Ravichandran: ‘ನನ್ನ ಜೊತೆ ಮಕ್ಕಳಿದ್ದರೆ ನನಗೆ ಗೆಲುವು ಗ್ಯಾರಂಟಿ’! ರವಿಚಂದ್ರನ್ ಹೀಗೆ ಹೇಳಿದ್ಯಾಕೆ? | | ACTPnews

ನನ್ನ ಜೊತೆಗೆ ಮಕ್ಕಳಿದ್ದರೆ ನನಗೆ ಗೆಲುವು ಗ್ಯಾರಂಟಿ; ರವಿಚಂದ್ರನ್ ಹೀಗೆ ಹೇಳಿದ್ಯಾಕೆ?


Last Updated:

ನಾನು ನಮ್ಮಪ್ಪನ ಕಳೆದುಕೊಂಡಿಲ್ಲ. ಕಳೆದು ಕೊಳ್ಳುವುದೂ ಇಲ್ಲ. ಮಕ್ಕಳು ಇದ್ದರೆ ಆಯಿತು. ನನಗೆ ಗೆಲುವು ಗ್ಯಾರಂಟಿ. ಹೀಗೆ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಎಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ವಿಶೇಷ ಅನ್ನೋದು ಇಲ್ಲಿದೆ ಓದಿ.

ನನ್ನ ಜೊತೆಗೆ ಮಕ್ಕಳಿದ್ದರೆ ನನಗೆ ಗೆಲುವು ಗ್ಯಾರಂಟಿ; ರವಿಚಂದ್ರನ್ ಹೀಗೆ ಹೇಳಿದ್ಯಾಕೆ?
ನನ್ನ ಜೊತೆಗೆ ಮಕ್ಕಳಿದ್ದರೆ ನನಗೆ ಗೆಲುವು ಗ್ಯಾರಂಟಿ; ರವಿಚಂದ್ರನ್ ಹೀಗೆ ಹೇಳಿದ್ಯಾಕೆ?

ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಮೊನ್ನೆ ತಮ್ಮ 65 ನೇ ಜನ್ಮ ದಿನ ಆಚರಣೆ (Birthday Celebration) ಮಾಡಿಕೊಂಡಿದ್ದಾರೆ. ಆದರೆ, ಜೀ ಕನ್ನಡ ಚಾನೆಲ್ ಇವರಿಗೆ ವಿಶೇಷ ಗೌರವ ಸಲ್ಲಿಸುತ್ತಿದೆ. ಈ ವಾರದ ಸರಿಗಮಪ ಲಿಟಲ್ ಚಾಂಪ್ಸ್ (Saregamapa Lil Champs) ಅಲ್ಲಿ ರವಿಚಂದ್ರನ್ (Ravichandran) ಅವರನ್ನ ಆಹ್ವಾನಿಸಿದೆ. ಮಕ್ಕಳ ಕಡೆಯಿಂದಲೇ ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾಗಳ ಹಾಡುಗಳನ್ನ ಹಾಡಿಸಿದೆ. ಇದನ್ನ ನೋಡಿದ ರವಿಚಂದ್ರನ್ ತುಂಬಾನೆ ಖುಷಿಪಟ್ಟಿದ್ದಾರೆ. ತಮ್ಮ ತಂದೆಯ ಕಟೌಟ್‌ ಕಂಡು ಎಮೋಷನಲ್ ಆಗಿದ್ದಾರೆ. ನಾನು ನಮ್ಮಪ್ಪನ್ನ ಕಳೆದುಕೊಂಡಿಲ್ಲ. ಕಳೆದುಕೊಳ್ಳುವುದೂ ಇಲ್ಲ ಅಂತ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮಕ್ಕಳಿದ್ದರೆ ಗೆಲುವು ಗ್ಯಾರಂಟಿ

ನನ್ನ ಚಿತ್ರ ಜೀವನದಲ್ಲಿ ಮಕ್ಕಳು ಮುಖ್ಯ ಆಗಿದ್ದಾರೆ. ಅವರು ಇದ್ದರೆ ಆಯಿತು. ಗೆಲುವು ಗ್ಯಾರಂಟಿನೇ ನೋಡಿ. ಈ ಒಂದು ಮಾತನ್ನು ಕೂಡ ರವಿಚಂದ್ರನ್ ಹೇಳಿದ್ದಾರೆ.
Ravichandran Special on Saregamapa Lil Champs Zee Kannada

ಅಪ್ಪನ ಕಟೌಟ್ ಕಂಡು ಎಮೋಷನಲ್

(ಚಿತ್ರ ಕೃಪೆ: ಜೀ ಕನ್ನಡ ಇನ್‌ಸ್ಟಾಗ್ರಾಮ್)

ಮಕ್ಕಳು ಇವರಿಗೆ ಲಕ್ಕಿ ಅನ್ನೋದನ್ನು ಈ ರೀತಿ ಹೇಳಿಕೊಂಡಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ 65 ಆಗಿದೆ. ಈ ಹಿನ್ನೆಲ್ಲಿಯೇ ಮೊನ್ನೆ ಮೇ-30 ರಂದು 65 ನೇ ಜನ್ಮ ದಿನ ಆಚರಣೆ ಮಾಡಿದ್ದಾರೆ.

ಕ್ರೇಜಿ ಸ್ಟಾರ್ ಸಂಭ್ರಮ

ರವಿಚಂದ್ರನ್ ಅವರ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಜೀ ಕನ್ನಡ ಸಖತ್ ಪ್ಲಾನ್ ಮಾಡಿದೆ. ರವಿಚಂದ್ರನ್ ಅವರ ಸಿನಿಮಾಗಳ ಹಾಡನ್ನ ಮಕ್ಕಳ ಕಡೆಯಿಂದಲೇ ಹಾಡಿಸಿದೆ.

ಅಪ್ಪನ ಕಟೌಟ್ ಕಂಡು ಎಮೋಷನಲ್

ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ ಅವರ ಕಟೌಟ್‌ ಅನ್ನು ಇಲ್ಲಿ ನಿಲ್ಲಿಸಿದ್ದಾರೆ. ಇದನ್ನ ಕಂಡ ರವಿಚಂದ್ರನ್ ತುಂಬಾನೆ ಎಮೋಷನಲ್ ಆಗಿದ್ದಾರೆ. ನಾನು ನಮ್ಮಪ್ಪನ ಕಳೆದುಕೊಂಡಿಲ್ಲ. ಕಳೆದುಕೊಳ್ಳುವುದೂ ಇಲ್ಲ ಅಂತ ಹೇಳಿದ್ದಾರೆ.

ಈ ಮೂಲಕ ಈ ವಾರದ ಸರಿಗಮಪ ಲಿಟಲ್ ಚಾಂಪ್ಸ್ ಸಿಕ್ಕಾಪಟ್ಟೆ ಇಂಟ್ರಸ್ಟಿಂಗ್ ಅನಿಸುತ್ತಿದೆ. ರವಿಚಂದ್ರನ್ ಸಿನಿಮಾಗಳ ಹಾಡು ಅಂದ್ರೆ ಅದು ತುಂಬಾನೆ ವಿಶೇಷವಾಗಿರುತ್ತದೆ. ಅದನ್ನ ಮಕ್ಕಳು ಇಲ್ಲಿ ಹಾಡಿದ್ದಾರೆ. ಈ ವಾರದ ಇಡೀ ಸಂಚಿಕೆಯನ್ನ ಮತ್ತಷ್ಟು ಕಲರ್‌ಫುಲ್ ಮಾಡಿದ್ದಾರೆ.

Ravichandran Special on Saregamapa Lil Champs Zee Kannada

ಮಕ್ಕಳಿದ್ದರೆ ಗೆಲುವು ಗ್ಯಾರಂಟಿ

(ಚಿತ್ರ ಕೃಪೆ: ಜೀ ಕನ್ನಡ ಇನ್‌ಸ್ಟಾಗ್ರಾಮ್)

ಈ ಸಂಚಿಕೆಯ ಪ್ರೋಮೋ ರಿಲೀಸ್

ಈ ವಾರದ ಪ್ರೋಮೋ ಈಗಾಗಲೇ ರಿಲೀಸ್ ಆಗಿದೆ. ಇದರಲ್ಲಿ ರವಿಚಂದ್ರನ್ ಆಗಮನ, ಮಕ್ಕಳ ಹಾಡು ಕೇಳಿ ಮೆಚ್ಚಿದ ಕ್ಷಣ, ತಂದೆಯ ಕಟೌಟ್ ರಿವೀಲ್ ಮಾಡಿರೋದು, ಹೀಗೆ ಸುಮಾರು ವಿಚಾರಗಳು ಈ ಪ್ರೋಮೋದಲ್ಲಿ ರಿವೀಲ್ ಆಗಿವೆ.

ರವಿಚಂದ್ರನ್ ಚಿತ್ರ ಜೀವನದಲ್ಲಿ ಮಕ್ಕಳು ಲಕ್ಕಿ ಆಗಿದ್ದಾರೆ. ಹಾಗಾಗಿಯೇ ರವಿಚಂದ್ರನ್ ಮಕ್ಕಳು ಜೊತೆಗಿದ್ರೆ ನನಗೆ ಗೆಲುವು ಅನ್ನೋದು ಗ್ಯಾರಂಟಿ ಅಂತಲೇ ಹೇಳಿದ್ದಾರೆ.

ಈ ಪ್ರೋಮೋಗೆ ಬಂದ ಕಾಂಪ್ಲಿಮೆಂಟ್ಸ್

ರವಿಚಂದ್ರನ್ ಅವರ ಈ ಸಂಚಿಕೆಯ ಪ್ರೋಮೋಗೆ ಕಾಂಪ್ಲಿಂಟ್‌ಗಳ ಸುರಿಮಳೆ ಆಗಿದೆ. ಅದ್ಯಾರೋ ವಿಶ್ವಕೊಬ್ಬರೇ ರವಿಚಂದ್ರನ್ ಅಂತ ಬರೆಯುತ್ತಾರೆ.

ಮತ್ಯಾರೋ ಒಂದು ಪ್ರಶ್ನೆ ಕೇಳಿದ್ದಾರೆ. ಕ್ರೇಜಿ ಬ್ರಹ್ಮ ಕಾರ್ಯಕ್ರಮ ಟಿವಿಯಲ್ಲಿ ಯಾವಾಗ ಟೆಲಿಕಾಸ್ಟ್ ಆಗುತ್ತದೆ ಅಂತ ಕೇಳಿದ್ದಾರೆ. ರವಿಚಂದ್ರನ್ ಅವರ ಜನ್ಮ ದಿನದಂದು ಈ ಶೋ ನಡೆದಿದೆ. ಹಾಗೆ ರವಿಚಂದ್ರನ್ ಅವರ ಈ ಕಾರ್ಯಕ್ರಮವನ್ನ ನೋಡಲು ಎಲ್ಲರೂ ಕಾಯುತ್ತಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports