ಈ ಚಿತ್ರ ಸನ್ನೆಕ್ಸ್ಟ್ ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರ ಥಿಯೇಟರ್ ಅಲ್ಲಿ ನೋಡಿದವರು ಮೆಚ್ಚಿಕೊಂಡಿದ್ದರು. ಆದರೆ, ಈ ಚಿತ್ರ ಮಿಸ್ ಮಾಡಿಕೊಂಡವರು ಇನ್ಮುಂದೆ ಒಟಿಟಿಯಲ್ಲಿ ನೋಡಬಹುದು.
ಟೈಮ್ ಲೂಪ್ ಚಿತ್ರ
ಡೈರೆಕ್ಟರ್ ಗಿರೀಶ್ ಜಿ ತಮ್ಮ ಈ ಚಿತ್ರ ಒಟಿಟಿಗೆ ಬಂದಿದೆ ಅಂತ ಖುಷಿಯಿಂದ ಹೇಳಿಕೊಂಡಿದ್ದಾರೆ. ಸನ್ನೆಕ್ಸ್ಟ್ ಅಲ್ಲಿ ಇದು ಸ್ಟ್ರೀಮಿಂಗ್ ಆಗುತ್ತಿದೆ ಅಂತಲೂ ನ್ಯೂಸ್-18 ಕನ್ನಡ ಡಿಜಿಟಲ್ಗೆ ಹೇಳಿಕೊಂಡಿದ್ದಾರೆ.
ಕನ್ನಡ ಚಿತ್ರಗಳನ್ನ ಒಟಿಟಿ ತಿರುಗಿಯೂ ನೋಡೋದಿಲ್ಲ. ಆದರೆ, ಈ ಚಿತ್ರ ಲಕ್ಕಿ ಆಗಿದೆ. ಒಂದು ವರ್ಷ 9 ತಿಂಗಳ ಹಿಂದೆ ಬಂದ ಈ ಚಿತ್ರ ಈಗ ಸನ್ನೆಕ್ಸ್ಟ್ ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಸನ್ನೆಕ್ಸ್ಟ್ ಅಲ್ಲಿ ಈಗಾಗಲೇ ಕನ್ನಡದ ಹಲವು ಸಿನಿಮಾಗಳು ಇವೆ. ಅದರಲ್ಲಿ ಈ ಒಂದು ಚಿತ್ರ ಹೊಸ ಸೇರ್ಪಡೆ ಆಗಿದೆ. ಹಾಗೆ ಈ ಚಿತ್ರದ ಕಂಟೆಂಟ್ ವಿಶೇಷವಾಗಿದೆ.
ಶಾಲಿವಾಹನ ಅನ್ನುವ ಹಳ್ಳಿಯ ಕತೆ ಇಲ್ಲಿದೆ. ಈ ಊರಿನಲ್ಲಿ ಮೂವರು ಸ್ನೇಹಿತರು ಇರ್ತಾರೆ. ರಂಗ, ಪಾಂಡ್ಯ ಮತ್ತು ದಯ ಅನ್ನೋದು ಈ ಸ್ನೇಹಿತರ ಹೆಸರಾಗಿದೆ.
ಊರಿನ ಬಾವಿಯಲ್ಲಿ ಇವರು ಎಂದಿನಂತೆ ಈಜುತ್ತಾರೆ. ಆದರೆ, ಆ ಒಂದು ದಿನ ಬಾವಿಯ ಆಳದಲ್ಲಿ ರಂಗನಿಗೆ ಒಂದು ಶಂಖ ಸಿಗುತ್ತದೆ. ಇದು ತುಂಬಾನೆ ವಿಶೇಷ ಶಂಖವೇ ಆಗಿರುತ್ತದೆ. ಪ್ರಸಕ್ತ ಸಮಯವನ್ನ ಹಿಂದೆ ಮುಂದೆ ಮಾಡುವ ಶಕ್ತಿನೂ ಇದಕ್ಕೆ ಇರುತ್ತದೆ.
ಡೈರೆಕ್ಟರ್ ಗಿರೀಶ್ ಜಾಣ್ಮೆ
ಡೈರೆಕ್ಟರ್ ಗಿರೀಶ್ ಇಲ್ಲಿ ಈ ಕತೆಯನ್ನ ತುಂಬಾನೆ ಚೆನ್ನಾಗಿ ಹೇಳಿದ್ದಾರೆ. ಸೈನ್ಸ್, ಪುರಾಣ ಹೀಗೆ ಎಲ್ಲವನ್ನು ಸೇರಿಸಿಯೇ ಈ ಚಿತ್ರ ಮಾಡಿದ್ದಾರೆ.
ಈ ಒಂದು ಕತೆಯನ್ನ ಹಳ್ಳಿ ಬ್ಯಾಗ್ರೌಂಡ್ ಅಲ್ಲಿ ಹೇಳಿದ್ದಾರೆ. ಇದು ಕನ್ನಡದ ಹೊಸ ರೀತಿಯ ಚಿತ್ರವೇ ಆಗಿದೆ. ಈ ಚಿತ್ರ ನೋಡಿದ ವಿಮರ್ಶಕರು ಒಳ್ಳೆ ಮಾತುಗಳನ್ನ ಬರೆದಿದ್ದಾರೆ.
ಶಾಲಿವಾಹನ ಶಕೆ ಚಿತ್ರವನ್ನ ಗಿರೀಶ್ ಜಿ. ಡೈರೆಕ್ಷನ್ ಮಾಡಿದ್ದಾರೆ. ರಂಗ ಅನ್ನುವ ಪಾತ್ರವನ್ನು ಇವರೇ ಮಾಡಿದ್ದಾರೆ. ಚಿಲ್ಲರ್ ಮಂಜು, ದಯಾನಂದ್ ಸಾಗರ್, ಸುಂದರ್, ವೀಣಾ ಹಾಗೂ ಲತಾ ಎಂ.ಬಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಈ ಚಿತ್ರಕ್ಕೆ ಇಬ್ಬರು ಸಂಗೀತ ಕೊಟ್ಟಿದ್ದಾರೆ. ಹರಿ ಅಜಯ್ ಹಾಗೂ ಕಾರ್ತಿಕ್ ಭೂಪತಿ ಮ್ಯೂಸಿಕ್ ಮಾಡಿದ್ದಾರೆ. ಅರುಣ್ ಸುರೇಶ್ ಕ್ಯಾಮರಾವರ್ಕ್ ಮಾಡಿದ್ದಾರೆ. ಇವರ ಕೆಲಸವು ಇಡೀ ಚಿತ್ರದಲ್ಲಿ ಗಮನ ಸೆಳೆಯುತ್ತದೆ.
ಚಿತ್ರದ ಟ್ರೈಲರ್ ಯುಟ್ಯೂಬ್ ಅಲ್ಲೂ ಇದೆ. ಸನ್ನೆಕ್ಸ್ಟ್ ಅಲ್ಲಿ ಟೀಸರ್ ಕೂಡ ಇದೆ. ಆದರೆ, ಟ್ರೈಲರ್ ನೋಡಿದ್ರೆ ಚಿತ್ರ ಅರ್ಥ ಆಗುವುದಿಲ್ಲ. ಏನಿದು ಉಪೇಂದ್ರ ಅವರ ಚಿತ್ರ ನೋಡಿದ ಹಾಗಿದೆ ಅನಿಸುತ್ತದೆ. ಆದರೆ, ಇಡೀ ಚಿತ್ರ ನೋಡಿದ್ರೆ ಬೇರೆ ಅನುಭವ ಆಗುತ್ತದೆ ಅಂತ ಹೇಳಬಹುದು.












