Last Updated:
ಅಯ್ಯನ ಮನೆ-2 ವೆಬ್ ಸರಣಿ ಬರಲಿದೆ. ಚಿತ್ರ ತಂಡ ಮತ್ತು ಜೀ-5 ಈ ವಿಷಯ ಘೋಷಣೆ ಮಾಡಿದೆ. ಇದರ ಜೊತೆಗೆ ಇನ್ನೂ ಒಂದು ವಿಷಯವೂ ಗೊತ್ತಾಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ.
ಅಯ್ಯನ ಮನೆ (Ayyana Mane) ವೆಬ್ ಸೀರೀಸ್ (Web Series) ಕಮಾಲ್ ಮಾಡಿತ್ತು. ಕನ್ನಡದಲ್ಲಿ ವೆಬ್ ಸೀರೀಸ್ಗಳೇ ಇರಲಿಲ್ಲ. ಆದರೆ, ಜೀ-5 ಅಲ್ಲಿ ಈ ಒಂದು ಅಯ್ಯನ ಮನೆ ಮೊದಲು ಶುರು ಆಯಿತು. ಸಸ್ಪೆನ್ಸ್ ಥ್ರಿಲ್ಲರ್ ಕಂಟೆಂಟ್ನ ಈ ಸರಣಿಯಲ್ಲಿ ದಿಯಾ ಚಿತ್ರದ ಖುಷಿ ರವಿ ಇದ್ದರು. ಇವರ ಅಭಿನಯ ಸೂಪರ್ ಬಿಡಿ. ರಮೇಶ್ ಇಂದಿರಾ (Ramesh Indira) ಅವರು ಈ ಸರಣಿಯನ್ನ ಡೈರೆಕ್ಷನ್ ಮಾಡಿದ್ದರು. ಇದರಲ್ಲಿ ಒಂದು ರೋಲ್ ಕೂಡ ಮಾಡಿದ್ದರು. ವಿಷ್ಯ ಇದೀಗ ಇದಲ್ಲ. ಅಯ್ಯನ ಮನೆಯ-2 (Ayyana Mane-2) ಬರೋದಿದೆ. ಇದನ್ನ ಚಿತ್ರ ತಂಡವೇ ಹೇಳಿಕೊಂಡಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯ್ಯನ ಮನೆ-2 ತಯಾರಿ ಶುರು
ಜೀ-5 ಅಲ್ಲಿ ಬಂದ ಕನ್ನಡದ ಮೊದಲ ವೆಬ್ ಸರಣಿ ಕೂಡ ಇದಾಗಿತು. ಡೈರೆಕ್ಟರ್ ರಮೇಶ್ ಇಂದಿರಾ ಇದನ್ನ ಚೆನ್ನಾಗಿ ಮಾಡಿದ್ದರು. ದಿಯಾ ಚಿತ್ರ ಖ್ಯಾತಿಯ ನಟಿ ಖುಷಿ ರವಿ ಇಲ್ಲಿ ಅದ್ಭುತವಾಗಿ ನಟಿಸಿದ್ದರು. ಮಾನಸಿ ಸುಧೀರ್ ಇಲ್ಲಿ ಖಡಕ್ ಅತ್ತೆ ಪಾತ್ರ ಮಾಡಿದ್ರು. ಅಕ್ಷಯ್ ನಾಯಕ್ ಇಲ್ಲಿ ಖುಷಿ ರವಿಗೆ ಜೋಡಿ ಆಗಿದ್ದರು.
ಅಯ್ಯನ ಮನೆ-2 ವೆಬ್ ಸರಣಿ ಬರುತ್ತದೆ. ಇದರ ತಯಾರಿನೂ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಒಂದು ಅಯ್ಯನ ಮನೆ-2 ವೆಬ್ ಸರಣಿ ಸ್ಟ್ರೀಮಿಂಗ್ ಆಗುತ್ತಿದೆ.
ಈ ವಿಷಯವನ್ನ ಚಿತ್ರ ತಂಡ ಮತ್ತು ಜೀ-5 ಘೋಷಣೆ ಮಾಡಿದೆ. ಇದರೊಟ್ಟಿಗೆ ಇನ್ನು ಒಂದು ವಿಷಯ ಕೂಡ ಈಗ ಹೊರ ಬಂದಿದೆ.
ಅಯ್ಯನ ಮನೆ ವೆಬ್ ಸೀರೀಸ್
ಅಯ್ಯನ ಮನೆ ವೆಬ್ ಸರಣಿಗೆ ಅವಾರ್ಡ್ ಮಾಡಿದೆ. Zee5 ಅಯ್ಯನ ಮನೆ ಅತ್ಯುತ್ತಮ ವೆಬ್ ಸಿರೀಸ್ ಅವಾರ್ಡ್ ಮುಡಿಗೇರಿಸಿಕೊಂಡಿದೆ. ಅಂದ್ಹಾಗೆ ಈ ಅವಾರ್ಡ್ ಯಾವುದು ಅಂದ್ರೆ, ‘e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್’ ಅನ್ನೆ ಈ ಅಯ್ಯನ ಮನೆ ಪಡೆದುಕೊಂಡಿದೆ.
ಈ ಒಂದು ಅವಾರ್ಡ್ ಭಾರತೀಯ ಒಟಿಟಿ (OTT) ಮತ್ತು ಡಿಜಿಟಲ್ ಮನರಂಜನಾ ಕ್ಷೇತ್ರಕ್ಕೆ ನೀಡಲಾಗುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಆಗಿದೆ.
ಅಂತಹ ಈ ಅವಾರ್ಡ್ ಅನ್ನ ಜೀ-5 ಅಯ್ಯನ ಮನೆ ವೆಬ್ ಸರಣಿಗೆ ನೀಡಲಾಗಿದೆ. ಈ ಒಂದು ಖುಷಿಯಲ್ಲಿಯೇ ಇರೋ ಚಿತ್ರ ತಂಡ ಅಯ್ಯನ ಮನೆ-2 ಸರಣಿ ಕೂಡ ಬರುತ್ತದೆ ಅಂತಲೂ ಹೇಳಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













