K. Annamalai: ಅಣ್ಣಾಮಲೈ ಹೊಸ ಪಕ್ಷ ಸ್ಥಾಪನೆ ಫಿಕ್ಸ್​​! ಬಿಜೆಪಿ ರಾಜೀನಾಮೆ ಅಂಗೀಕರಿಸ್ತಿದ್ದಂತೆ ಮಹತ್ವದ ಘೋಷಣೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪ್ರತ್ಯೇಕ ಪಕ್ಷ ಸ್ಥಾಪನೆ ಫಿಕ್ಸ್​​?


Last Updated:

ತಮಿಳುನಾಡಿನಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಬಹಳ ಹಿಂದಿನಿಂದಲೂ ತಮಿಳುನಾಡಿನಲ್ಲಿ ಬಿಜೆಪಿಯ ಮುಖವಾಗಿದ್ದ ಅಣ್ಣಾಮಲೈ ರಾಜೀನಾಮೆ ನೀಡಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ.

ಪ್ರತ್ಯೇಕ ಪಕ್ಷ ಸ್ಥಾಪನೆ ಫಿಕ್ಸ್​​?
ಪ್ರತ್ಯೇಕ ಪಕ್ಷ ಸ್ಥಾಪನೆ ಫಿಕ್ಸ್​​?

ತಮಿಳುನಾಡು ಬಿಜೆಪಿ (Tamilnadu BJP) ಘಟಕದಲ್ಲಿ ಇತ್ತೀಚೆಗೆ ದೊಡ್ಡ ರಾಜಕೀಯ ಬೆಳವಣಿಗೆ (Politics) ನಡೆದಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಯ ಮುಖ್ಯ ಮುಖವಾಗಿದ್ದ ಕೆ.ಅಣ್ಣಾಮಲೈ (K.Annamalai Resignation) ರಾಜೀನಾಮೆ ನೀಡಿದ್ದು, ಇದೀಗ ಅವರ ರಾಜೀನಾಮೆಯನ್ನು ಪಕ್ಷದ ಹೈಕಮಾಂಡ್ ಅಧಿಕೃತವಾಗಿ ಅಂಗೀಕರಿಸಿದೆ. ಅವರು ಕೆಲವು ದಿನಗಳ ಹಿಂದೆಲೇ ರಾಜೀನಾಮೆ ಸಲ್ಲಿಸಿದ್ದು, ಈಗ ಅದಕ್ಕೆ ಒಪ್ಪಿಗೆ ಸಿಕ್ಕಿದೆ. ಈಗ, ಅವರು ಹೊಸ ಪಕ್ಷವನ್ನು ರಚಿಸುತ್ತಾರಾ ಎಂಬ ಬಗ್ಗೆ ಊಹಾಪೋಹಗಳು ಪ್ರಾರಂಭವಾಗಿವೆ. ಈ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.

ಆದರೆ ಸದ್ಯ ಅಣ್ಣಾಮಲೈ ಬಿಜೆಪಿ ಮೇಲೆ ಯಾಕೆ ಅಸಮಾಧಾನಗೊಂಡರು, ಏನು ತಪ್ಪಾಗಿದೆ ಎಂಬುದರ ಕುರಿತು ಪಕ್ಷದ ವತಿಯಿಂದ ಸ್ಪಷ್ಟವಾದ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಪಕ್ಷದ ಅಧ್ಯಕ್ಷ ನಿತಿನ್ ನಬಿನ್ ಅಣ್ಣಾಮಲೈ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಕೆ. ಅಣ್ಣಾಮಲೈ ಶುಕ್ರವಾರ ಹೊಸ ರಾಜಕೀಯ ಆಂದೋಲನವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಇದು ಅವರ ಸಾರ್ವಜನಿಕ ಜೀವನ ಮತ್ತು ರಾಜಕೀಯ ಪ್ರಯಾಣದ ಮುಂದಿನ ಹಂತ ಎಂದು ಅವರು ಬಣ್ಣಿಸಿದ್ದಾರೆ.

ಅಣ್ಣಾಮಲೈ ರಾಜೀನಾಮೆಗೆ ಕಾರಣವೇನು?

ಮೊದಲಿಗೆ ಅಣ್ಣಾಮಲೈ ಅವರ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿ ಬಿಜೆಪಿ–ಎಐಎಡಿಎಂಕೆ ಮೈತ್ರಿ ವಿಚಾರವೇ ಮುಂಚೂಣಿಯಲ್ಲಿದೆ ಎಂದು ರಾಜಕೀಯ ವರದಿಗಳು ಹೇಳುತ್ತಿವೆ. ಅಣ್ಣಾಮಲೈ ಬಹಳ ಕಾಲದಿಂದಲೂ ಎಐಎಡಿಎಂಕೆ ಜೊತೆ ಮೈತ್ರಿ ಮಾಡುವುದನ್ನು ವಿರೋಧಿಸುತ್ತಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಎನ್‌ಡಿಎ ಮೈತ್ರಿಯಿಂದ ಹೊರಗಿದ್ದಾಗ, ಬಿಜೆಪಿ ತಮಿಳುನಾಡಿನಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯುವ ನಿರ್ಧಾರ ತೆಗೆದುಕೊಂಡಿತ್ತು. 23 ಸ್ಥಾನಗಳಲ್ಲಿ ಸ್ಪರ್ಧಿಸಿದ ಬಿಜೆಪಿ ಶೇಕಡಾ 11.24ರಷ್ಟು ಮತಗಳನ್ನು ಪಡೆದರೂ, ಒಂದೇ ಒಂದು ಸ್ಥಾನವನ್ನು ಸಹ ಗೆಲ್ಲಲಿಲ್ಲ. ಅಣ್ಣಾಮಲೈ ಸ್ವತಃ ಕೊಯಮತ್ತೂರಿನಲ್ಲಿ ಸೋಲಿನ ಮುಖ ನೋಡಬೇಕಾಯಿತು. ಈ ಫಲಿತಾಂಶ ಪಕ್ಷದ ಒಳಗಿನ ಚರ್ಚೆ–ವಿಚಾರಣೆಗಳಿಗೆ ಕಾರಣವಾಯಿತು.

ಈ ನಡುವೆ, ಏಪ್ರಿಲ್ 2025ರಲ್ಲಿ ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು, ಅವರ ಬದಲಿಗೆ ನೈನಾರ್ ನಾಗೇಂದ್ರನ್ ಅವರನ್ನು ನೇಮಕ ಮಾಡಲಾಯಿತು. 2021 ರಿಂದ 2025ರವರೆಗೆ ಅಣ್ಣಾಮಲೈ ರಾಜ್ಯಾಧ್ಯಕ್ಷರಾಗಿದ್ದು, ಆ ಅವಧಿಯಲ್ಲಿ ಬಿಜೆಪಿ ಸಂಘಟನೆಯನ್ನು ವಿಸ್ತರಿಸಲು ಗಮನಾರ್ಹವಾಗಿ ಶ್ರಮಿಸಿದ್ದರು. ಆದರೆ ಎಐಎಡಿಎಂಕೆ ಜೊತೆಗಿನ ಸಂಬಂಧ ಸುಧಾರಿಸಲು ಈ ಬದಲಾವಣೆ ಮಾಡಲಾಗಿದೆ ಎಂಬ ಮಾತು ರಾಜಕೀಯ ವಲಯಗಳಲ್ಲಿ ಕೇಳಿಸಿತು. ಅಣ್ಣಾಮಲೈ ಅವರ ಕಟುವಾದ ಟೀಕೆಗಳು, ಕಾಮೆಂಟ್‌ಗಳಿಂದ ಎಐಎಡಿಎಂಕೆ ನಾಯಕತ್ವ ಅಸಮಾಧಾನಗೊಂಡಿತ್ತು ಎಂಬ ವರದಿಗಳು ಹೊರಬಂದವು.

ಚುನಾವಣೆಯ ಸಿದ್ಧತೆಗಳ ಸಮಯದಲ್ಲೂ ಅಣ್ಣಾಮಲೈ ಅಸಮಾಧಾನ

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಸಮಯದಲ್ಲೂ ಅಣ್ಣಾಮಲೈ ಅವರ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಮ್ಮ ಅಭಿಪ್ರಾಯಕ್ಕೆ ಪ್ರಾಮುಖ್ಯತೆ ಸಿಗುತ್ತಿಲ್ಲ, ತಮ್ಮ ಪಾತ್ರ ಸೀಮಿತವಾಗಿದೆ ಎನ್ನುವ ಭಾವನೆ ಅವರಿಗೆ ಮೂಡಿದಂತೆ ತಿಳಿದುಬಂದಿದೆ. ಇದರಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಆಸಕ್ತಿ ತೋರಲಿಲ್ಲ ಎಂದು ಪಕ್ಷದ ಒಳಮೂಲಗಳು ಹೇಳುವ ಮಾಹಿತಿ ಹೊರಬಂದಿದೆ.

ಅಣ್ಣಾಮಲೈ ನೀತಿ ವಿಷಯಗಳಲ್ಲೂ ಸ್ವತಂತ್ರ ಧ್ವನಿಯಾಗಿ ಕಾಣಿಸಿಕೊಂಡರು. ಉದಾಹರಣೆಗೆ, ಶಾಲೆಗಳಲ್ಲಿ ತ್ರಿಭಾಷಾ ನೀತಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರದ ನಿರ್ಧಾರವನ್ನು ಅವರು ಪ್ರಶ್ನಿಸಿ, ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇದು ತಮಿಳುನಾಡಿನ ಪ್ರಾದೇಶಿಕ, ಸಾಂಸ್ಕೃತಿಕ ಭಾವನೆಗಳಿಗೆ ಒತ್ತು ನೀಡುವ ವಿಭಿನ್ನ ರಾಜಕೀಯ ದೃಷ್ಟಿಕೋನವಿದ್ದುದನ್ನು ತೋರಿಸಿತು. ಇದರ ಜೊತೆಗೆ, ಮೈತ್ರಿ ನಿರ್ವಹಣೆ, ಅಭ್ಯರ್ಥಿ ಆಯ್ಕೆ, ಸೀಟು ಹಂಚಿಕೆ ಇತ್ಯಾದಿ ಚುನಾವಣಾ ವಿಷಯಗಳಲ್ಲಿ ಅಣ್ಣಾಮಲೈ ಹಾಗೂ ಪಕ್ಷದ ಉನ್ನತ ನಾಯಕತ್ವದ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ವರದಿಯಾಗಿದೆ. ಅಧಿಕೃತವಾಗಿ ಬಿಜೆಪಿ ಇದಕ್ಕೆ ಪ್ರತಿಕ್ರಿಯಿಸದಿದ್ದರೂ, ಒಳಾಂಗಣ ಅಸಮಾಧಾನ ಸ್ಪಷ್ಟವಾಗಿದೆ.

ರಾಜೀನಾಮೆ ಸಲ್ಲಿಸಿದ ನಂತರ ಅಣ್ಣಾಮಲೈ ನವದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿಯಾಗಿದ್ದರು. ಹೊಸ ಪಕ್ಷವನ್ನು ಆರಂಭಿಸುತ್ತೀರಾ ಎಂಬ ಪ್ರಶ್ನೆಗೆ, ಮುಂದಿನ ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಜನರನ್ನು ಕಾಯುವಂತೆ ಕೇಳಿಕೊಂಡಿದ್ದರು. ಮಧುರೈ ಮತ್ತು ಕೊಯಮತ್ತೂರಿನಲ್ಲಿ ಅವರ ಬೆಂಬಲಿಗರು ಪೋಸ್ಟರ್‌ಗಳನ್ನು ಅಂಟಿಸಿ, ‘ತಮಿಳುನಾಡನ್ನು ಉಳಿಸಲು ಅಣ್ಣಾಮಲೈ ಹೊಸ ಪಾತ್ರ ವಹಿಸಬೇಕು’ ಎಂದು ಒತ್ತಾಯಿಸಿದರು. ಅವರ ಹುಟ್ಟುಹಬ್ಬದಂದು ಹೊಸ ಪಕ್ಷ ಘೋಷಣೆ ಮಾಡುವರು ಎಂಬ ಊಹಾಪೋಹಗಳು ಹರಿದಾಡಿದರೂ, ಅಂಥದು ಆಗಲಿಲ್ಲ. ಈಗ ಅವರ ರಾಜೀನಾಮೆ ಅಂಗೀಕೃತವಾದ ಹಿನ್ನೆಲೆಯಲ್ಲಿ, ಅವರು ಹೊಸ ಪಕ್ಷ ತರುತ್ತಾರಾ, ಬೇರೆ ರಾಜಕೀಯ ದಾರಿಗೆ ಹೋಗುತ್ತಾರಾ ಎಂಬ ಕುತೂಹಲ ತಮಿಳುನಾಡಿನ ರಾಜಕೀಯ ವಲಯದಲ್ಲಿ ಮತ್ತೆ ತೀವ್ರವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed