Viral News: 172 ಕೋಟಿ ಕೊಟ್ಟು ಬಂಗ್ಲೆ ಖರೀದಿಸಿದ, ಆಮೇಲೆ ಡೆಮಾಲಿಷ್ ಮಾಡಿದ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Viral News: 172 ಕೋಟಿ ಕೊಟ್ಟು ಬಂಗ್ಲೆ ಖರೀದಿಸಿದ, ಆಮೇಲೆ ಡೆಮಾಲಿಷ್ ಮಾಡಿದ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


ಹೌದು, 2023ರ ಮಾರ್ಚ್‌ನಲ್ಲಿ ಸುಮಾರು 13.5 ಮಿಲಿಯನ್ ಪೌಂಡ್ ಅಂದರೆ 172 ಕೋಟಿ ರೂಪಾಯಿಗೆ ಒಂದು ಹಳೆಯ ಬಂಗಲೆಯನ್ನು ಖರೀದಿಸಿದ ಟಾಮ್ ಗ್ಲಾನ್ಫೀಲ್ಡ್ (Tom Glanfield) ಅವರು, ಈಗ ಅದನ್ನು ಸಂಪೂರ್ಣ ಕೆಡವಿ ತಮ್ಮ ಕನಸಿನ ಅರಮನೆ ಕಟ್ಟಲು ಹೊರಟಿದ್ದಾರೆ. ಸ್ಥಳೀಯರು ಇದನ್ನು ಹುಚ್ಚುತನ ಎಂದರೆ, ಅವರು ಇದನ್ನು ದೂರದೃಷ್ಟಿ ಎನ್ನುತ್ತಾರೆ.

ಸ್ಯಾಂಡ್ಬ್ಯಾಂಕ್ಸ್ ಎಂದರೇನು?

ಈ ಘಟನೆ ನಡೆದಿರುವುದು ಡಾರ್ಸೆಟ್‌ನ ಪೂಲ್ ಹಾರ್ಬರ್‌ನಲ್ಲಿರುವ ಸ್ಯಾಂಡ್ಬ್ಯಾಂಕ್ಸ್ ದ್ವೀಪದಲ್ಲಿ. ಇದನ್ನು ಬ್ರಿಟನ್ನಿನ ಮಿಯಾಮಿ ಬೀಚ್ ಎನ್ನುತ್ತಾರೆ. ಇಲ್ಲಿ ಹ್ಯಾರಿ ರೆಡ್ನಾಪ್, ಗ್ರೀಮ್ ಸೌನೆಸ್‌ರಂತಹ ಸೆಲೆಬ್ರಿಟಿಗಳ ಮನೆಗಳಿವೆ. ಟಾಮ್ ಖರೀದಿಸಿದ ಆಸ್ತಿಯ ಹೆಸರು ನಾರ್ತ್ ಹೇವನ್ ಪಾಯಿಂಟ್. ಇದು 1.4 ಎಕರೆ ವಿಸ್ತೀರ್ಣದ ಕಾರ್ನರ್ ಪ್ಲಾಟ್, 270 ಡಿಗ್ರಿ ಸಮುದ್ರ ನೋಟ ಹೊಂದಿದೆ. 1906ರಲ್ಲಿ ಪ್ರಸಿದ್ಧ ಸಸ್ಯಶಾಸ್ತ್ರಜ್ಞ ಸರ್ ಜೋಸೆಫ್ ಡಾಲ್ಟನ್ ಹೂಕರ್ ಕೇವಲ 1,000 ಪೌಂಡ್‌ಗೆ ಈ ಜಮೀನು ಖರೀದಿಸಿದ್ದರು. 117 ವರ್ಷಗಳ ಕಾಲ ಅದೇ ಕುಟುಂಬದಲ್ಲಿದ್ದ ಈ ಮನೆ 1950ರಲ್ಲಿ ವಿಸ್ತರಿಸಲ್ಪಟ್ಟಿತ್ತು.

172 ಕೋಟಿ ಕೊಟ್ಟರೂ ಏಕೆ ಕೆಡವಿದರು?

ಹೊರಗಿನಿಂದ ಸುಂದರವಾಗಿ ಕಾಣುತ್ತಿದ್ದ ಈ ಬಂಗಲೆಯ ಒಳಗೆ ಸಮಸ್ಯೆಗಳ ಗುಡ್ಡವೇ ಇತ್ತು. ಟಾಮ್ ಪರಿಶೀಲಿಸಿದಾಗ ಮೇಲ್ಛಾವಣಿ ಸೋರುತ್ತಿತ್ತು, ಗೋಡೆಗಳಲ್ಲಿ ಅಚ್ಚು, ಹಳೆಯ ಎಣ್ಣೆ ಆಧಾರಿತ ತಾಪನ ವ್ಯವಸ್ಥೆ, ಅಪಾಯಕಾರಿ ಆಸ್ಬೆಸ್ಟಾಸ್ ಕೂಡ ಪತ್ತೆಯಾಯಿತು. ಒಟ್ಟು ವಿಸ್ತೀರ್ಣ ಕೇವಲ 2,909 ಚದರ ಅಡಿ. ಪ್ರತಿ ಚದರ ಅಡಿಗೆ 4,640 ಪೌಂಡ್ ಬೆಲೆ ತೆತ್ತರೂ, ಇದು ವಾಸಕ್ಕೆ ಯೋಗ್ಯವಲ್ಲ, ಸಾವಿನ ಮನೆ ಎಂದು ಅವರು ಹೇಳಿದ್ದಾರೆ. ಡೈಲಿ ಮೇಲ್ ವರದಿಯ ಪ್ರಕಾರ, ಇದನ್ನು ದುರಸ್ತಿ ಮಾಡುವುದಕ್ಕಿಂತ ಹೊಸದಾಗಿ ಕಟ್ಟುವುದೇ ಉತ್ತಮ ಎಂದು ಅವರು ನಿರ್ಧರಿಸಿದರು.

ಹಾಗಾದ್ರೆ, ಹೊಸ ಕನಸಿನ ಮನೆ ಹೇಗಿರಲಿದೆ?

ಟಾಮ್ ಈಗ ಸುಮಾರು 7 ರಿಂದ 8.5 ಮಿಲಿಯನ್ ಪೌಂಡ್ ಅಂದರೆ 110 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದಾರೆ. ಇದು ಸ್ಯಾಂಡ್ಬ್ಯಾಂಕ್ಸ್‌ನ ಬಿಳಿ ಗಾಜಿನ ಮಹಲುಗಳಂತೆ ಇರುವುದಿಲ್ಲ. ಮರಗಳ ನಡುವೆ ಇರುವ ಮನೆ ಎಂಬ ಪರಿಕಲ್ಪನೆಯಲ್ಲಿ ವಿನ್ಯಾಸಗೊಂಡಿದೆ. ಒಟ್ಟು 6,350 ಚದರ ಅಡಿ ವಿಸ್ತೀರ್ಣ, ಐದು ಮಲಗುವ ಕೋಣೆಗಳು, ಮೊದಲ ಮಹಡಿಯಲ್ಲಿ ಸಮುದ್ರ ನೋಟದ ಜಕುಝಿ, ಡ್ರೆಸ್ಸಿಂಗ್ ರೂಮ್, ಖಾಸಗಿ ಬಾಲ್ಕನಿ ಇರುವ ಮಾಸ್ಟರ್ ಸೂಟ್ ಇರಲಿದೆ. ಕೆಳಗೆ ವಿಶಾಲ ಓಪನ್ ಕಿಚನ್, ಡಬಲ್ ಎತ್ತರದ ಲಿವಿಂಗ್ ರೂಮ್, ಹೋಮ್ ಆಫೀಸ್, ವೈನ್ ಸ್ಟೋರ್, ಎಂಟರ್‌ಟೈನ್‌ಮೆಂಟ್ ಬಾರ್ ಇರುತ್ತದೆ. ಬೇಸ್‌ಮೆಂಟ್‌ನಲ್ಲಿ ಸಿನಿಮಾ ಕೊಠಡಿ, ಜಿಮ್, ಶವರ್ ರೂಮ್ ಇರಲಿದೆ.

ಇದನ್ನೂ ಓದಿ: FIFA World Cup 2026: ಇದು ವಿಶ್ವದ ಅತ್ಯಂತ ದುಬಾರಿ ಕಪ್‌! ಫಿಫಾ ವಿಶ್ವಕಪ್ ಟ್ರೋಫಿ‌ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!

ಏತನ್ಮಧ್ಯೆ, ಎರಡು ವರ್ಷಗಳ ಕಾಲ ಯೋಜನೆಗೆ ಸ್ಥಳೀಯ ಕೌನ್ಸಿಲ್ ವಿರೋಧ ವ್ಯಕ್ತಪಡಿಸಿತ್ತು. ಆದರೆ ಕೊನೆಗೆ ಪರಿಸರ ಪ್ರಯೋಜನಗಳ ಕಾರಣ ಅನುಮತಿ ಸಿಕ್ಕಿತು. ಟಾಮ್ ಹೇಳುವ ಪ್ರಕಾರ, ನಾನು ಇಲ್ಲಿ ಫ್ಲಾಟ್ ಕಟ್ಟಿ ಮಾರುವವನಲ್ಲ. ಇದು ನನ್ನ ಕನಸಿನ ಮನೆ, ನಾನು ಬಹುಶಃ ಇಲ್ಲಿಯೇ ಕೊನೆಯುಸಿರೆಳೆಯುತ್ತೇನೆ. ಹಾಗಾಗಿ ಇದನ್ನು ವಿಶೇಷವಾಗಿಸಬೇಕು. 20 ವರ್ಷಗಳ ಹಿಂದೆ ವಿದ್ಯಾರ್ಥಿ ಸಾಲದಿಂದ ರಿಕ್ರೂಟ್ಮೆಂಟ್ ಕಂಪನಿ ಆರಂಭಿಸಿದ ಟಾಮ್ ಇಂದು ಲಂಡನ್, ಬರ್ಲಿನ್, ನ್ಯೂಯಾರ್ಕ್‌ನಲ್ಲಿ 450ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದ್ದಾರೆ.

ಒಟ್ಟಾರೆಯಾಗಿ, ಈ ಕಥೆ ಹಣದ ಹುಚ್ಚಲ್ಲ, ಹಳೆಯದನ್ನು ಉಳಿಸಿಕೊಳ್ಳುವುದಕ್ಕಿಂತ ಭವಿಷ್ಯಕ್ಕಾಗಿ ಸರಿಯಾದದ್ದನ್ನು ಕಟ್ಟುವ ಧೈರ್ಯದ ಕಥೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed