Last Updated:
Priest Marries Transgender Woman: ನಾಗರಾಜನ್ ದೇವಾಲಯದಲ್ಲಿ ಪೂಜೆ ಮಾಡುವಾಗ ಸಂಜನಾ ಅವರ ಪರಿಚಯವಾಗಿತ್ತು. ನಂತರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಸಮಾಜದ ದೃಷ್ಟಿಯಲ್ಲಿ ವಿಭಿನ್ನವಾದ ಈ ಪ್ರೇಮವನ್ನು ಇಬ್ಬರ ಕುಟುಂಬಗಳೂ ಅಂಗೀಕರಿಸಿದ್ದು ವಿಶೇಷ.
ಕಡಲೂರು: ಪ್ರೀತಿ (LOVE) ಅನ್ನೋದೇ ಹಾಗೆ… ಅದಕ್ಕೆ ಭಾಷೆಯ ಗಡಿಯೂ ಇಲ್ಲ, ಜಾತಿ, ಧರ್ಮಗಳ ಹಂಗೂ ಇಲ್ಲ.. ಶ್ರೀಮಂತ ಬಡವ ಅನ್ನೋ ಭೇದಭಾವವೂ ಇಲ್ಲ.. ಯಾರಿಗೂ, ಯಾರ ಜೊತೆಯಲ್ಲೂ, ಎಲ್ಲಾದರೂ ಪ್ರೇಮ ಘಟಿಸಬಹುದು. ಆದರೆ ಆ ಪ್ರೇಮವನ್ನು ತಮ್ಮ ಕೊನೆ ಉಸಿರಿರೋವರೆಗೂ ಜೋಪಾನವಾಗಿ ಕಾಪಿಟ್ಟುಕೊಳ್ಳುವ ಧೈರ್ಯ ಮತ್ತು ಆತ್ಮವಿಶ್ವಾಸ ಎಲ್ಲರ ಬಳಿಯೂ ಇರೋದಿಲ್ಲ.. ಒಂದಷ್ಟು ಜನ ತಮ್ಮ ಪ್ರೀತಿಯ ಜೊತೆ ಬದುಕನ್ನೂ ದಡ ಸೇರಿಸುವಲ್ಲಿ ಯಶಸ್ವಿಯಾಗುತ್ತಾರೆ.














