Last Updated:
ತನ್ನ ಯಶಸ್ಸಿಗೆ ತನ್ನ ಕುಟುಂಬವೇ ಆಕೆಗೆ ಶಕ್ತಿ ಎಂದು ಹೇಳಿದ್ದಾರೆ ಹಾಗೂ ತನ್ನ ಕಾಲೇಜು ಸಹ ಸಾಧನೆಗೆ ಬೆಂಬಲವಾಗಿತ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.
ಸಾಧನೆಗೆ ಬಡತನ ಅಡ್ಡಿಯಲ್ಲ ಎಂದು ಬೆಂಗಳೂರಿನ (Bengaluru) ಸ್ಪಂದನಾ.ಐ. ಸಾಬೀತುಪಡಿಸಿದ್ದಾರೆ. ಆಟೋ ಚಾಲಕರೊಬ್ಬರ (Auto Driver) ಮಗಳಾದ ಸ್ಪಂದನಾ ಪದ್ಮಶ್ರೀ ಇಂನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಾಪಿ ಕೋರ್ಸ್ (Padmashree Institute of Physiotherapy) ಮುಗಿಸಿದ್ದು, ಬರೋಬ್ಬರಿ ಮೂರು ಗೋಲ್ಡ್ ಮೆಡಲ್ (Gold Medal) ಮುಡಿಗೇರಿಸಿಕೊಂಡಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯವರಾದ ಸ್ಪಂದನಾ ಹುಟ್ಟಿ ಬೆಳದದ್ದೆಲ್ಲಾ ಬೆಂಗಳೂರಿನಲ್ಲೇ. ಸ್ಪಂದನಾ ಅವರ ತಂದೆ ಇಂದ್ರೇಶ್ ಎಂ. ಆಟೋ ಡ್ರೈವರ್ ಹಾಗೂ ತಾಯಿ ಗಿರೀಜಾ. ತಮ್ಮ ಈ ಅದ್ಭುತ ಯಶಸ್ಸಿನ ಬಗ್ಗೆ ಖುಷಿ ಹಂಚಿಕೊಂಡ ಅವರು ‘ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಬೇಕು ಅಂದುಕೊಂಡಿದ್ದೆ. ಕನಿಷ್ಠ ಒಂದು ಗೋಲ್ಡ್ ಮೆಡಲ್ ಬರಬಹುದು ಎಂದು ನಿರೀಕ್ಷೆ ಇತ್ತು. ಆದರೆ ಒಟ್ಟಿಗೆ ಮೂರು ಚಿನ್ನದ ಪದಕ ಸಿಗುತ್ತವೆ ಎಂದು ನಾನು ಕನಸಲ್ಲಿಯೂ ಯೋಚಿಸಿರಲಿಲ್ಲ. ಇದರಿಂದ ನನಗೆ ತುಂಬಾನೇ ಸಂತೋಷ ಸಿಕ್ಕಿದೆ’ ಎಂದು ಹೇಳಿದ್ದಾರೆ.
MBBS ಮಾಡುವ ಕನಸ್ಸಿತ್ತು ಆದರೆ COVID-19 ಸಾಂಕ್ರಾಮಿಕದಿಂದ ಆ ಕನಸನ್ನೂ ಬಿಟ್ಟು ಫಸಿಯೋಥೆರಾಪಿ ಮಾಡುವ ಬಗ್ಗೆ ಯೋಚಿಸಬೇಕಾಯಿತು. ಹಾಗಾಗಿ ಆಕಸ್ಮಿಕವಾಗಿ ಸಿಕ್ಕ ಕೋರ್ಸ್ ಈಗ ಇಂತಹ ಸಾಧನೆ ಮಾಡಲು ನೆರವಾಯಿತು. ಆಲ್ಟರ್ನೇಟೀವ್ ಆಗಿ ಸಿಕ್ಕ ದಾರಿಯನ್ನು ಖುಷಿಯಿಂದ ಸ್ವೀಕರಿಸಿ ಅದರಲ್ಲಿಯೆ ಸಾಧನೆ ಮಾಡಿ ಈಗ ಮುಂದೆ ನ್ಯೂರೋಸೈನ್ಸ್ನಲ್ಲಿ ಮಾಸ್ಟರ್ಸ್ ಮಾಡಿ ಹೆಲ್ತ್ಕೇರ್ ಮೇಲೆ ವೃತ್ತಿಜೀವನವನ್ನು ಸೃಷ್ಟಿಸಿಕೊಳ್ಳುತ್ತಾರೆ ಎಂದು ಸ್ಪಂದನಾ ಅವರು ತಮ್ಮ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ.
ತನ್ನ ಯಶಸ್ಸಿಗೆ ತನ್ನ ಕುಟುಂಬವೇ ಆಕೆಗೆ ಶಕ್ತಿ ಎಂದು ಹೇಳಿದ್ದಾರೆ ಹಾಗೂ ತನ್ನ ಕಾಲೇಜು ಸಹ ಸಾಧನೆಗೆ ಬೆಂಬಲವಾಗಿತ್ತು ಎಂದಿದ್ದಾರೆ. ಇದೇ ವೇಳೆ ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ರೀಸರ್ಚ್ ಇಂನ್ಸ್ಟಿಟ್ಯೂಟ್ನ ಎಂಬಿಬಿಎಸ್ ವಿದ್ಯಾರ್ಥಿಯಾದ ಪ್ರಜ್ವಲ್ ಕಶ್ಯಪ್ ಕೂಡ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಇವರು ವೈದ್ಯಕೀಯ ಶಿಕ್ಷಣದಲ್ಲಿ ಎರಡು ಗೋಲ್ಡ್ ಮೆಡಲ್ ಮತ್ತು ಎರಡು ನಗದು ಬಹುಮಾನಗಳನ್ನು ಗೆಲ್ಲುವ ಮೂಲಕ ಇಡೀ ವಿಶ್ವವಿದ್ಯಾಲಯದಲ್ಲಿ ಸೆಕೆಂಡ್ ರ್ಯಾಂಕ್ ಪಡೆದು ಹೊರಹೊಮ್ಮಿದ್ದಾರೆ.
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಕಶ್ಯಪ್ ಅವರ ತಂದೆ ಇಂಜಿನಿಯರ್ ಆಗಿದ್ದು, ತಾಯಿ ಸಂಸ್ಕೃತ ಟೀಚರ್ ಆಗಿ ನಿವೃತ್ತಿ ಪಡೆದಿದ್ದಾರೆ. ನನ್ನ ತಂದೆ ತಾಯಿ ನನ್ನ ಸಾಧನೆಗೆ ಮುಖ್ಯ ಕಾರಣ, ಯಾವತ್ತು ನನಗೆ ಇದನ್ನೇ ಓದು ಎಂದು ಒತ್ತಾಯ ಮಾಡಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ ಹೊರಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಡೆಂಟಲ್ ವಿಭಾಗದಲ್ಲಿ ಮಿಂಚಿದ್ದಾರೆ. ಚಿತ್ರದುರ್ಗದ ಎಸ್ಜೆಎಂ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಬ್ಯಾಚುಲರ್ ಆಫ್ ಡೆಂಟಲ್ ಸರ್ಜ್ ವಿದ್ಯಾರ್ಥಿನಿ ಬೃಂಧ.ಕೆ. ಅವರು ಎರಡು ಚಿನ್ನದ ಪದಕ ಮತ್ತು ಒಂದು ನಗದು ಬಹುಮಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
Bangalore [Bangalore],Bangalore,Karnataka













