ಚೆಂಡುಗಳಿಂದ ಸಮಸ್ಯೆಗೆ ಒಳಗಾಗುತ್ತಾರೆ.

ಹೆಡ್​ ಟು ಹೆಡ್ ದಾಖಲೆ

ಎರಡೂ ತಂಡಗಳು ಇಲ್ಲಿಯವರೆಗೆ  9 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಗುಜರಾತ್ ಟೈಟನ್ಸ್ 5 ರಲ್ಲಿ ಗೆಲುವು ಪಡೆದಿದ್ದರೆ, ಚೆನ್ನೈ  ಸೂಪರ್ ಕಿಂಗ್ಸ್​ 4ರಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಗೆಲುವು ಪಡೆದರೆ ಎರಡೂ ತಂಡಗಳ ಮುಖಾಮುಖಿ ದಾಖಲೆ ಸಮಬಲವಾಗಲಿದೆ.

ಪ್ಲೇಯಿಂಗ್ ಇಲೆವೆನ್​​

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್(ವಿಕೀ), ರುತುರಾಜ್ ಗಾಯಕ್ವಾಡ್(ನಾಯಕ), ಉರ್ವಿಲ್ ಪಟೇಲ್, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಮ್ಯಾಥ್ಯೂ ಶಾರ್ಟ್, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಸ್ಪೆನ್ಸರ್ ಜಾನ್ಸನ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್

ಗುಜರಾತ್ ಟೈಟನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೀ), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಅರ್ಷದ್ ಖಾನ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports