Dhurandar Movie: ಟಿವಿಯಲ್ಲಿ ಬರ್ತಿದೆ 1300 ಕೋಟಿಯ ಸಿನಿಮಾ! ಮನೆಯಲ್ಲೇ ಕುಳಿತು ಎಂಜಾಯ್ ಮಾಡಿ | | ACTPnews

ಸ್ಟಾರ್ ಸುವರ್ಣದಲ್ಲಿ 'ಧುರಂದರ್' ಸಿನಿಮಾ; ಅತೀ ಶೀಘ್ರದಲ್ಲಿ ಟೆಲಿಕಾಸ್ಟ್!


Last Updated:

ಬಾಲಿವುಡ್‌ನ ಧುರಂಧರ್ ಚಿತ್ರ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿದೆ. ಭಾನುವಾರ ಸಂಜೆ ಈ ಚಿತ್ರ ಪ್ರಸಾರ ಆಗುತ್ತಿದೆ. ಆದರೆ, ಯಾವ ಭಾನುವಾರ ಅನ್ನೋ ಮಾಹಿತಿ ಇಲ್ಲಿದೆ ಓದಿ.

ಸ್ಟಾರ್ ಸುವರ್ಣದಲ್ಲಿ 'ಧುರಂದರ್' ಸಿನಿಮಾ; ಅತೀ ಶೀಘ್ರದಲ್ಲಿ ಟೆಲಿಕಾಸ್ಟ್!
ಸ್ಟಾರ್ ಸುವರ್ಣದಲ್ಲಿ ‘ಧುರಂದರ್’ ಸಿನಿಮಾ; ಅತೀ ಶೀಘ್ರದಲ್ಲಿ ಟೆಲಿಕಾಸ್ಟ್!

ಧುರಂದರ್ ಚಿತ್ರ (Dhurandar Movie) ಸ್ಟಾರ್ ಸುವರ್ಣದಲ್ಲಿ ಬರ್ತಿದೆ. ಇದೇ ಜೂನ್ ತಿಂಗಳಲ್ಲಿಯೇ ಇದು ಪ್ರಸಾರ ಆಗುತ್ತಿದೆ. ಕನ್ನಡದಲ್ಲಿಯೇ ಬರ್ತಿರೋ ಈ ಸಿನಿಮಾದ ಒಂದು ಪ್ರೋಮೋ (Promo) ಕೂಡ ಹೊರ ಬಂದಿದೆ. ಇದರಲ್ಲಿ ಧುರಂಧರ್ ಪಾರ್ಟ್-1 ಚಿತ್ರದ ಲವ್ ಸ್ಟೋರಿಯ (Love Story) ಚಿತ್ರಣ ಇದೆ. ಅಂದ್ರೆ, ಇಲ್ಲಿ ಧುರಂಧರ್ (Dhurandar) ಒನ್ ಪ್ರಸಾರ ಆಗುತ್ತಿದೆ. ಇದರ ಮಾಹಿತಿ ಇಲ್ಲಿದೆ ಓದಿ.

ಜೂನ್ -21 ರಂದು ಪ್ರಸಾರ

ಧುರಂದರ್ ಚಿತ್ರ ಪ್ರಸಾರ ಆಗುತ್ತಿದೆ. ಈಗಾಗಲೆ ಇದು ಕಲರ್ಸ್ ಕನ್ನಡದಲ್ಲೂ ಬಂದಿದೆ. ಒಟಿಟಿಯಲ್ಲೂ ಸ್ಟ್ರೀಮಿಂಗ್ ಆಗಿದೆ. ಆದರೆ, ಇದರ ನಡುವೆ ಸ್ಟಾರ್ ಸುವರ್ಣ ವಾಹಿನಿ ಕೂಡ ಇದೀಗ ಧುರಂಧರ್ ಪಾರ್ಟ್-1 ಚಿತ್ರವನ್ನ ಪ್ರಸಾರ ಮಾಡುತ್ತಿದೆ.
Ranveer Singh Sara Arjun Dhurandhar Movie Telecast Soon on Star Suvarna

ಧುರಂಧರ್ ಪ್ರೋಮೋ ರಿಲೀಸ್ (ಚಿತ್ರ ಕೃಪೆ: ಸ್ಟಾರ್ ಸುವರ್ಣ ಇನ್‌ಸ್ಟಾಗ್ರಾಮ್)

ಜೂನ್-21 ರಂದು ಈ ಚಿತ್ರ ಪ್ರಸಾರ ಆಗುತ್ತಿದೆ. ಸಂಜೆ-6 ಗಂಟೆಗೆ ಇದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಟೆಲಿಕಾಸ್ಟ್ ಆಗುತ್ತಿದೆ. ಈ ವಿಷಯವನ್ನ ವಾಹಿನಿ ಅಧಿಕೃತವಾಗಿ ಹೇಳಿದೆ.

ಧುರಂಧರ್ ಪ್ರೋಮೋ ರಿಲೀಸ್

ಧುರಂಧರ್ ಚಿತ್ರದ ಟೆಲಿಕಸ್ಟಾರ್ ಡೇಟ್ ಮತ್ತು ಟೈಮ್ ಎರಡನ್ನು ಅಧಿಕೃತವಾಗಿ ಹೇಳಲಾಗಿದೆ. ಇದನ್ನ ಹೇಳುವ ಒಂದು ಪ್ರೋಮೋ ಇದೀಗ ಹೊರ ಬಂದಿದೆ.

ಸ್ಟಾರ್ ಸುವರ್ಣ ವಾಹಿನಿಯ ಇನ್‌ಸ್ಟಾಗ್ರಾಮ್‌ನ ಅಧಿಕೃತ ಪೇಜ್ ಅಲ್ಲಿಯೆ ಇದು ಶೇರ್ ಆಗಿದೆ. ಈ ಮೂಲಕ ಭಾನುವಾರ ಜೂನ್-21 ರಂದು ತಮ್ಮ ವಾಹಿನಿಯಲ್ಲಿ ಧುರಂದರ್ ಚಿತ್ರ ಬರ್ತಿದೆ ಅನ್ನೊದನ್ನ ಹೇಳಿಕೊಂಡಿದೆ.

ಪ್ರೋಮೋ ಜೊತೆಗೆ ಈ ಲೈನ್ಸ್

ಈ ಒಂದು ಪ್ರೋಮೋದ ಜೊತೆಗೆ ಕೆಲವು ಲೈನ್ ಕೂಡ ಇವೆ. ಇದು ಇಡೀ ಚಿತ್ರದ ವಿಷಯವನ್ನ ಹೇಳುತ್ತವೆ. ಅವು ಹೀಗಿವೆ; ಬಂದೂಕುಗಳ ಸದ್ದಿನ ನಡುವೆ ಅರಳುವ ಸುಂದರ ಪ್ರೀತಿಯ ಕಥೆ “ಧುರಂಧರ್” ಜೂನ್ 21 ರಂದು ಸಂಜೆ 6ಕ್ಕೆ ಅಂತಲೇ ಬರೆದಿದೆ.

Ranveer Singh Sara Arjun Dhurandhar Movie Telecast Soon on Star Suvarna

ಪ್ರೋಮೋ ಜೊತೆಗೆ ಈ ಲೈನ್ಸ್

(ಚಿತ್ರ ಕೃಪೆ: ಸ್ಟಾರ್ ಸುವರ್ಣ ಇನ್‌ಸ್ಟಾಗ್ರಾಮ್)

ಧುರಂಧರ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ. ದಾಖಲೆ ಮೇಲೆ ದಾಖಲೆ ಮಾಡಿದೆ. ಬಾಕ್ಸಿಕ್ ಆಫೀಸ್ ಕೊಳ್ಳೆ ಹೊಡೆದಿದೆ. ಯಾರೂ ನಿರೀಕ್ಷೆ ಮಾಡದ ಮಟ್ಟಿಗೆ ಇದು ಕ್ರೇಜ್ ಹುಟ್ಟುಹಾಕಿದೆ.

ಧುರಂಧರ್ ಡೈರೆಕ್ಟರ್

ಆದಿತ್ಯ ಧರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ರಣವೀರ್ ಸಿಂಗ್, ಅರ್ಜುನ್ ರಾಮಪಾಲ್, ಅಕ್ಷಯ್ ಖನ್ನಾ, ಆರ್.ಮಾಧವನ್, ಸಂಜಯ್ ದತ್, ಸಾರಾ ಅರ್ಜುನ್ ಈ ಎಲ್ಲ ನಟರು ಈ ಚಿತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಎಷ್ಟು ಕೋಟಿ ಸಿನಿಮಾ

ಧುರಂಧರ್ ಬಹುಕೋಟಿ ವೆಚ್ಚದ ಚಿತ್ರವೇ ಆಗಿದೆ. ಈ ಚಿತ್ರವನ್ನ 255 ಕೋಟಿ ಬಜೆಟ್ ಅಲ್ಲಿಯೆ ತಯಾರಿಸಲಾಗಿದೆ. ಹಾಗೆ ಇದು 1,350 ಕೋಟಿ ಬಾಚಿಕೊಂಡಿದೆ.

ಇದು ಧುರಂಧರ್ ಒಂದರ ಕತೆ ಆಗಿದೆ. ಧರುಂಧರ್-2 ಚಿತ್ರವೂ ರಿಲೀಸ್ ಆಗಿದೆ. ಇದು ಕೂಡ ಕಮಾಲ್ ಮಾಡಿದೆ. ಆದರೆ, ಸ್ಟಾರ್ ಸುವರ್ಣದಲ್ಲಿ ಧುರಂಧರ್ ಒನ್ ಮಾತ್ರ ಟೆಲಿಕಾಸ್ಟ್ ಆಗುತ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports