Last Updated:
ಮೊಗ್ಗಿನ ಮನಸ್ಸಿನ ಬೆಡಗಿ ಶುಭಾ ಪೂಂಜಾ ಅಭಿನಯದ ಕೆಲವು ಚಿತ್ರಗಳು ಒಟಿಟಿಯಲ್ಲಿ ಲಭ್ಯ ಇವೆ. ಇದರೊಟ್ಟಿಗೆ ಯುಟ್ಯೂಬ್ ಅಲ್ಲೂ ಇವರ ಕೆಲವು ಚಿತ್ರಗಳನ್ನ ಉಚಿತವಾಗಿಯೇ ನೋಡಬಹುದು. ಈ ಎಲ್ಲ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮೊಗ್ಗಿನ ಮನಸಿನ (Moggina Manasu) ಹುಡುಗಿ ಶುಭಾ ಪೂಂಜಾ (Shubha Poonja) ಇಷ್ಟು ದಿನ ತಮ್ಮ ಚಿತ್ರಗಳ ಮೂಲಕ ಸುದ್ದಿಯಲ್ಲಿ ಇರ್ತಾ ಇದ್ದರು. ತಮ್ಮ ಪ್ರಾಣಿ ಪ್ರೀತಿಯಿಂದಲೂ (Animal Love) ಸುದ್ದಿ ಆಗುತ್ತಿದ್ದರು. ಆದರೆ, ಇದೀಗ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ನ್ಯೂಸ್ ಅಲ್ಲಿದ್ದಾರೆ. ಈ ಬಗ್ಗೆ ನಾನೇ ಮಾಧ್ಯಮಗಳಿಗೆ ಹೇಳ್ತೀನಿ ಅಂತಲೂ ಹೇಳಿಕೊಂಡಿದ್ದಾರೆ. ಅದು ಬಿಟ್ಟರೆ, ಇವರ ಸಿನಿಮಾ ವಿಚಾರಕ್ಕೆ ಬಂದ್ರೆ, ಇವರ ಸಿನಿಮಾಗಳು ಒಟಿಟಿಯಲ್ಲೂ ಇವೆ. ಯುಟ್ಯೂಬ್ ಅಲ್ಲೂ ಸಿಗುತ್ತವೆ. ಈ ಎಲ್ಲ ಸಿನಿಮಾಗಳ (Movies) ಒಂದು ಸ್ಟೋರಿ ಇಲ್ಲಿದೆ ಓದಿ.
ಎಂ.ಎಸ್.ರಮೇಶ್ ಡೈರೆಕ್ಷನ್
ಅಂತಹ ಶುಭಾ ಪೂಂಜಾ ಅವರ ಸಿನಿಮಾಗಳಲ್ಲಿ ಚಂಡ ಚಿತ್ರದಲ್ಲಿ ದುನಿಯಾ ವಿಜಯ್ ಜೋಡಿ ಆಗಿದ್ದಾರೆ. ಈ ಚಿತ್ರ ಸದ್ಯ ಪ್ರೈಮ್ ವಿಡಿಯೋದಲ್ಲಿ ಲಭ್ಯ ಇದೆ. ಎಸ್.ನಾರಾಯಣ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಪ್ರೈಮ್ ವಿಡಿಯೋದಲ್ಲಿ ಚಂಡ ಚಿತ್ರ ಸಿಗುತ್ತದೆ. ಆದರೆ, ಶುಭಾ ಪೂಂಜಾ ಅವರ ಚಿತ್ರ ಜೀವನದ ಹಲವು ಚಿತ್ರಗಳು ಸನ್ನೆಕ್ಸ್ಟ್ ಅಲ್ಲಿಯೇ ಇವೆ. ಇವುಗಳಲ್ಲಿ ಯಾವೆಲ್ಲ ಇವೆ ಅನ್ನೋದು ಇಲ್ಲಿದೆ ಓದಿ.
ತಾಕತ್ ಚಿತ್ರ; ಈ ಚಿತ್ರದಲ್ಲಿ ದುನಿಯಾ ವಿಜಯ್ ಇದ್ದಾರೆ. ಶುಭಾ ಪೂಂಜಾ ನಾಯಕಿ ಆಗಿದ್ದಾರೆ. ಎಂ.ಎಸ್.ರಮೇಶ್ ಅವರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಕಂಠೀರವ ಚಿತ್ರ: ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಶುಭಾ ಪೂಂಜಾ ಮತ್ತು ರಿಷಿಕಾ ಸಿಂಗ್ ಈ ಚಿತ್ರದಲ್ಲಿದ್ದಾರೆ . ತುಷಾರ್ ರಂಗನಾಥ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಎಸ್.ನಾರಾಯಣ್ ಡೈರೆಕ್ಷನ್ ಸಿನಿಮಾ
ಪರಾರಿ ಸಿನಿಮಾ: ಶುಭಾ ಪೂಂಜಾ ಅಭಿನಯದ ಪರಾರಿ ಚಿತ್ರವೂ ಇದೇ ಸನ್ನೆಕ್ಟ್ ಅಲ್ಲಿದೆ. ಕೆ.ಎಂ.ಚೈತನ್ಯ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದೊಂದು ಕಾಮಿಡಿ ಚಿತ್ರವೇ ಆಗಿದೆ.
ಜಾಕ್ ಪಾಟ್: ಶುಭಾ ಪೂಂಜಾ ಅಭಿನಯದ ಜಾಕ್ ಪಾಟ್ ಚಿತ್ರವೂ ಇಲ್ಲಿದೆ. 2006 ರಲ್ಲಿ ಬಂದ ಈ ಚಿತ್ರದಲ್ಲಿ ಡೈರೆಕ್ಟರ್ ಎ.ಹರ್ಷ ಜೋಡಿ ಆಗಿದ್ದಾರೆ. ನಿರಂಜನ್ ಇದನ್ನ ಡೈರೆಕ್ಷನ್ ಮಾಡಿದ್ದಾರೆ.
ನಾನಲ್ಲ ಚಿತ್ರ: ಡೈರೆಕ್ಟರ್ ದಿನೇಶ್ ಬಾಬು ಅವರ ನಾನಲ್ಲ ಚಿತ್ರದಲ್ಲೂ ಶುಭಾ ಪೂಂಜಾ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ತರುಣ್ ಚಂದ್ರ ಜೋಡಿ ಆಗಿದ್ದಾರೆ.
ಶುಭಾ ಪೂಂಜಾ ಅಭಿನಯದ ಕೆಲವು ಚಿತ್ರಗಳು ಯುಟ್ಯೂಬ್ ಅಲ್ಲೂ ಲಭ್ಯ ಇವೆ. ಇವುಗಳನ್ನ ಉಚಿತವಾಗಿಯೇ ನೋಡಬಹುದು. ಹಾಗೆ ಅಂಬುಜಾ ಅನ್ನುವ ಚಿತ್ರ ಇದೆ. ಶುಭಾ ಪೂಂಜಾ ಇದರಲ್ಲಿ ನಂದಿನಿ ಅನ್ನುವ ಪಾತ್ರ ಮಾಡಿದ್ದಾರೆ. ಆದರೆ, ಈ ಚಿತ್ರದ ಹಿಂದಿ ಡಬ್ಡ್ ವರ್ಶನ್ ನಿಮಗೆ ಇಲ್ಲಿ ಸಿಗುತ್ತದೆ.
ಸನ್ನೆಕ್ಸ್ಟ್ ಅಲ್ಲಿ ಶುಭಾ ಸಿನಿಮಾಗಳು
ಕೋಟಿಗೊಂದ್ ಲವ್ ಸ್ಟೋರಿ ಚಿತ್ರವೂ ಯುಟ್ಯೂಬ್ ಅಲ್ಲಿ ಲಭ್ಯ ಇದೆ. ರಾಕೇಶ್ ಅಡಿಗ ಈ ಚಿತ್ರದಲ್ಲಿ ನಾಯಕರಾಗಿದ್ದಾರೆ. ಜಗ್ಗು ಶಿರಸಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ ಅಂತ ಹೇಳಬಹುದು.
ಶುಭಾ ಪೂಂಜಾ “3ದೇವಿ” ಹೆಸರಿನ ಸಿನಿಮಾ ಮಾಡಿದ್ದಾರೆ. ಇದು ಕಳೆದ 2024 ರಲ್ಲಿ ರಿಲೀಸ್ ಆಗಿತ್ತು. ಅದು ಬಿಟ್ಟರೆ ಈ ಎರಡು ವರ್ಷದಲ್ಲಿ ಶುಭಾ ಪೂಂಜಾ ಯಾವುದೇ ಚಿತ್ರ ಒಪ್ಪಿದ ಸುದ್ದಿ ಇಲ್ಲ. ಹಾಗೆ ಇದೀಗ ದಾಂಪತ್ಯ ಜೀವನದ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 11, 2026 10:03 AM IST













