Shuba Poonja: ‘4 ಫೋಟೋ ತೆಗೆದು ಶಾರ್ಟ್ಸ್, ಬನಿಯನ್ ಹಾಕ್ಕೊಂಡ’! ಸೋ ಸ್ಯಾಡ್! ಮದುವೆ ದಿನದ ಬಗ್ಗೆ ಶುಭಾ ಪೂಂಜಾ ಹೇಳಿದ್ದೇನು? | | ACTPnews

ಶುಭಾ ಪೂಂಜಾ


Last Updated:

Shubha Poonja: ಮದುವೆ ದಿನ ಮದುಮಗ-ಮದುಮಗಳಾಗಿ ನಾಲ್ಕು ಫೋಟೋ ಮಾತ್ರ ತೆಗೆದೆವು. ಅಷ್ಟು ಬೇಗ ಅವನು ಪಂಚೆ ಬಿಟ್ಟಿ ಶಾರ್ಟ್ಸ್, ಬನಿಯನ್ ಹಾಕಿದ್ದ ಎಂದಿದ್ದಾರೆ.

ಶುಭಾ ಪೂಂಜಾ
ಶುಭಾ ಪೂಂಜಾ

ಶುಭಾ ಪೂಂಜಾ (Shubha Poonja) ಅವರು ಡಿವೋರ್ಸ್  (Divorce) ವಿಚಾರವಾಗಿ ಭಾರೀ ಸುದ್ದಿಯಾಗಿದ್ದಾರೆ. ಅವರ ಡಿವೋರ್ಸ್ ಸಂಗತಿಗಳು ವೈರಲ್ ಆಗುತ್ತಿದ್ದಂತೆ ಅವರ ಹಳೆಯ ಇಂಟರ್​ವ್ಯೂ, ಡಿವೋರ್ಸ್ ವಿಚಾರಗಳು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಇದೀಗ ತಮ್ಮ ಮದುವೆ ದಿನದಂದು ಫೋಟೋ ಕೂಡಾ ಸರಿಯಾಗಿ ತೆಗೆಸಿಕೊಳ್ಳೋಕೆ ಆಗಿಲ್ಲ ಎನ್ನುವುದನ್ನು ತಿಳಿಸಿದ್ದಾರೆ.

ಸಡನ್ನಾಗಿ ತಮ್ಮ ಮದುವೆ ಫಿಕ್ಸ್ ಆಗಿದ್ದು 2 ದಿನಗಳ ಹಿಂದೆ ಮದುವೆಯಾಗೋದಾಗಿ ನಿಶ್ಚಯ ಮಾಡಿದ್ರಂತೆ ಸುಮಂತ್ ಹಾಗೂ ಶುಭಾ ಪೂಂಜಾ. ಮದುವೆ ದಿನಕ್ಕಾಗಿ ಸರಿಯಾಗಿ ಹೂಗಳು ಕೂಡಾ ಸಿಕ್ಕಿರಲಿಲ್ಲ ಎಂದಿದ್ದಾರೆ ಶುಭಾ ಪೂಂಜಾ.

ಮದುವೆ ದಿನ ರೆಡಿಯಾಗಿ ಫೋಟೋ ತೆಗೆಸಿಕೊಂಡರೆ 4 ಪೋಟೋ ತೆಗೆಸಿದ ನಂತರ ಸುಮಂತ್ ಅವರು ಶಾರ್ಟ್ಸ್ ಬನಿಯನ್ ಧರಿಸಿಕೊಂಡು ಬಂದಿದ್ದರಂತೆ. ಸೋ ಸ್ಯಾಡ್ ಎಂದು ಶುಭಾ ಪೂಂಜಾ ಅವರು ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ಮನೇಲಿದ್ರೆ ಇಷ್ಟಾಗಲ್ಲ

ನಿಜ ಹೇಳಬೇಕು. ನನಗೆ ಅವರು ಸಿಕ್ಕಿರೋದು ಇದೇ ಸಪೋರ್ಟ್. ನನಗೆ ಸಿಕ್ಕಿರುವ ಹಸ್ಬೆಂಡ್ ತುಂಬಾ ಸಪೋರ್ಟಿವ್. ಆಮೇಲೆ ಅವನಿಗೆ ನಾನು ಮನೇಲಿ ನನಗೆ ಇಷ್ಟ ಆಗಲ್ಲ. ನಾನು ತುಂಬಾ ಕಿರಿ ಕಿರಿ ಅನಿಸುತ್ತೆ. ಯಾವಾಗ್ಲೂ ನನ್ನ ಶೂಟ್ ಮಾಡೋ ಹೊರಗಡೆ ಹೋಗು, ಕೆಲಸ ಮಾಡು, ಸಿನಿಮಾ ಮಾಡು ಅಂತಾನೆ ಎಂದಿದ್ದಾರೆ.

ಅವನಿಗೆ ಈ ಪ್ರೊಡ್ಯೂಸರ್ ಆಗಿ ಕೆಲಸ ಮಾಡಬೇಕು ಎನ್ನುವ ಆಸೆ ಇದೆ. ಫೀಲ್ಡ್​​ನಲ್ಲಿ ಪ್ರೊಡ್ಯೂಸ್ ಮಾಡಬೇಕೆಂದು ಆಸೆ ಇದೆ. ಮದುವೆಯಾಗಿ ಮೂರು ದಿನ ಐದು ಆಗಿದ್ದರೇನು? ಹೋಗು ಶೂಟಿಂಗ್ ಮಾಡು ಎನ್ನುತ್ತಾನೆ. ನಾನೇ ಸ್ವಲ್ಪ ಹಿಂದೇಟು ಹಾಕಿದರೂ ಅವನು ಕೂಡಾ ಹೋಗು ಮಾಡ್ಕೊಂಡು ಬಾ ಎನ್ನುತ್ತಾನೆ. ಅದೇ ಕಾರಣದಿಂದ ನನಗೆ ಮದುವೆ ಆಗಿದ್ದೀನಿ ಅಂತ ಅನಿಸೋದಿಲ್ಲ ಎಂದಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports