IND vs AFG, Nitish Kumar Reddy: ಕ್ರಿಕೆಟ್ ಆದರೂ, ಪ್ರೆಸ್‌ ಕಾನ್ಫರೆನ್ಸ್‌ ಆದರೂ ಅಮ್ಮ ಫಸ್ಟ್! ಕ್ರಿಕೆಟ್‌ ಪ್ರೇಮಿಗಳ ಮನ ಗೆದ್ದ ನಿತೀಶ್‌ ಕುಮಾರ್‌ ರೆಡ್ಡಿ | | ACTPnews

News18


Last Updated:

ನಿತೀಶ್ ಕುಮಾರ್ ರೆಡ್ಡಿ ಪ್ರೆಸ್ ಕಾನ್ಫರೆನ್ಸ್ ಮಧ್ಯೆ ಅಮ್ಮನ ಫೋನ್ ಸ್ವೀಕರಿಸಿದ ವೀಡಿಯೊ ಬಿಸಿಸಿಐ X ನಲ್ಲಿ ವೈರಲ್, ಅಫ್ಘಾನ್ ವಿರುದ್ಧದ ಏಕದಿನದಲ್ಲಿ ಅವರ ಬೌಲಿಂಗ್ ಮೆಚ್ಚುಗೆ ಪಡೆದಿದೆ.

News18
News18

ಟೀಂ ಇಂಡಿಯಾದ ಆಲ್‌ ರೌಂಡರ್ ನಿತೀಶ್‌ ಕುಮಾರ್‌ ರೆಡ್ಡಿ (Nitish Kumar Reddy) ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಧರ್ಮಶಾಲಾದ (Dharmasthala) ಹಿಮಾಚಲ ಪ್ರದೇಶದ ಕ್ರಿಕೆಟ್‌ ಅಸೋಸಿಯೇಷನ್‌ (HPCA) ಸ್ಟೇಡಿಯಂನಲ್ಲಿ ಶನಿವಾರ ಜೂನ್‌ 13 ರಂದು ನಡೆದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ (ODI) ಭಾರತ ತಂಡ (Team India) ಭರ್ಜರಿ ಗೆಲುವು ಸಾಧಿಸಿದೆ. ಆದರೆ, ಪಂದ್ಯ ಮುಗಿದ ಬಳಿಕ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ನಡೆದ ಒಂದು ಘಟನೆ ಈಗ ಕ್ರಿಕೆಟ್‌ ಪ್ರೇಮಿಗಳ ಮನ ಗೆದ್ದಿದೆ.

ಮಾಧ್ಯಮಗಳ ಜೊತೆ ನಿತೀಶ್‌ ಮಾತನಾಡುತ್ತಿದ್ದಾಗ ಹಠಾತ್ತನೆ ಅವರ ಅಮ್ಮನಿಂದ ಫೋನ್‌ ಕಾಲ್‌ ಬಂದಿತು. ತಕ್ಷಣವೇ ಸುದ್ದಿಗೋಷ್ಠಿಯನ್ನು ಮಧ್ಯದಲ್ಲೇ ನಿಲ್ಲಿಸಿ ಅಮ್ಮನ ಕರೆಯನ್ನು ಸ್ವೀಕರಿಸಿದರು. ಬಿಸಿಸಿಐ ಈ ಕ್ಯೂಟ್‌ ವೀಡಿಯೊವನ್ನು ತನ್ನ ʻXʼ (ಟ್ವಿಟರ್)‌ ಖಾತೆಯಲ್ಲಿ ಶೇರ್‌ ಮಾಡಿದ್ದು ಇಂಟರ್ನೆಟ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಆಂಧ್ರಪ್ರದೇಶ ಮೂಲದ 23 ವರ್ಷದ ನಿತೀಶ್‌ ಕುಮಾರ್‌ ರೆಡ್ಡಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. 102 ರನ್‌ಗಳನ್ನು ಗಳಿಸಿ ಟೀಮ್‌ ಇಂಡಿಯಾಗೆ ತಲೆನೋವಾಗಿದ್ದ ಅಫ್ಘಾನ್‌ ಬ್ಯಾಟರ್‌ ರಹಮಾನುಲ್ಲಾ ಗುರ್ಬಾಜ್‌ ಅವರನ್ನು ನಿತೀಶ್‌ ಕುಮಾರ್‌ ಕ್ಲೀನ್‌ ಬೌಲ್ಡ್‌ ಮಾಡಿದ್ದಾರೆ. ಇದರ ಜೊತೆಗೆ ಮೊಹಮ್ಮದ್ ನಬಿ ಅವರ ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾದರು. ಇವರು 2025ರ ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧವೇ ಏಕದಿನ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿದ್ದರು. ಭಾರತ ಕೇವಲ 22.5 ಓವರ್‌ಗಳಲ್ಲೇ ಟಾರ್ಗೆಟ್ ಚೇಸ್ ಮಾಡಿದ್ದರಿಂದ ಈ ಪಂದ್ಯದಲ್ಲಿ ನಿತೀಶ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಅಫ್ಘಾನಿಸ್ತಾನ ನೀಡಿದ 195 ರನ್‌ಗಳ ಟಾರ್ಗೆಟ್‌ ಅನ್ನು ಬೆನ್ನಟ್ಟಿದ ಭಾರತಕ್ಕೆ ನಾಯಕ ಶುಭ್ಮನ್ ಗಿಲ್ 66 ಎಸೆತಗಳಲ್ಲಿ 11 ಫೋರ್ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 84 ರನ್ ಗಳಿಸಿದರು.

ಈ ಪಂದ್ಯದಲ್ಲಿ ನಾಯಕ ಶುಭ್ಮನ್ ಗಿಲ್ ಕೇವಲ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಷ್ಟೇ ಅಲ್ಲದೆ, ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 3,000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಅವರು ಕೇವಲ 63 ಇನ್ನಿಂಗ್ಸ್‌ಗಳಲ್ಲಿ ಇತಿಹಾಸ ನಿರ್ಮಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports