Vinay Gowda: ಈ ಚಿತ್ರದಿಂದ ಜನ ಮತ್ತೆ ಥಿಯೇಟರ್‌ಗೆ ಬರ್ತಾರೆ! ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು? | | ACTPnews

ಈ ಚಿತ್ರದಿಂದ ಜನ ಮತ್ತೆ ಥಿಯೇಟರ್‌ಗೆ ಬರ್ತಾರೆ; ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು?


Last Updated:

ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ ಈಗೊಂದು ಒಂದು ಮಾತು ಹೇಳಿದ್ದಾರೆ. ಇದು ವೈರಲ್ ಮಾತೇನು ಅಲ್ಲ. ತಮ್ಮ ನಟನೆಯ ಚಿತ್ರವನ್ನ ನೋಡಲು ಜನ ಥಿಯೇಟರ್‌ಗೆ ಪಕ್ಕಾ ಬರ್ತಾರೆ ಅಂತ ಹೇಳಿರೋದೇ ಆಗಿದೆ. ಈ ವಿಚಾರದ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಈ ಚಿತ್ರದಿಂದ ಜನ ಮತ್ತೆ ಥಿಯೇಟರ್‌ಗೆ ಬರ್ತಾರೆ; ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು?
ಈ ಚಿತ್ರದಿಂದ ಜನ ಮತ್ತೆ ಥಿಯೇಟರ್‌ಗೆ ಬರ್ತಾರೆ; ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು?

ಬಿಗ್ ಬಾಸ್ (Bigg Boss) ಖ್ಯಾತಿಯ ನಟ ವಿನಯ್ ಗೌಡ (Vinay Gowda) ಈಗೊಂದು ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಇವರಿಗೆ ಇನ್ನಿಲ್ಲದಂತೆ ನಂಬಿಕೆ ಇದೆ. ಚಿತ್ರದ ಡೈರೆಕ್ಟರ್ ಬಗ್ಗೆನೂ ಭಾರೀ ಭರವಸೆ ಇದೆ. ಒಳ್ಳೆ ಚಿತ್ರ ಒಂದನ್ನ ಮಾಡಿರೋ ಖುಷಿಯಲ್ಲೂ ಇದ್ದಾರೆ. ಚಿತ್ರದ ಸಾಂಗ್ (Movie Song) ರಿಲೀಸ್ ಇವೆಂಟ್ ಅಲ್ಲಿಯೇ ವಿನಯ್ ಗೌಡ (Vinay Gowda) ತಮ್ಮ ಈ ಸಿನಿಮಾದ ಕುರಿತು ಹೇಳಿಕೊಂಡಿದ್ದಾರೆ. ಇನ್ನೊಂದು ವಿಷಯ ಅಂದರೆ ಈ ಚಿತ್ರಕ್ಕೆ ಇವರು ಹೀರೋ ಅಲ್ಲ. ಹೀರೋ ಬೇರೆ ಇದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮತ್ತೆ ಜನ ಬರ್ತಾರೆ

ವಿನಯ್ ಗೌಡ ಭಾರೀ ಭರವಸೆಯಲ್ಲಿದ್ದಾರೆ. ತಾವು ಪ್ರಮುಖ ಪಾತ್ರ ಮಾಡಿರೋ ಚಿತ್ರದ ಬಗ್ಗೆ ಇವರಿಗೆ ಭಾರೀ ನಂಬಿಕೆ ಇದೆ. ಅದನ್ನ ಇವರು ಅಷ್ಟೆ ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ.
big boss fame vinay gowda acted movie balaramana dinagalu latest updates

ಡೈರೆಕ್ಟರ್ ಗ್ರೇಟ್

ಈ ಚಿತ್ರದ ಹೆಸರು ಏನು ಅನ್ನುವ ಕುತೂಹಲಕ್ಕೆ ಇಲ್ಲಿ ಹೇಳೋದಾದ್ರೆ, ಆ ಚಿತ್ರದ ಹೆಸರು “ಬಲರಾಮನ ದಿನಗಳು” ಆಗಿದೆ. ಈ ಚಿತ್ರದ 3 ನೇ ಹಾಡು ರಿಲೀಸ್ ಆಗಿದೆ. ಈ ಹಾಡಿನ ರಿಲೀಸ್ ಖುಷಿಯಲ್ಲಿ ಚಿತ್ರ ತಂಡ ಇದೆ. ಚಿತ್ರದ ಕೆಲಸ ಮುಗಿದಿರೋ ಸಂತೋಷವು ಇದೆ. ಈ ಚಿತ್ರದ ಹಾಡಿನ ರಿಲೀಸ್ ಇವೆಂಟ್ ಅಲ್ಲಿಯೇ ವಿನಯ್ ಮೇಲೆ ಹೇಳಿದ ಮಾತನ್ನ ಹೇಳಿದ್ದಾರೆ.

