FIFA World Cup 2026 ಲೈವ್‌ ನೋಡೋದು ಎಲ್ಲಿ? ಉಚಿತವಾಗಿ ವೀಕ್ಷಿಸಲು ಇಲ್ಲಿದೆ ಸೂಪರ್ ಟ್ರಿಕ್! | ಕ್ರೀಡಾ ಸುದ್ದಿ | ACTPnews

News18


Last Updated:

FIFA World Cup 2026: ಇಡೀ ಜಗತ್ತೇ ಕಾಯ್ತಾ ಇರೋ ಫಿಫಾ ವಿಶ್ವಕಪ್ ಧಮಾಕಾ ಶುರುವಾಗಿದೆ. ಭಾರತದಲ್ಲಿ ಈ ಹೈ-ವೋಲ್ಟೇಜ್ ಪಂದ್ಯಗಳನ್ನ ಟಿವಿಯಲ್ಲಿ ಮತ್ತು ಮೊಬೈಲ್‌ನಲ್ಲಿ ಉಚಿತವಾಗಿ ಎಲ್ಲಿ ನೋಡಬೇಕು ಅನ್ನೋ ಕಂಪ್ಲೀಟ್ ಗೈಡ್ ಇಲ್ಲಿದೆ, ಮಿಸ್ ಮಾಡ್ದೆ ಓದಿ.

News18
News18

ಇಡೀ ಪ್ರಪಂಚದಾದ್ಯಂತ ಇರೋ ಫುಟ್‌ಬಾಲ್ (Football) ಪ್ರಿಯರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ ಬಹುನಿರೀಕ್ಷಿತ ‘ಫಿಫಾ ವಿಶ್ವಕಪ್ 2026’ (FIFA World Cup 2026) ಕ್ರೀಡಾ ಹಬ್ಬ ಇಂದಿನಿಂದ ಅದ್ದೂರಿಯಾಗಿ ಆರಂಭವಾಗಿದೆ. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸುತ್ತಿರೋ ಈ ಬಿಗ್ ಟೂರ್ನಮೆಂಟ್ ಅನ್ನು ಭಾರತದಲ್ಲಿ ಎಲ್ಲಿ ವೀಕ್ಷಿಸಬೇಕು (Where to watch) ಅನ್ನೋ ಗೊಂದಲದಲ್ಲಿದ್ದ ಫುಟ್‌ಬಾಲ್ ಅಭಿಮಾನಿಗಳಿಗೆ (Football fans) ಪಂದ್ಯಾವಳಿ ಶುರುವಾಗುವ ಕೆಲವೇ ದಿನಗಳ ಮುಂಚೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.

ಭಾರತದಲ್ಲಿ 2026ರ ಫಿಫಾ ವಿಶ್ವಕಪ್ (FIFA World Cup) ಪ್ರಸಾರ ಮಾಡುವ ಆಫೀಶಿಯಲ್ ಹಕ್ಕುಗಳನ್ನು ಜೀ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಪಡೆದುಕೊಂಡಿದೆ. ಇದರಿಂದಾಗಿ ದೇಶದ ಕೋಟ್ಯಂತರ ಫುಟ್‌ಬಾಲ್ ಪ್ರೇಮಿಗಳು ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ (Digital platforms) ಆರಾಮವಾಗಿ ಲೈವ್ ಪಂದ್ಯಗಳನ್ನು ನೋಡಿ ಎಂಜಾಯ್ ಮಾಡಬಹುದು.

ಜೀ ಜೊತೆ ಫಿಫಾ ಲಾಂಗ್ ಟರ್ಮ್ ಡೀಲ್

ಈ ಒಪ್ಪಂದ ಬರೀ ಈ ಬಾರಿಯ ವಿಶ್ವಕಪ್‌ಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಜೀ ಸಂಸ್ಥೆಯು ಫಿಫಾ ಜೊತೆ ದೀರ್ಘಾವಧಿಯ ಬಿಗ್ ಪಾರ್ಟ್‌ನರ್‌ಶಿಪ್ ಮಾಡಿಕೊಂಡಿದೆ. ವರದಿಗಳ ಪ್ರಕಾರ, 2034 ರವರೆಗೆ ನಡೆಯಲಿರುವ ಇನ್ನು 38 ಫೀಫಾ ಟೂರ್ನಮೆಂಟ್‌ಗಳನ್ನು ಭಾರತದಲ್ಲಿ ಪ್ರಸಾರ ಮಾಡುವ ಹಕ್ಕನ್ನು ಜೀ ತನ್ನದಾಗಿಸಿಕೊಂಡಿದೆ. ಇದರಿಂದ ಅಂತರರಾಷ್ಟ್ರೀಯ ಫುಟ್‌ಬಾಲ್ ಪ್ರಸಾರ ಮಾರುಕಟ್ಟೆಯಲ್ಲಿ ಜೀ ಸಂಸ್ಥೆಯ ತಾಕತ್ತು ಇನ್ನು ಜೋರಾಗಿದೆ.

ಜೀ ಲಾಂಚ್ ಮಾಡಿದೆ 4 ಹೊಸ ಸ್ಪೋರ್ಟ್ಸ್ ಚಾನೆಲ್!

ತನ್ನ ಸ್ಪೋರ್ಟ್ಸ್ ನೆಟ್‌ವರ್ಕ್ ಅನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಜೀ ಸಂಸ್ಥೆ ಈಗ ಹೊಸದಾಗಿ 4 ಸ್ಪೆಷಲ್ ಕ್ರೀಡಾ ಚಾನೆಲ್‌ಗಳನ್ನು ಲಾಂಚ್ ಮಾಡಿದೆ. ಯುನೈಟ್ 8 ಸ್ಪೋರ್ಟ್ಸ್ 1, ಯುನೈಟ್ 8… 1 ಎಚ್‌ಡಿ, ಯುನೈಟ್ 8 ಸ್ಪೋರ್ಟ್ಸ್ 2 ಮತ್ತು ಯುನೈಟ್ 8… 2 ಎಚ್‌ಡಿ ಚಾನೆಲ್‌ಗಳಲ್ಲಿ ಇನ್ಮುಂದೆ ವರ್ಲ್ಡ್ ಕಪ್ ಪಂದ್ಯಗಳು ಲೈವ್ ಬರಲಿವೆ. ಇನ್ನು ಮೊಬೈಲ್‌ನಲ್ಲಿ ಮ್ಯಾಚ್ ನೋಡೋರಿಗೆ ‘Zee5’ ಒಟಿಟಿ ಆ್ಯಪ್‌ನಲ್ಲಿ ಎಲ್ಲಾ ಪ್ರಮುಖ ಪಂದ್ಯಗಳು ಸಿಗಲಿವೆ.

Zee5 ಸಬ್‌ಸ್ಕ್ರಿಪ್ಷನ್ ಪ್ಲಾನ್ ಇಲ್ಲಿದೆ

ಯಾರಿಗೆ ಮೊಬೈಲ್ ಅಥವಾ ಸ್ಮಾರ್ಟ್ ಟಿವಿಯಲ್ಲಿ ಮ್ಯಾಚ್ ನೋಡಬೇಕು ಅಂತ ಆಸೆ ಇದೆಯೋ, ಅಂತವರಿಗಾಗಿ Zee5 ಆ್ಯಪ್ ಎರಡು ಸೂಪರ್ ಆಫರ್‌ಗಳನ್ನು ಇಟ್ಟಿದೆ. 3 ತಿಂಗಳ ಪ್ಯಾಕೇಜ್ ಬೇಕು ಅಂದ್ರೆ 799 ರೂಪಾಯಿ ಹಾಗೂ ಇಡೀ ವರ್ಷದ ಅನ್ಲಿಮಿಟೆಡ್ ಪ್ಲಾನ್ ಬೇಕು ಅಂದ್ರೆ 1,699 ರೂಪಾಯಿ ಚಂದಾದಾರಿಕೆ ಕಟ್ಟಬೇಕು. ಇದರಿಂದ ಮೊಬೈಲ್, ಟ್ಯಾಬ್ಲೆಟ್ ಮತ್ತು ಟಿವಿ ಎಲ್ಲದರಲ್ಲೂ ಮ್ಯಾಚ್ ನೋಡಬಹುದು.

ಡಿಡಿ ಸ್ಪೋರ್ಟ್ಸ್‌ನಲ್ಲಿ ಕಂಪ್ಲೀಟ್ ಉಚಿತ ಧಮಾಕಾ!

ಒಂದು ವೇಳೆ ನಿಮ್ಮ ಹತ್ತಿರ ದುಡ್ಡು ಕೊಟ್ಟು ಸಬ್‌ಸ್ಕ್ರಿಪ್ಷನ್ ತಗೋಳೋಕೆ ಆಗಲ್ಲ ಅಂದ್ರೂ ಚಿಂತೆ ಇಲ್ಲ. ಜನಸಾಮಾನ್ಯರಿಗಾಗಿ ಸರ್ಕಾರಿ ಚಾನೆಲ್ ಆದ ‘ಡಿಡಿ ಸ್ಪೋರ್ಟ್ಸ್’ ಈ ಟೂರ್ನಿಯ ಪ್ರಮುಖ ಪಂದ್ಯಗಳನ್ನು ಕಂಪ್ಲೀಟ್ ಆಗಿ ಫ್ರೀಯಾಗಿ ಪ್ರಸಾರ ಮಾಡ್ತಾ ಇದೆ. ಉದ್ಘಾಟನಾ ಪಂದ್ಯದ ಜೊತೆಗೆ ಕ್ವಾರ್ಟರ್-ಫೈನಲ್, ಸೆಮಿಫೈನಲ್ ಮತ್ತು ಜುಲೈ 19 ರಂದು ನಡೆಯಲಿರುವ ಹೈ-ವೋಲ್ಟೇಜ್ ಫೈನಲ್ ಪಂದ್ಯವನ್ನು ಕೂಡ ನೀವು ಡಿಡಿ ಫ್ರೀ ಡಿಶ್‌ನಲ್ಲಿ ಉಚಿತವಾಗಿ ಲೈವ್ ನೋಡಬಹುದು.

ಮೊದಲ ಮ್ಯಾಚ್‌ನಲ್ಲೇ ಮೆಕ್ಸಿಕೋ ಭರ್ಜರಿ ಜಯ

ಮೊದಲ ಮ್ಯಾಚ್‌ನ ಹೈಲೈಟ್ಸ್ ನೋಡೋಣ. ಮೆಕ್ಸಿಕೋ ಸಿಟಿಯ ಪ್ರಸಿದ್ಧ ಎಸ್ಟಾಡಿಯೊ ಅಜ್ಟೆಕಾ ಕ್ರೀಡಾಂಗಣದಲ್ಲಿ, ಸುಮಾರು 83,000 ಪ್ರೇಕ್ಷಕರ ಮುಂದೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ದಕ್ಷಿಣ ಆಫ್ರಿಕಾವನ್ನು 2-0 ಗೋಲುಗಳಿಂದ ಸೋಲಿಸಿ ಜಯ ಸಾಧಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed