Last Updated:
ಚೈತ್ರಾ ಆಚಾರ್ ರವಿಕೆ ಧರಿಸದೇ ಚೆಂದದ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನ ನೋಡಿದ ಶ್ರುತಿ ಅವರ ಮಗಳು ಗೌರಿ ಶ್ರುತಿ ಕಾಮೆಂಟ್ ಹಾಕಿದ್ದಾರೆ. ಇದು ಎಲ್ಲರ ಗಮನ ಸೆಳೆಯುವಂತೆ ಇದೆ. ಇದರ ವಿವರ ಇಲ್ಲಿದೆ ಓದಿ.
ಚೈತ್ರಾ ಆಚಾರ್ (Chaithra Achar) ಹೊಸ ರೀತಿಯ ಫೋಟೋ ಶೂಟ್ ಮಾಡಿಸ್ತಾನೇ ಇರ್ತಾರೆ. ಇದರಿಂದ ಸೋಷಿಯಲ್ ಮೀಡಿಯಾ ಧಗ…ಧಗ ಅಂತಿರುತ್ತದೆ. ಹಾಗೆ ಚೈತ್ರಾ ಆಚಾರ್ (Chaithra Achar) ಅವರ ಇನ್ಸ್ಟಾಗ್ರಾಮ್ ಪೇಜ್ ಕಲರ್ಫುಲ್ ಮತ್ತು ಬೋಲ್ಡ್ ಆಗಿರುತ್ತದೆ. ಸ್ವತಃ ಚೈತ್ರಾ ಆಚಾರ್ ಈಗೊಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನ ನೋಡಿರೋ ಹಿರಿಯ ನಟಿ ಶ್ರುತಿ (Shruthi) ಅವರ ಮಗಳು ಗೌರಿ (Gowri) ಒಂದು ಪ್ರಶ್ನೆ ಕೇಳಿದ್ದಾರೆ. What are you ಅಂತಲೇ ಕೇಳಿದ್ದಾರೆ. ಇದು ಹೆಚ್ಚು ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ನೀವೇನು.. (ಚಿತ್ರ ಕೃಪೆ: ಚೈತ್ರಾ ಆಚಾರ್ ಇನ್ಸ್ಟಾಗ್ರಾಮ್)
ಈಗ ಹಂಚಿಕೊಂಡ ಫೋಟೋಗಳಲ್ಲೂ ಅದೇ ಇದೆ. ಆದರೆ, ಇದರಲ್ಲಿ ಹಿರಿಯ ನಟಿ ಶೃತಿ ಅವರ ಮಗಳು ಗೌರಿ ಹಾಕಿರೋ ಕಾಮೆಂಟ್ ಬೇರೆ ಬೇರೆ ಅರ್ಥ ಕೊಡುತ್ತದೆ. ಅದನ್ನ ಇಂಗ್ಲಿಷ್ ಅಲ್ಲಿ ಗೌರಿ ಹೀಗೆ ಬರೆದಿದ್ದಾರೆ. “What are you” ಅನ್ನೋದೇ ಈ ಕಾಮೆಂಟ್ ಆಗಿದೆ.
ಗೌರಿ ಶ್ರುತಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ವಿಶೇಷ ಫೋಟೋಗಳನ್ನು ಹಾಕಿರುತ್ತಾರೆ. ಆದರೆ, ಚೈತ್ರಾ ಅವರ ಫೋಟೋ ನೋಡಿ ಇವರಿಗೆ ಏನ್ ಅನಿಸ್ತೋ ಏನೋ? What are you ಅಂತಲೇ ಕೇಳಿದ್ದಾರೆ. ಇದರ ಅರ್ಥ “ನೀವೇನು” ಅನ್ನೋದೇ ಆಗಿದೆ.
ಇದರ ಹೊರತಾಗಿ ಇಲ್ಲಿ ಬೆಂಕಿ ಇಮೋಜಿ ಮತ್ತು ರೆಡ್ ಹಾರ್ಟ್ ಇಮೋಜಿಗಳು ಇವೆ. ಅದರಲ್ಲಿಯೇ What are you ಅನ್ನುವ ಗೌರಿ ಅವರ ಸಾಲು ಹೆಚ್ಚು ಗಮನ ಸೆಳೆಯುತ್ತದೆ ಅಂತ ಹೇಳಬಹುದು.
ಚೈತ್ರಾ ಆಚಾರ್ ಅವರು ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಚೈತ್ರಾ ಅವರು ರವಿಕೆನೇ ಹಾಕಿಕೊಂಡಿಲ್ಲ. ಚೆಂದದ ಸೀರೆಯುಟ್ಟು ಮಾದಕ ಮತ್ತು ಮೋಹಕ ಅನಿಸೋ ಪೋಸ್ ಕೊಟ್ಟಿದ್ದಾರೆ.
ಇದು ಇವರಿಗೆ ಕಾಮನ್ ಅನಿಸುತ್ತದೆ. ಆದರೆ, ಗೌರಿ ಶ್ರುತಿ ಅವರಿಗೆ ಏನ್ ಅನಿಸ್ತೋ ಏನೋ? What are you ಅಂತಲೇ ಕೇಳಿದ್ದಾರೆ ನೋಡಿ.
What are you (ಚಿತ್ರ ಕೃಪೆ: ಚೈತ್ರಾ ಆಚಾರ್ ಇನ್ಸ್ಟಾಗ್ರಾಮ್)
ಚೈತ್ರಾ ಆಚಾರ್ ಅದ್ಭುತ ನಟಿ ಅನ್ನೋದು ಗೊತ್ತೇ ಇದೆ. ತಮಿಳು ಭಾಷೆಯ ಚಿತ್ರದಲ್ಲಿ ಗಮನ ಸೆಳೆದಿದ್ದಾರೆ. ಕನ್ನಡದಲ್ಲಿ ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ಬೋಲ್ಡ್ ಕ್ಯಾರೆಕ್ಟರ್ ಮಾಡಿದ್ದಾರೆ.
ಟೋಬಿ ಚಿತ್ರದಲ್ಲಿ ಜನ್ನಿ ಅನ್ನುವ ರೋಲ್ ಮಾಡಿದ್ದಾರೆ. ಇದನ್ನ ತುಂಬಾನೆ ಚೆನ್ನಾಗಿ ಮಾಡಿದ್ದಾರೆ. ಚೈತ್ರಾ ಆಚಾರ್ ತಮ್ಮ ಸಿನಿಮಾಗಳಿಂದಲೂ ಜನರ ಗಮನವನ್ನ ತಮ್ಮತ್ತ ಸೆಳೆಯುತ್ತಾರೆ. ವಿಶೇಷ ಮತ್ತು ಬೋಲ್ಡ್ ಅನಿಸೋ ಫೋಟೋ ಶೂಟ್ ಮೂಲಕವೇ ಕಿಚ್ಚು ಹಚ್ಚುತ್ತಾರೆ.
ಈಗೀನ ಫೋಟೋ ಶೂಟ್ ಅಲ್ಲಿ ರವಿಕೆ ಇಲ್ಲ ಅನ್ನೋದು ಹೈಲೈಟ್ ಆಗಿದೆ. ಆದರೆ, ಎಲ್ಲವನ್ನು ಅಷ್ಟೆ ಕಲಾತ್ಮಕವಾಗಿಯೇ ಕವರ್ ಮಾಡಿದ್ದಾರೆ.
ಆದರೂ ಈ ಫೋಟೋಗಳು ಪಡ್ಡೆಗಳ ನಿದ್ದೆಗೆಡಿಸುವಂತೆ ಇವೆ. ಇಷ್ಟೊಂದು ಬೋಲ್ಡಾ ಅಂತಲೂ ಫೀಲ್ ಆಗುತ್ತವೆ. ಆ ರೀತಿಯ ಈ ಫೋಟೋಗಳನ್ನ ಚೈತ್ರಾ ಆಚಾರ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮಿಳಿನಲ್ಲಿ ಇಲ್ಲಿ ಒಂದು ಪದ ಕೂಡ ಬರೆದಿದ್ದಾರೆ.
ಇದರ ಅರ್ಥ “ಹುಡುಗಿ” ಇಲ್ಲವೆ “ಹೆಣ್ಣುಮಗಳು” ಅಂತ ಬರುತ್ತದೆ. ಅಂದ್ರೆ ‘ಪೆನ್’ ಅನ್ನುವ ಪದವನ್ನೆ ಚೈತ್ರಾ ಇಲ್ಲಿ ಬರೆದುಕೊಂಡಿದ್ದಾರೆ ಅಂತ ಹೇಳಬಹುದು.
Bangalore,Karnataka