ಡೈರೆಕ್ಟರ್ ಗ್ರೇಟ್

ಈ ಚಿತ್ರದ ಡೈರೆಕ್ಟರ್ ಕೆ.ಎಂ.ಚೈತನ್ಯ ಅವರ ಬಗ್ಗೆನೂ ವಿನಯ್ ಮಾತನಾಡಿದ್ದಾರೆ. ಈ ಚಿತ್ರವನ್ನ ಕೆ.ಎಂ.ಚೈತನ್ಯ ತುಂಬಾನೆ ಚೆನ್ನಾಗಿ ಮಾಡಿದ್ದಾರೆ. ಇವರ ಜ್ಞಾನಕ್ಕೂ ನನ್ನ ಸಲಾಮ್ ಅನ್ನುವ ಅರ್ಥದಲ್ಲೂ ಮಾತನಾಡಿದ್ದಾರೆ.

ಚಿತ್ರದ ನಾಯಕ ನಟ ವಿನೋದ್ ಪ್ರಭಾಕರ್ ಕೂಡ ಇದನ್ನೆ ಹೇಳಿದ್ದಾರೆ. ಅಷ್ಟು ನಂಬಿಕೆ ಡೈರೆಕ್ಟರ್ ಮತ್ತು ಕತೆ ಮೇಲೆ ವಿನಯ್ ಮತ್ತು ವಿನೋದ್ ಪ್ರಭಾಕರ್ ಅವರಿಗೆ ಇದೆ.

ವಿನೋದ್ ನಿರ್ಮಾಣ

ಬಲರಾಮನ ದಿನಗಳು ಚಿತ್ರವನ್ನ ವಿನೋದ್ ಕೂಡ ನಿರ್ಮಾಣ ಮಾಡಿದ್ದಾರೆ. ತಮ್ಮ ಈ ಚಿತ್ರವನ್ನ 7 ಕೋಟಿ ಬಜೆಟ್ ಅಲ್ಲಿಯೇ ಮಾಡ್ಬೇಕು ಅಂತ ಪ್ಲಾನ್ ಮಾಡಿದ್ದರು.

big boss fame vinay gowda acted movie balaramana dinagalu latest updates

ಮತ್ತೆ ಜನ ಬರ್ತಾರೆ

ಆದರೆ, ಈ ಚಿತ್ರದ ನಿರ್ಮಾಣಕ್ಕೆ ಶ್ರೇಯಸ್ ಅನ್ನೋರು ಕೂಡ ಸಾಥ್ ಕೊಟ್ಟರು. ಹಾಗಾಗಿಯೇ ಈ ಚಿತ್ರದ ಕ್ಯಾನ್‌ವಾಸ್ ದೊಡ್ಡದಾಗಿದೆ. ಬಾಲಿವುಡ್‌ನ ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿಯಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

ಚಿತ್ರದಲ್ಲಿವೆ 7 ಹಾಡುಗಳು

ಈ ಚಿತ್ರದಲ್ಲಿ 7 ಹಾಡುಗಳಿವೆ. ಈಗಾಗಲೇ 3 ಹಾಡುಗಳು ರಿಲೀಸ್ ಆಗಿವೆ. ಅಂದ್ಹಾಗೆ ಈ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಅದನ್ನ ಅಧಿಕೃತವಾಗಿಯೇ ಚಿತ್ರ ತಂಡವೇ ಹೇಳಿಕೊಂಡಿದೆ.

ಬಲರಾಮನ ಆ ದಿನಗಳು

ಚಿತ್ರದ ಟೈಟಲ್ ಹೇಳುವಂತೆ ಈ ಚಿತ್ರದಲ್ಲಿ ಬಲರಾಮನ ದಿನಗಳ ಕತೆ ಇದೆ. ಆದರೆ, ಇದು ಸತ್ಯ ಘಟನೆಗಳಿಂದ ಸ್ಪೂರ್ತಿ ಪಡೆದ ಚಿತ್ರವೇ ಆಗಿದೆ.

ಆದರೆ, ಇದನ್ನ ಡೈರೆಕ್ಟರ್ ಕೆ.ಎಂ.ಚೈತನ್ಯ ಕಾಲ್ಪನಿಕ ಚಿತ್ರ ಅಂತ ಹೇಳಿಕೊಂಡಿದ್ದಾರೆ. ಆ ದಿನಗಳು ಚಿತ್ರ 100% ಭೂಗತ ಲೋಕದ ಕತೆ ಆಗಿತ್ತು. ಆದರೆ, ಬಲರಾಮನ ದಿನಗಳು ಚಿತ್ರಕ್ಕೆ ಫಿಕ್ಷನ್ ಟಚ್ ಇದೆ ಅಂತಲೂ ಚಿತ್ರದ ಡೈರೆಕ್ಟರ್ ಕೆ.ಎಂ.ಚೈತನ್ಯ ಹೇಳಿದ್ದಾರೆ. ಹಾಗೆ ಈ ಚಿತ್ರವನ್ನ ನೋಡಲು ಜನ ಥಿಯೇಟರ್‌ಗೆ ಬರ್ತಾರೆ ಅನ್ನುವ ನಂಬಿಕೆನೂ ಚಿತ್ರ ತಂಡಕ್ಕೆ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports