ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸುನೀತಾ ಅಹುಜಾ ತಮ್ಮ ವೈಯಕ್ತಿಕ ಜೀವನ, ಕುಟುಂಬ ಹಾಗೂ ಪತಿ ಗೋವಿಂದ ಅವರ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಗೋವಿಂದ ಅವರ ಯೌವನದ ದಿನಗಳನ್ನು ನೆನಪಿಸಿಕೊಂಡ ಅವರು, ಆ ಕಾಲದಲ್ಲಿ ಗೋವಿಂದ ತುಂಬಾ ಹ್ಯಾಂಡ್ ಸಮ್ ಆಗಿ ಕಾಣುತ್ತಿದ್ದರು ಎಂದು ಹೇಳಿದ್ದಾರೆ.
Govinda’s Wife: “Kya maal tha Chichi 90s me!!
Male Feminist Vadapaw: “Haan, ekdum maal tha. Govinda ke ghungrale baal bhi mast the.”Govinda’s Wife: “Haan, achhe toh lagte the, lekin tab asli baal the. Ab toh patch (wig) lagate hain.” (laughs)
Is this really the way to talk… pic.twitter.com/tM4IUuFI3I
— Amit Kumar Sindhi (@AMIT_GUJJU) June 16, 2026
ಇನ್ನು ಹೀಗೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ಸುನೀತಾ ಅಹುಜಾ , ಬಿಗ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ. ಗೋವಿಂದ ಅವರ ಕೂದಲಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುನೀತಾ, ಅವರು ಈಗ ಹೇರ್ ಪ್ಯಾಚ್ ಅಥವಾ ನಕಲಿ ಕೂದಲನ್ನು ಬಳಸುತ್ತಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇಂದಿನ ಕಾಲದಲ್ಲಿ ಚಿತ್ರರಂಗದ ಅನೇಕ ಕಲಾವಿದರು ತಮ್ಮ ಲುಕ್ ಕಾಪಾಡಿಕೊಳ್ಳಲು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ ಎಂದು ಹೇಳಿದ್ದಾರೆ.
ಹೇರ್ ಪ್ಯಾಚ್, ಹೇರ್ ಟ್ರಾನ್ಸ್ಪ್ಲಾಂಟ್ ಸಾಮಾನ್ಯವಾಗಿದ್ದು, ಇದನ್ನುಇದನ್ನು ಮುಚ್ಚಿಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅವರ ಈ ಮುಕ್ತ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಾಗೆಯೇ ಕೇವಲ ಪುರುಷರು ಮಾತ್ರವಲ್ಲ, ಮಹಿಳೆಯರೂ ಕೂಡ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ವಿವಿಧ ರೀತಿಯ ಬ್ಯೂಟಿ ತಂತ್ರಗಳನ್ನು ಬಳಸುತ್ತಾರೆ. ಹೇರ್ ಎಕ್ಸ್ಟೆನ್ಷನ್ ಹಾಗೂ ಇತರೆ ಸೌಂದರ್ಯ ಚಿಕಿತ್ಸೆಗಳು ಈಗ ಸಾಮಾನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷವಾಗಿ ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ತಮ್ಮ ಲುಕ್ ಕಾಪಾಡಿಕೊಳ್ಳುವುದು ವೃತ್ತಿಯ ಒಂದು ಭಾಗವಾಗಿರುವುದರಿಂದ, ಇಂತಹ ವಿಧಾನಗಳನ್ನು ಅನುಸರಿಸುವುದು ಸಹಜ ಸುನೀತಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಸುನೀತಾ, ತಮ್ಮ ಕುಟುಂಬ ಜೀವನ ಸುಖವಾಗಿಯೇ ಇದೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ಜೊತೆಗೆ ಇಬ್ಬರ ನಡುವೆ ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
1987ರಲ್ಲಿ ವಿವಾಹವಾದ ಗೋವಿಂದ ಮತ್ತು ಸುನೀತಾ ಅಹುಜಾ ಬಾಲಿವುಡ್ನ ದೀರ್ಘಕಾಲದ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ. ಹಲವು ದಶಕಗಳ ದಾಂಪತ್ಯ ಜೀವನದಲ್ಲಿ ಇಬ್ಬರೂ ಪರಸ್ಪರ ಬೆಂಬಲ ನೀಡುತ್ತಾ ಬಂದಿದ್ದಾರೆ.
ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ನರ್ಮದಾ ಅಹುಜಾ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಮಗ ಯಶವರ್ಧನ್ ಅಹುಜಾ ಕೂಡ ಶೀಘ್ರದಲ್ಲೇ ಬಾಲಿವುಡ್ಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಈ ಹಿಂದೆ ಕ್ಯಾಮೆರಾಗಳಿಂದ ದೂರವಿದ್ದ ಸುನೀತಾ ಅಹುಜಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ವಿವಿಧ ಸಂದರ್ಶನಗಳು, ಕಾರ್ಯಕ್ರಮಗಳು ಹಾಗೂ ಪಾಡ್ಕಾಸ್ಟ್ಗಳಲ್ಲಿ ಭಾಗವಹಿಸುತ್ತಿರುವ ಅವರು ತಮ್ಮ ನೇರ ಮಾತುಗಳಿಂದಲೇ ಜನರ ಗಮನ ಸೆಳೆಯುತ್ತಿದ್ದಾರೆ.












