IPL Season 20ರ ಡೇಟ್‌ ರಿವೀಲ್‌! ಕ್ರಿಕೆಟ್‌ ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್ ಕೊಟ್ಟೇ ಬಿಡ್ತು ಬಿಸಿಸಿಐ! | | ACTPnews

ಸಾಂಕೇತಿಕ ಚಿತ್ರ


Last Updated:

ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಸರ್ಪ್ರೈಸ್ ಕೊಟ್ಟಿದೆ. ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಭಾರಿ ಬದಲಾವಣೆಗೆ ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಕಳೆದ ಕೆಲ ದಿನಗಳ ಹಿಂದೆಷ್ಟೇ 2026 ಐಪಿಎಲ್ (Indian Premier League)​ ಟೂರ್ನ್​ಮೆಂಟ್​ಗೆ ಅದ್ಧೂರಿ ತೆರೆಬಿದ್ದಿತ್ತು. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು (Royal Challengers Bengaluru) ತಂಡ ಸತತ ಎರಡನೇ ಬಾರಿಗೆ ಕಪ್​​ ಗೆದ್ದು ಬೀಗಿತ್ತು. ಈ ಸಂತಸ ಮಾಸುವ ಮುನ್ನವೇ ಕ್ರಿಕೆಟ್​ ಅಭಿಮಾನಿಗಳಿಗೆ ಬಿಸಿಸಿಐ (BCCI) ಸರ್ಪ್ರೈಸ್​​​​ ಕೊಟ್ಟಿದೆ. ಮುಂದಿನ ಐಪಿಎಲ್ ಆವೃತ್ತಿಯಲ್ಲಿ (IPL Season) ಭಾರಿ ಬದಲಾವಣೆಗೆ ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಪಿಎಲ್ 2027 ರ ಬಗ್ಗೆ ಬಿಸಿಸಿಐ ಪ್ರಮುಖ ಘೋಷಣೆ ಮಾಡಿದೆ. ಮೇ ತಿಂಗಳಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಉಂಟಾಗುವ ತೀವ್ರ ಬಿಸಿಲನ್ನು ತಪ್ಪಿಸಲು ಮುಂದಿನ ವರ್ಷ ಮಾರ್ಚ್ 10 ರಿಂದ ಮೇ 15 ರವರೆಗೆ ಲೀಗ್ ಅನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಈ ಬಗ್ಗೆ ಬಿಸಿಸಿಐನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಹಿತಿ ನೀಡಿದ್ದಾರೆ.

ಮುಂದಿನ ವರ್ಷದಿಂದ ಐಪಿಎಲ್​ ಪಂದ್ಯಾವಳಿಯನ್ನು ಮೊದಲೇ ಪ್ರಾರಂಭಿಸಲು ಪ್ರಯತ್ನಿಸುತ್ತೇವೆ. ಮಾರ್ಚ್ 10 ರೊಳಗೆ ಟೂರ್ನಮೆಂಟ್ ಪ್ರಾರಂಭಿಸಿ ಮೇ 15 ರೊಳಗೆ ಮುಗಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸುವಂತೆ ನಮ್ಮ ಜನರಲ್ ಮ್ಯಾನೇಜರ್ (ಗೇಮ್ ಡೆವಲಪ್‌ಮೆಂಟ್) (ಮಾಜಿ ವೇಗದ ಬೌಲರ್ ಎಬಿ ಕುರುವಿಲ್ಲಾ) ಅವರಿಗೆ ಸೂಚಿಸಿದ್ದೇವೆ” ಎಂದು ಸೈಕಿಯಾ ಹೇಳಿದರು.

ಇನ್ನು ಇದೇ ವೇಳೆ ಐಪಿಎಲ್ ಪಂದ್ಯಗಳ ಸಮಯದಲ್ಲಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಸಿಲಿನ ಬಗ್ಗೆ ಆಟಗಾರರು ಮತ್ತು ಅಭಿಮಾನಿಗಳಿಂದ ದೂರುಗಳು ಬಂದಿವೆ ಎಂದು ಸೈಕಿಯಾ ಮಾಹಿತಿ ನೀಡಿದರು. ನಾವು ವಿವಿಧ ದೇಶಗಳಿಂದ ಬರುವ ಆಟಗಾರರಿಗೆ ಸಂಬಂಧಿಸಿದ ಇತರ ಹಲವು ವಿಷಯಗಳನ್ನು ಪರಿಗಣಿಸಬೇಕಾಗಿದೆ.

ಪಂದ್ಯಗಳ ಸಂಖ್ಯೆ ಹೆಚ್ಚಿಸುವ ಯಾವುದೇ ಸಾಧ್ಯತೆ ಇಲ್ಲ

ಇತರ ದೇಶಗಳು ಸಹ ಬೇರೆ ಬೇರೆ ಪಂದ್ಯಗಳನ್ನು ಆಡಬೇಕಾಗಿರುವುದರಿಂದ ಐಪಿಎಲ್​ ಅನ್ನು ಎರಡು ತಿಂಗಳು ಮೀರಿ ವಿಸ್ತರಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಆದ್ದರಿಂದ, ಪಂದ್ಯಗಳ ಸಂಖ್ಯೆಯನ್ನು 74 ರಿಂದ 94 ಕ್ಕೆ ಹೆಚ್ಚಿಸುವ ಬಗ್ಗೆ ಯಾವದೇ ಚರ್ಚೆ ಆಗಿಲ್ಲ ಎಂದು ಕಾರ್ಯದರ್ಶಿ ಸೈಕಿಯಾ ಅವರು ಸ್ಪಷ್ಟನೆ ನೀಡಿದರು.

ಮುಂಬರುವ ವರ್ಷಗಳಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂದು ತಿಳಿದಿಲ್ಲ, ಆದರೆ ಈ ಸಮಯದಲ್ಲಿ ಪಂದ್ಯಗಳ ಸಂಖ್ಯೆಯನ್ನು 74 ರಿಂದ 94 ಕ್ಕೆ ಹೆಚ್ಚಿಸುವ ಯಾವುದೇ ಸಾಧ್ಯತೆ ನನಗೆ ಕಾಣುತ್ತಿಲ್ಲ, ಏಕೆಂದರೆ ಇದಕ್ಕೆ ಭಾರತದಿಂದ ಮಾತ್ರವಲ್ಲದೆ ಐಸಿಸಿಯ ಇತರ ಕ್ರಿಕೆಟ್ ಆಡುವ ರಾಷ್ಟ್ರಗಳಾದ ವಿಶೇಷವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್‌ನ ಆಟಗಾರರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed