Last Updated:
ಕೇವಲ ಮಹಾನಗರಗಳಿಗೆ ಸೀಮಿತವಾಗಿದ್ದ ರಿಯಾಯಿತಿಯನ್ನು ಸರ್ಕಾರ ಗ್ರಾಮಗಳಿಗೂ ವಿಸ್ತರಿಸಿದೆ. ಈ ತೆರಿಗೆ ಮೇಲೆ 5% ರಿಯಾಯಿತಿಯನ್ನು ಘೋಷಿಸಿದ್ದು ಇದೇ ತಿಂಗಳ 30 ರ ಒಳಗೆ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ
ಬೆಂಗಳೂರು: ನೀವು ಕರ್ನಾಟಕದ ಗ್ರಾಮೀಣ ಭಾಗದಲ್ಲಿ (Village Area) ವಾಸಿಸುತ್ತಿದ್ದೀರಾ? ನಿಮ್ಮ ಹೆಸರಿನಲ್ಲಿ ಮನೆ ಅಥವಾ ಖಾಲಿ ಸೈಟ್ ಇದೆಯಾ? ಹಾಗಾದರೆ ತಕ್ಷಣ ಎಚ್ಚೆತ್ತುಕೊಳ್ಳಿ! ಪಂಚಾಯತ್ ರಾಜ್ (Panchayat Raj) ಆಯುಕ್ತರ ಕಚೇರಿಯು ರಾಜ್ಯದ (State) ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ (Property Owner) ಅತ್ಯಂತ ಪ್ರಮುಖವಾದ ಎಚ್ಚರಿಕೆಯೊಂದನ್ನು ನೀಡಿದೆ.
ನೀವೇನಾದರೂ ನಿರ್ಲಕ್ಷ್ಯ ವಹಿಸಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಆದರೆ, ಸಕಾಲದಲ್ಲಿ ಒಂದು ಕೆಲಸ ಮಾಡಿದರೆ ಸರ್ಕಾರದಿಂದಲೇ ನಿಮಗೆ ಭರ್ಜರಿ ಲಾಭ ಸಿಗಲಿದೆ! ಏನದು ಆಫರ್? ಇಲ್ಲಿದೆ ಪೂರ್ಣ ವಿವರ:
ಹೌದು, ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಆಸ್ತಿ ತೆರಿಗೆದಾರರಿಗೆ ಈ ಭರ್ಜರಿ ಕೊಡುಗೆಯನ್ನು ನೀಡಿದೆ.
ಏಕ ಕಂತಿನಲ್ಲಿ ಪಾವತಿಸಿ, ಲಾಭ ಪಡೀರಿ: 2026-27ನೇ ಸಾಲಿನ ಸಂಪೂರ್ಣ ವಾರ್ಷಿಕ ಆಸ್ತಿ ತೆರಿಗೆಯನ್ನು ಏಕ ಕಂತಿನಲ್ಲಿ ಪಾವತಿಸಿದರೆ ಬರೋಬ್ಬರಿ ಶೇ. 5ರಷ್ಟು ರಿಯಾಯಿತಿ (Rebate) ಸಿಗಲಿದೆ.
ಕೈಯಲ್ಲಿದೆ ಇನ್ನು ಕೇವಲ 18 ದಿನ ಮಾತ್ರ!: ಈ ರಿಯಾಯಿತಿ ಸೌಲಭ್ಯವನ್ನು ಪಡೆಯಲು 30.06.2026 (ಜೂನ್ 30, 2026) ಕೊನೆಯ ದಿನಾಂಕವಾಗಿದೆ. ಇಲಾಖೆಯು ಪೋಸ್ಟರ್ನಲ್ಲಿ ಎಚ್ಚರಿಸಿರುವಂತೆ ಇನ್ನು ಕೇವಲ 18 ದಿನಗಳು ಮಾತ್ರ ಬಾಕಿ ಉಳಿದಿವೆ!
ಒಂದು ವೇಳೆ ನೀವು ನಿಗದಿತ ಸಮಯದೊಳಗೆ ತೆರಿಗೆ ಪಾವತಿಸದಿದ್ದರೆ ಸುಮ್ಮನೆ ಬಿಡುವುದಿಲ್ಲ. ತಡವಾಗಿ ಪಾವತಿಸುವ ತೆರಿಗೆಗೆ ಪ್ರತಿ ತಿಂಗಳು ಶೇ. 2ರಷ್ಟು ದಂಡ (Penalty) ವಿಧಿಸಲಾಗುತ್ತದೆ. ಹಾಗಾಗಿ, ದಂಡ ಕಟ್ಟುವ ಬದಲು ಇಂದೇ ತೆರಿಗೆ ಕಟ್ಟಿ ರಿಯಾಯಿತಿ ಪಡೆಯುವುದು ಬುದ್ಧಿವಂತಿಕೆ.
ಈ ಬಾರಿ ತೆರಿಗೆ ಕಟ್ಟಲು ಪಂಚಾಯತಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಡಿಜಿಟಲ್ ಪಾವತಿಯನ್ನು ಪ್ರೋತ್ಸಾಹಿಸಲು ಸರ್ಕಾರವು ಅತ್ಯಂತ ಸುಲಭವಾದ ಮಾರ್ಗಗಳನ್ನು ಒದಗಿಸಿದೆ:
ಏನಾದರೂ ಸಮಸ್ಯೆ ಇದೆಯಾ? ಈ ನಂಬರ್ಗೆ ತಕ್ಷಣ ಕರೆ ಮಾಡಿ!
ನಿಮ್ಮ ಆಸ್ತಿ ತೆರಿಗೆ ಲೆಕ್ಕಾಚಾರದಲ್ಲಿ ಗೊಂದಲವಿದ್ದರೆ ಅಥವಾ ಆನ್ಲೈನ್ ಪಾವತಿಯಲ್ಲಿ ಸಮಸ್ಯೆ ಎದುರಾದರೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇದಕ್ಕಾಗಿ ಸರ್ಕಾರವು ವಿಶೇಷ ‘ಪಂಚಮಿತ್ರ ಹೆಲ್ಪ್ಲೈನ್’ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಪಂಚಮಿತ್ರ ಸಹಾಯವಾಣಿ: 8277506000 ಹೆಚ್ಚಿನ ಸಹಾಯಕ್ಕಾಗಿ ನೀವು ನಿಮ್ಮ ಸ್ಥಳೀಯ ಗ್ರಾಮ ಪಂಚಾಯತಿ ಕಚೇರಿ ಅಥವಾ ಪಂಚಾಯತ್ ಡೆವಲಪ್ಮೆಂಟ್ ಅಧಿಕಾರಿಗಳನ್ನು (PDO) ನೇರವಾಗಿ ಸಂಪರ್ಕಿಸಬಹುದು. ನಿಮ್ಮ ಆಸ್ತಿಯ ಖಾತಾ ವಿವರಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಂಡು ಇಂದೇ ತೆರಿಗೆ ಪಾವತಿಸಿ ಸರ್ಕಾರದ 5% ರಿಯಾಯಿತಿಯ ಲಾಭವನ್ನು ಪಡೆದುಕೊಳ್ಳಿ!
Bangalore [Bangalore],Bangalore,Karnataka













