Samyuktha Hegde: ಕಿರಿಕ್ ಬೆಡಗಿಯ ಸಖತ್ ಅವತಾರ; ಸಂಯುಕ್ತಾ ಹೆಗ್ಡೆ ಬಿಂದಾಸ್ ಲೈಫ್! | | ACTPnews

Kirik Party Fame Samyuktha Hegde Maldive solo trip photos share on social media


ನಾನು ಒಬ್ಬಳೇ….

ಸಂಯುಕ್ತಾ ಹೆಗ್ಡೆ ಗಟ್ಟಿಗಿತ್ತಿನೆ ಬಿಡಿ. ಜಿಮ್ ಅಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಾರೆ. ಒಬ್ಬರೇ ದೂರ ದೂರಕ್ಕೂ ಹೋಗ್ತಾರೆ. ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಓಡಾಡುತ್ತಾರೆ. ಹ್ಯಾಂಡ್‌ ಸ್ಟ್ಯಾಂಡ್ ಕೂಡ ಮಾಡೋದು ಇದೆ. ಇದರೊಟ್ಟಿಗೆ ತಮ್ಮ ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ತಾರೆ.
ನಾನು ಒಬ್ಬಳೇ….

(ಚಿತ್ರ ಕೃಪೆ: ಸಂಯುಕ್ತ ಹೆಗ್ಡೆ ಇನ್‌ಸ್ಟಾಗ್ರಾಮ್)

ಆ ರೀತಿಯ ಸಂಯಕ್ತಾ ಹೆಗ್ಡೆ ಈ ಸಲ ಎರಡನೇ ಬಾರಿಗೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. ಮಾಲ್ಡೀವ್ಸ್‌ ಒಬ್ಬರೆ ಹೋಗುವ ಜಾಗ ಅಲ್ಲ. ಮದುವೆ ಆಗಿ ಹೋದ್ರೆ ಚೆಂದ ಅನ್ನೋದೇ ಹೆಚ್ಚು. ಆದರೆ, ಸಂಯುಕ್ತಾ ಇದನ್ನ ಒಪ್ಪುವುದಿಲ್ಲ. ತಾವೊಬ್ಬರೇ ಇಲ್ಲಿ ಬಂದಿದ್ದಾರೆ.

ಮಾಲ್ಡೀವ್ಸ್ ಫ್ರೆಂಡ್

ಸಂಯುಕ್ತಾ ಹೆಗ್ಡೆ ಅವರ ಫೋಟೋಗಳನ್ನ ತೆಗೆದವರು ಯಾರು? ಈ ಪ್ರಶ್ನೆಗೆ ಸಂಯುಕ್ತಾ ಉತ್ತರ ಕೊಟ್ಟಿದ್ದಾರೆ. ತಾವು ಬರೆದ ಅಷ್ಟು ಅನುಭವದ ಕೊನೆಯ ಸಾಲುಗಳಲ್ಲಿ ಮಾಲ್ಡೀವ್ಸ್ ಫ್ರೆಂಡ್ ಬಗ್ಗೆ ಬರೆದಿದ್ದಾರೆ.

ಈ ಫ್ರೆಂಡ್ ಒಳ್ಳೆ ಗೈಡ್ ಕೂಡ ಆಗಿದ್ದಾರೆ. ಚೆನ್ನಾಗಿ ಗೈಡ್ ಮಾಡಿರೋದಕ್ಕೆ ಥ್ಯಾಂಕ್ಸ್ ಅಂತ ಸಂಯುಕ್ತ ಹೇಳಿದ್ದಾರೆ. ಈ ಒಂದು ಸೋಲೋ ಟ್ರಿಪ್ ಅಲ್ಲಿ ಸಂಯುಕ್ತಾ ಹೆಗ್ಡೆ ಅಂಡರ್‌ವಾಟರ್ ಕೂಡ ಹೋಗಿದ್ದಾರೆ. ಮಾಲ್ಡೀವ್ಸ್‌ನ ನೀರಿನಾಳದ ಸೌಂದರ್ಯವನ್ನು ಕಂಡು ಬಂದಿದ್ದಾರೆ.

ಬಿಕಿನಿ ಫೋಟೋಸ್

ಸಂಯುಕ್ತಾ ಹೆಗ್ಡೆ ಮಾಲ್ಡೀವ್ಸ್‌ ಅಲ್ಲಿ ಬಿಕಿನಿ ಹಾಕಿಕೊಂಡಿದ್ದಾರೆ. ಸಮುದ್ರ ತೀರದಲ್ಲಿ ಅಷ್ಟೆ ಬಿಂದಾಸ್ ಆಗಿಯೇ ಓಡಾಡಿದ್ದಾರೆ. ಈ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Kirik Party Fame Samyuktha Hegde Maldive solo trip photos share on social media

ಬಿಕಿನಿ ಫೋಟೋಸ್

(ಚಿತ್ರ ಕೃಪೆ: ಸಂಯುಕ್ತ ಹೆಗ್ಡೆ ಇನ್‌ಸ್ಟಾಗ್ರಾಮ್)

ಸಂಯುಕ್ತಾ ಹೆಗ್ಡೆ ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ. ಜಿಮ್ ಅಲ್ಲೂ ವರ್ಕಟ್ ಮಾಡ್ತಾರೆ. ಜಿಮ್ನಾಸ್ಟಿಕ್ಸ್ ಕೂಡ ಮಾಡೋದು ಇದೆ. ಬಾಡಿ ಬಿಲ್ಡಿಂಗ್ ತರ ಪೋಸ್ ಕೊಡೋದು ಇದೆ. ಸಿಕ್ಸ್ ಪ್ಯಾಕ್ ಕೂಡ ಮಾಡಿರೋದು ಇದೆ.

ಸಂಯುಕ್ತ ಸಿನಿಮಾಗಳು

ಸಂಯುಕ್ತಾ ಹೆಗ್ಡೆ ಸಿನಿಮಾಗಳನ್ನ ಈಗೇನೂ ಮಾಡಿಲ್ಲ. ಇವರ ಕೊನೆಯದಾಗಿ ಮಾಡಿರೋ ಸಿನಿಮಾ ಅಂದ್ರೆ ಅದು ಕ್ರೀಮ್ ಅನ್ನೋದೇ ಆಗಿದೆ.

ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಕಾಲು ಮುರಿದುಕೊಂಡಿರೋದು ಇದೆ. ಅದು ಬಿಟ್ಟರೆ, ಅದಕ್ಕೂ ಮುಂಚೆ ಬಂದ ಕಾಲೇಜು ಕುಮಾರ್ ಇವರಿಗೆ ಒಂದು ಹಂತಕ್ಕೆ ಹೆಸರು ತಂದು ಕೊಡ್ತು. ರಕ್ಷಿತ್ ಶೆಟ್ರ ಜೊತೆಗೆ ಕಿರಿಕ್ ಪಾರ್ಟಿ ಚಿತ್ರ ಮಾಡಿರೋದು ಗೊತ್ತೇ ಇದೆ.

Kirik Party Fame Samyuktha Hegde Maldive solo trip photos share on social media

ಮಾಲ್ಡೀವ್ಸ್

(ಚಿತ್ರ ಕೃಪೆ: ಸಂಯುಕ್ತ ಹೆಗ್ಡೆ ಇನ್‌ಸ್ಟಾಗ್ರಾಮ್)

ಈ ಎಲ್ಲ ಸಿನಿಮಾಗಳಲ್ಲದೆ ಸಂಯುಕ್ತ ಹೆಗ್ಡೆ, ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ, ತುರ್ತು ನಿರ್ಗಮನ, ರಾಣ ಚಿತ್ರದಲ್ಲಿ ಡ್ಯಾನ್ಸರ್ ಆಗಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.

ತಮಿಳು ಸಿನಿಮಾಗಳು

ಸಂಯಕ್ತಾ ಹೆಗ್ಡೆ ಕೆಲವು ತಮಿಳು ಚಿತ್ರ ಮಾಡಿದ್ದಾರೆ. ಅದರಲ್ಲಿ ಕೊಮಾಲಿ, ಪಪ್ಪಿ, ಥೀಲ್, ಮನ್ಮಧ ಲೀಲೈ ಸಿನಿಮಾ ಮಾಡಿದ್ದಾರೆ. ಇನ್ನುಳಿದಂತೆ ಸಂಯುಕ್ತಾ ಹೆಗ್ಡೆ ಯಾವುದೇ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿರೋದು ಇಲ್ವೇ ಇಲ್ಲ.

ಮತ್ತೆ ಕನ್ನಡ ಸಿನಿಮಾ ಒಪ್ಪಿರೋ ಸುದ್ದಿನೂ ಇಲ್ಲ. ಆದರೆ, ಸೋಲೋ ಟ್ರಿಪ್‌ಗಳ ಫೋಟೋ ಮತ್ತು ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುತ್ತಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports