Last Updated:
ನಟಿ ಶರ್ಮಿಳಾ ಮಾಂಡ್ರೆ ಮದುವೆ ಸುದ್ದಿ ಹೊರಬಿದ್ದ ಕೂಡಲೇ ನಿರ್ದೇಶಕ ಹಾಗೂ ನಟ ಪವನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ (Actress Sharmila Mandre) ಅವರ ಮದುವೆ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ . ಬಹುಕಾಲದಿಂದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಶರ್ಮಿಳಾ, ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಆದ್ರೆ ಈ ಸುದ್ದಿಯ ನಡುವೆ ನಿರ್ದೇಶಕ, ನಟ ಪವನ್ ಕುಮಾರ್ (Pawan Kumar) ಶೇರ್ ಮಾಡಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಏನಪ್ಪಾ ವಿಚಾರ ಅಂತೀರಾ ಹಾಗಾದ್ರೆ ಕಂಪ್ಲೀಟ್ ಸ್ಟೋರಿ ಓದಲೇ ಬೇಕು.
ಹೌದು ನಟಿ ಶರ್ಮಿಳಾ ಮಾಂಡ್ರೆ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಅಧಿಕೃತ ಘೋಷಣೆ ಇನ್ನೂ ಹೊರಬರದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅನೇಕ ವರದಿಗಳು ಹರಿದಾಡುತ್ತಿವೆ.
ಶರ್ಮಿಳಾ ಅವರ ಮದುವೆ ಸುದ್ದಿ ಹೊರಬಿದ್ದ ಕೂಡಲೇ ನಿರ್ದೇಶಕ ಹಾಗೂ ನಟ ಪವನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಆ ವಿಡಿಯೋ ನೋಡಿದವರಿಗೆ ನಿಜವಾಗಿಯೂ ಪವನ್ ಅವರಿಗೆ ಬೇಸರವಾಗಿದೆಯೇ ಎಂಬ ಅನುಮಾನ ಮೂಡುದು ಮಾತ್ರ ಪಕ್ಕಾ. ಆದರೆ ಆ ಬಳಿಕ ವಿಡಿಯೋ ಮುಂದುವರಿದಂತೆ ಇದು ತಮಾಷೆಯ ಉದ್ದೇಶದಿಂದ ಮಾಡಿರುವ ಪೋಸ್ಟ್ ಎಂಬುದು ಗೊತ್ತಾಗುತ್ತದೆ.
ಈ ಫನ್ನಿ ವಿಡಿಯೋ ಹಿಂದೆ ಒಂದು ಸಿನಿಮಾ ಕನೆಕ್ಷನ್ ಕೂಡ ಇದೆ. ನಿರ್ದೇಶಕ ಯೋಗರಾಜ್ ಭಟ್ ಅವರ ‘ಗಾಳಿಪಟ 2’ ಸಿನಿಮಾದಲ್ಲಿ ಪವನ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಒಟ್ಟಿಗೆ ನಟಿಸಿದ್ದರು. ಆ ಚಿತ್ರದಲ್ಲಿ ಪವನ್ ಅವರ ಪಾತ್ರ ಶರ್ಮಿಳಾ ಅವರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿಯಾಗಿರುತ್ತದೆ.
ಆದರೆ ಕಥೆಯಲ್ಲಿ ಶರ್ಮಿಳಾ ಪಾತ್ರ ಮತ್ತೊಬ್ಬರನ್ನು ಮದುವೆಯಾಗುವುದರಿಂದ ಪವನ್ ಪಾತ್ರದ ಹೃದಯ ಒಡೆಯುತ್ತದೆ. ಇದೇ ಕಥೆಯನ್ನು ನೆನಪಿಸಿಕೊಂಡು ಈಗ ನಿಜ ಜೀವನದ ಘಟನೆಯೊಂದಿಗೆ ಜೋಡಿಸಿ ಪವನ್ ಕುಮಾರ್ ಈ ತಮಾಷೆಯ ವಿಡಿಯೋವನ್ನು ಮಾಡಿದ್ದಾರೆ.
ಪವನ್ ಕುಮಾರ್ ಅವರ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ತಮಾಷೆಯಾದ ಪ್ರಕಾಮೆಂಟ್ ಗಳು ಹರಿದು ಬಂದಿದೆ . ಹಲವರು ‘ಗಾಳಿಪಟ 2’ ಚಿತ್ರದ ಸನ್ನಿವೇಶಗಳನ್ನು ನೆನಪಿಸಿಕೊಂಡಿದ್ದಾರೆ.
ಯಾರಾದ್ರೂ ಅರ್ಜೆಂಟ್ ಆಗಿ ಗಣೇಶ್ ಅವರನ್ನು ಭೇಟಿ ಮಾಡಿ, ಯೋಗರಾಜ್ ಭಟ್ರಿಗೆ ಕಾಲ್ ಮಾಡಿ ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದು, ಸಾಕಷ್ಟು ಜನರ ಗಮನ ಸೆಳೆದಿದೆ. ಇನ್ನೂ ಹಲವರು ಸಿನಿಮಾ ಕಥೆ ಮತ್ತು ನಿಜ ಜೀವನದ ಘಟನೆಯನ್ನು ಹೋಲಿಸಿ ಫನ್ನಿ ಮೀಮ್ಸ್ ಹಾಗೂ ಕಾಮೆಂಟ್ಸ್ ಹಂಚಿಕೊಳ್ಳುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಲವು ಯಶಸ್ವಿ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಶರ್ಮಿಳಾ ಮಾಂಡ್ರೆ, ತಮ್ಮ ಅಭಿನಯ ಮತ್ತು ಗ್ಲಾಮರ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ಅವರು ಸೈ ಎನಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಶರ್ಮಿಳಾ ಮಾಂಡ್ರೆ ಇದೀಗ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.
Bangalore [Bangalore],Bangalore,Karnataka













