Last Updated:
ರಂಗಾಯಣ ರಘು ಚಿತ್ರ ಜೀವನದಲ್ಲಿ ಇಲ್ಲಿವರೆಗೂ 399 ಚಿತ್ರ ಮಾಡಿದ್ದಾರೆ. ಈಗ 400 ನೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರದ ಟೈಟಲ್ ಹಾಗೂ ಇತರ ಮಾಹಿತಿ ಇಲ್ಲಿದೆ ಓದಿ.
ರಂಗಾಯಣ ರಘು (Rangayana Raghu) ಅವರು ಇಂಡಸ್ಟ್ರಿಗೆ ಬಂದು 28 ವರ್ಷ ಆಗಿದೆ. ಇಷ್ಟು ವರ್ಷಗಳಲ್ಲಿ 399 ಚಿತ್ರಗಳನ್ನ ಮಾಡಿದ್ದಾರೆ. ದುನಿಯಾ ಚಿತ್ರ (Duniya Movie) ಬರುವ ಮೊದಲೇ ಒಂದಷ್ಟು ಸಿನಿಮಾಗಳನ್ನ ಮಾಡಿದ್ದಾರೆ. 1998 ರಲ್ಲಿಯೆ ಇವರ ಜರ್ನಿ ಶುರು ಆಗಿದೆ. ಅಲ್ಲಿಂದ ಇಲ್ಲಿವರೆಗೂ ರಂಗಾಯಣ ರಘು (Rangayana Raghu) ಸಿನಿಮಾ ಮಾಡ್ತಾನೇ ಇದ್ದಾರೆ. ವಿಲನ್ ಪಾತ್ರಗಳನ್ನು ಮಾಡಿದ್ದಾರೆ. ಹಾಸ್ಯ ಪಾತ್ರಗಳನ್ನು ಮಾಡಿದ್ದಾರೆ. ತಂದೆ, ಅಣ್ಣ ಹೀಗೆ ವಿವಿಧ ರೀತಿಯ ಪಾತ್ರಗಳನ್ನ ಮಾಡಿ ಇಂದಿಗೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಹಾಗೆ ಈಗ 400 ನೇ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಅನ್ನ ಡಾಲಿ ಧನಂಜಯ್ (Daali Dhananjaya) ರಿಲೀಸ್ ಮಾಡಿದ್ದಾರೆ. ಈ ಚಿತ್ರದ ಟೈಟಲ್ ಏನು? ಹಾಗೂ ಈ ಸಿನಿಮಾದ ಇತರ ಮಾಹಿತಿ ಏನು ಅನ್ನೋದು ಇಲ್ಲಿದೆ ಓದಿ.
ಹೊಸ ಜೀವನ ಚಿತ್ರದ ಕಥೆ ಏನು
ಹೊಸ ಜೀವನ ಅನ್ನುವ ಈ ಟೈಟಲ್ ಈ ಹಿಂದೇನು ಬಳಕೆ ಆಗಿದೆ. ಶಂಕರ್ ನಾಗ್ ಮತ್ತು ಹಿಂದಿ ರಾಮಾಯಣದ ಸೀತಾ ಪಾತ್ರಧಾರಿ ದೀಪಿಕಾ ಅಭಿನಯ ಈ ಚಿತ್ರವನ್ನ ಎಚ್.ಆರ್.ಭಾರ್ಗವ್ ಡೈರೆಕ್ಷನ್ ಮಾಡಿದ್ದರು. 1990 ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು.
ರಂಗಾಯಣ ರಘು ಅವರ ಈ ಚಿತ್ರವನ್ನ ಮೋಹನ್ ಕುಮಾರ್ ಹನುಮಯ್ಯ ಡೈರೆಕ್ಷನ್ ಮಾಡುತ್ತಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ.
ರಂಗಾಯಣ ರಘು ಅವರ ಈ ಚಿತ್ರದಲ್ಲಿಇನ್ನು ಹಲವು ಪಾತ್ರಗಳಿವೆ. ಅವುಗಳನ್ನ ಕನ್ನಡದ ಇತರ ಕಲಾವಿದರು ನಿರ್ವಹಿಸುತ್ತಿದ್ದಾರೆ. ಆ ಕಲಾವಿದರು ಯಾರು ಅನ್ನೋದನ್ನ ಚಿತ್ರ ತಂಡ ರಿವೀಲ್ ಮಾಡಿದೆ.
ಹಾಗೆ ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಾಲ, ಅಚ್ಯುತ್ ಕುಮಾರ್, ಶಿವರಾಜ್ ಕೆ ಆರ್ ಪೇಟೆ, ಸುಹಾಸ್ ಅತ್ರೆಯಸ್, ಅಭಿ ಸಾಮ್ರಾಟ್, ಉದಯ್ ಆಚಾರ್ ಚಿತ್ರದ ಈ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಆಗ ಶಂಕರ್ ನಾಗ್ ಈಗ ರಂಗಾಯಣ ರಘು
ಈ ಚಿತ್ರವನ್ನ ಡೈರೆಕ್ಟ್ ಮಾಡ್ತಿರೋ ಮೋಹನ್ ಕುಮಾರ್ ಹನುಮಯ್ಯ ನಿರ್ಮಾಣದಲ್ಲೂ ಸಾಥ್ ಕೊಟ್ಟಿದ್ದಾರೆ. ಈ ಚಿತ್ರವನ್ನ ಜಿ.ಎಸ್ ಸಂಜೀವ್ ಪ್ರಸಾದ್ ನಿರ್ಮಿಸುತ್ತಿದ್ದಾರೆ. ಇವರಿಗೆ ಮೋಹನ್ ಕುಮಾರ್ ಹನುಮಯ್ಯ ಕೂಡ ಸಾಥ್ ಕೊಟ್ಟಿದ್ದಾರೆ.
ಹೊಸ ಜೀವನ ಚಿತ್ರದಲ್ಲಿ ಪ್ರೀತಿ ಇದೆ. ಸ್ನೇಹವೂ ಇದೆ. ಜೀವನ ಹೋರಾಟವು ಇದೆ. ಜೀವನದ ಮೌಲ್ಯದ ಸುತ್ತ ಕತೆನೂ ಇದೆ. ಸದ್ಯಕ್ಕೆ ಈ ಚಿತ್ರ ಟೈಟಲ್ ಲಾಂಚ್ ಆಗಿದೆ.
ಮೇಲೆ ಹೇಳಿದಂತೆ ಸಿನಿಮಾದ ಒಂದಷ್ಟು ಮಾಹಿತಿ ಹೊರ ಬಂದಿದೆ. ಇನ್ನುಳಿದಂತೆ ಈ ಚಿತ್ರ ತನ್ನ ಟೈಟಲ್ ನಿಂದಲೇ ಗಮನ ಸೆಳೆದಿದೆ. ರಂಗಾಯಣ ರಘು ಅವರ 400 ನೇ ಚಿತ್ರ ಅಂತಲೂ ಕುತೂಹಲ ಮೂಡಿಸಿದೆ.
Bangalore [Bangalore],Bangalore,Karnataka
Jun 13, 2026 11:07 PM IST













