Last Updated:
ಫಾದರ್ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ. ಆದರೆ, ಅದಕ್ಕೂ ಮೊದಲೇ ಟೀಸರ್ ಬರ್ತಿದೆ. ಅದರ ಬೆನ್ನಲ್ಲಿಯೇ ಸಿನಿಮಾದ ಬಗ್ಗೆ ಪಾಸಿಟಿವ್ ಟಾಕ್ ಶುರು ಆಗಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಫಾದರ್ ಚಿತ್ರದ (Father Movie) ಬಗ್ಗೆ ಒಳ್ಳೆ ಮಾತು ಕೇಳಿ ಬರ್ತಿದೆ. ಚಿತ್ರ ಇನ್ನು ರಿಲೀಸ್ ಆಗಿಲ್ಲ. ಆದರೆ, ಚಿತ್ರ ನೋಡಿದವರು ಇದನ್ನ ಮೆಚ್ಚಿಕೊಂಡಿದ್ದಾರೆ. ಅಲ್ಲಿಂದಲೇ ಪಾಸಿಟಿವ್ ಟಾಕ್ ಶುರು ಆಗಿದೆ. ಈ ಮೂಲಕ ಚಿತ್ರದ ಟೀಸರ್ (Movie Teaser) ಬಗ್ಗೆ ಹೆಚ್ಚಿನ ಕುತೂಹಲ ಶುರು ಆಗಿದೆ. ಪ್ರಕಾಶ್ ರಾಜ್ (Prakash Raj) ಅಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಮಗನ ರೋಲ್ ಅಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಇದ್ದಾರೆ. ಇವರ ಸಿನಿಮಾದ ಟೀಸರ್ ಕೂಡ ಶೀಘ್ರದಲ್ಲಿಯೇ ರಿಲೀಸ್ ಆಗೋದು ಇದೆ.














