Last Updated:
ಮಿಚೆಲ್ ಓವನ್ ಅವರ ಅದ್ಭುತ ಶತಕದಿಂದಾಗಿ, ವಾಷಿಂಗ್ಟನ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳ ಕಳೆದುಕೊಂಡು 245 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು.
ಆಸ್ಟ್ರೇಲಿಯಾದ (Australia) ಆಲ್ರೌಂಡರ್ ಮಿಚೆಲ್ ಓವನ್ (Mitchell Owen) ತಮ್ಮ ವಿಧ್ವಂಸಕ ಬ್ಯಾಟಿಂಗ್ನಿಂದ ಮೇಜರ್ ಲೀಗ್ ಕ್ರಿಕೆಟ್ನಲ್ಲಿ (Major League Cricket) ಸಂಚಲನ ಸೃಷ್ಟಿಸಿದ್ದಾರೆ. ವಾಷಿಂಗ್ಟನ್ ಫ್ರೀಡಂ (Washington Freedom) ಪರ ಆಡುವ ಓವನ್, ಟೂರ್ನಮೆಂಟ್ನ ಐದನೇ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ (MI Newyork) ವಿರುದ್ಧ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು, 155 ರನ್ ಬಾರಿಸಿದ್ದಾರೆ. 68 ಎಸೆತಗಳನ್ನು ಎದುರಿಸಿದ ಓವನ್, 13 ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಬಾರಿಸಿದ್ದಾರೆ. ಇದು MLC ಇತಿಹಾಸದಲ್ಲಿ ಬ್ಯಾಟ್ಸ್ಮನ್ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ.
ಭಾನುವಾರ (ಜೂನ್ 21) ಡಲ್ಲಾಸ್ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಿಚೆಲ್ ಓವನ್ ಆರಂಭದಿಂದಲೇ ಎಂಐ ನ್ಯೂಯಾರ್ಕ್ ಬೌಲರ್ಗಳ ಚೆಂಡಾಡಲು ಶುರು ಮಾಡಿದರು. ಮಿಚೆಲ್ ಓವನ್ ಅವರ ಅದ್ಭುತ ಶತಕದಿಂದಾಗಿ, ವಾಷಿಂಗ್ಟನ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳ ಕಳೆದುಕೊಂಡು 245 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು.
What a knock for Mitch Owen ☄️ His record-breaking 155 (68) earns him a well-deserved Player of the Match award here in Grand Prairie. 🏆
👉 13 sixes
👉 11 fours
👉 227.94 strike rate pic.twitter.com/rt9tt9TIKx
— Cognizant Major League Cricket (@MLCricket) June 21, 2026
ಇನ್ನು, ಈ ಇನ್ನಿಂಗ್ಸ್ ಮಿಚೆಲ್ ಓವನ್ ಅವರಿಗೆ ವಿಶೇಷವಾಗಿತ್ತು, ಏಕೆಂದರೆ ಕಳೆದ 16 ತಿಂಗಳಲ್ಲಿ ಬಳಿಕ ಮೊದಲ ಶತಕ ಸಿಡಿಸಿದ್ದಾರೆ. ಈ ವರ್ಷದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಋತುವಿನ ಕಳಪೆ ಫಾರ್ಮ್ನಿಂದಾಗಿ ಅವರನ್ನು ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲಾಗಿತ್ತು. ಇದೀಗ ಶತಕ ಬಾರಿಸುವ ಮೂಲಕ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಇನ್ನಿಂಗ್ಸ್ನೊಂದಿಗೆ, ಮಿಚೆಲ್ ಓವನ್ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಆರನ್ ಫಿಂಚ್ ನಂತರ ಎರಡನೇ ಸ್ಥಾನವನ್ನು ತಲುಪಿದ್ದಾರೆ. ಮಿಚೆಲ್ ಓವನ್ ಅವರ ಅಬ್ಬರದ ಶತಕದ ನೆರವಿನಿಂದ ವಾಷಿಂಗ್ಟನ್ ಫ್ರೀಡಂ 5 ವಿಕೆಟ್ಗೆ 245 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, MI ನ್ಯೂಯಾರ್ಕ್ 6 ವಿಕೆಟ್ಗೆ 215 ರನ್ ಗಳಿಸಿ 30 ರನ್ಗಳಿಂದ ಸೋಲು ಅನುಭವಿಸಿದೆ.
ಇನ್ನು, ಇದೇ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ಪರ ಕೀರನ್ ಪೊಲಾರ್ಡ್ 56 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರು. 246ರ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಪೊಲಾರ್ಡ್ ಅಜೇಯ 100 ರನ್ ಗಳಿಸಿದರು. ಈ ಇನ್ನಿಂಗ್ಸ್ ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಲು ನೆರವಾಯಿತು. ಕೀರನ್ ಪೊಲಾರ್ಡ್ ಅವರ ಅಜೇಯ ಶತಕವು ಅವರನ್ನು ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನನ್ನಾಗಿ ಮಾಡಿದೆ. ಪೊಲಾರ್ಡ್ ತಮ್ಮ ದೇಶದ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಗೇಲ್ ಟಿ20 ಪಂದ್ಯಗಳಲ್ಲಿ 14,562 ರನ್ ಗಳಿಸಿದ್ದರು. ಇದೀಗ ಕೀರನ್ ಪೊಲಾರ್ಡ್ ಈಗ 14,582 ರನ್ ಗಳಿಸಿದ್ದಾರೆ.













