Pavithra Gowda: ಕಂಬಿ ಹಿಂದೆ ಕುಳಿತು ಪುಸ್ತಕ-ಪೆನ್ನು ಹಿಡಿದ ಪವಿತ್ರಾ! ಬರೆಯುತ್ತಿರೋದೇನು? ಆತ್ಮಚರಿತ್ರೆನಾ? | Pavithra Gowda spending time in writing | | ACTPnews

ಪವಿತ್ರಾ ಗೌಡ


Last Updated:

Pavithra Gowda: ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರದಲ್ಲಿ ಏನು ಮಾಡುತ್ತಿದ್ದಾರೆ? ದರ್ಶನ್ ಪುಸ್ತಕ ಓದುತ್ತಿದ್ದರೆ, ಪವಿತ್ರಾ ಗೌಡ ಬರೆಯುತ್ತಿದ್ದಾರಾ?

ಪವಿತ್ರಾ ಗೌಡ
ಪವಿತ್ರಾ ಗೌಡ

ದರ್ಶನ್ (Darshan) ಅರೆಸ್ಟ್ ಆಗಿ 2 ವರ್ಷಗಳಾದವು. ಜೂನ್ 11ಕ್ಕೆ ದರ್ಶನನನ್ನು ಪೊಲೀಸರು (Police) ಅರೆಸ್ಟ್ ಮಾಡಿ 2 ವರ್ಷಗಳಾಯಿತು. ನಟ ದರ್ಶನ್ ಅವರ ಜಾಮೀನು ಅರ್ಜಿ  (Bail) ಕೂಡಾ ರಿಜೆಕ್ಟ್ ಆದ ನಂತರ ಅವರು ಪರಪ್ಪನ ಅಗ್ರಹಾರಲ್ಲಿಯೇ ಇದ್ದಾರೆ. ಅವರು ವಾರಕ್ಕೆ ಮೂರು ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ. ಹಾಗಿದ್ದರೆ ಪವಿತ್ರಾ ಗೌಡ ಏನು ಮಾಡುತ್ತಿದ್ದಾರೆ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪವಿತ್ರಾ ಗೌಡ ಅವರು ಏನು ಮಾಡುತ್ತಿದ್ದಾರೆ? ಅವರು ಜೈಲಿನ ಊಟಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಅವರು ಮನೆ ಊಟಕ್ಕಾಗಿ ಹಲವಾರು ಸಲ ಅರ್ಜಿ ಸಲ್ಲಿಸಿದರೂ ಕೂಡಾ ಅದು ಫಲ ಕೊಡಲಿಲ್ಲ. ಹಾಗಿರುವಾಗ ಅವರು ಜೈಲಿನಲ್ಲಿ ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ.

ಪವಿತ್ರಾ ಗೌಡ ಅವರು ಜೈಲಿನಲ್ಲಿದ್ದುಕೊಂಡು ಬರೆಯೋಕೆ ಶುರು ಮಾಡಿದ್ದಾರೆ ಎನ್ನಲಾಗಿದೆ. ಅವರು ಆತ್ಮಚರಿತ್ರೆ ಬರೆಯುತ್ತಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದ್ದಾರೆ. ಅವರು ವೈಟ್ ಪೇಪರ್ ಪೆನ್ ತೆಗೆದುಕೊಂಡಿದ್ದಾರೆ. ಅವರು ತಮ್ಮ ಲೈಫ್, ತಮ್ಮ ಲೈಫ್ ಏನೇನಾಯ್ತು ಎಂದು ಬರೆಯುತ್ತಿದ್ದಾರೆ ಎನ್ನುವಂತಹ ಮಾಹಿತಿ ಹರಿದಾಡುತ್ತಿದೆ.

ಬ್ಯಾರಕ್​ನಲ್ಲಿ ಅವರು ಬರೆಯುವುದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಅವರು ಆತ್ಮಚರಿತ್ರೆ ಬರೆಯುತ್ತಿದ್ದಾರಾ ಎನ್ನುವ ಒಂದು ಪ್ರಶ್ನೆ ಇದೆ. ಈಗ ಈ ಕೇಸ್​​ನಲ್ಲಿ ಟ್ರಯಲ್ ನಡೆಯುತ್ತಿದ್ದು, ವಿಚಾರಣಾ ಹಂತದಲ್ಲಿ ವಾದ-ಪ್ರತಿವಾದ ನಡೆಯುತ್ತಿದೆ. ಸಾಕ್ಷಿಗಳನ್ನು ಮರುಪ್ರಶ್ನೆ ಮಾಡುವಂತದ್ದು ಈ ರೀತಿ ಒಂದು ವರ್ಷದ ಒಳಗಾಗಿ ವಿಚಾರಣೆ ನಡೆಸಬೇಕಾಗಿದೆ.

ಜೂನ್ 11ರಂದು ದರ್ಶನ್ ಅವರು ಅರೆಸ್ಟ್ ಆಗಿದ್ದರು. ಅದಾಗಿ ಈಗ 2 ವರ್ಷಗಳಾಗಿವೆ. ದರ್ಶನ್ ಅರೆಸ್ಟ್ ಆದಾಗ ದೇಶಾದ್ಯಂತ ಸುದ್ದಿಯಾಗಿತ್ತು. ಸದ್ಯ ಅವರೂ ಕೂಡಾ ಜೈಲಿನಲ್ಲಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports