Darshan: ಆ ಒಂದೇ ಒಂದು ಕಾರಣದಿಂದ ದರ್ಶನ್​ಗೆ ಸಿಕ್ತು ಕುಟುಂಬ ಭೇಟಿ ಅವಕಾಶ! | Why Darshan got permission to see wife and son only due to this reason | | ACTPnews

ದರ್ಶನ್-ವಿಜಯಲಕ್ಷ್ಮಿ


Last Updated:

Darshan: ಅಂತೂ ಇಂತೂ ದರ್ಶನ್​ಗೆ ಇಂದು ಕುಟುಂಬ ಭೇಟಿಗೆ ಅನುಮತಿ ಸಿಕ್ಕಿದೆ. ಆದರೆ ಈ ರೀತಿ ಅವಕಾಶ ಸಿಕ್ಕಿದ್ದು ಹೇಗೆ? ಅದಕ್ಕೆ ಕಾರಣವಾಗಿದ್ದೇನು?

ದರ್ಶನ್-ವಿಜಯಲಕ್ಷ್ಮಿ
ದರ್ಶನ್-ವಿಜಯಲಕ್ಷ್ಮಿ

ಇಂದು ನಟ ದರ್ಶನ್​ಗೆ (Darshan) ಮನೆಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ  (Renukaswamy Case) ಕೇಸ್​​ನಲ್ಲಿ ಜೈಲಲ್ಲಿರೋ ನಟ ದರ್ಶನ್ ಅವರು ಸುಪ್ರಿಂ ಕೋರ್ಟ್​ನಲ್ಲಿ ಜಾಮೀನು ರಿಜೆಕ್ಟ್ ಆದ ನಂತರ ಮಾನಸಿಕವಾಗಿ ನೊಂದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ದರ್ಶನ್ ಒಳ ಸಂದರ್ಶನಕ್ಕೆ ಪತ್ನಿ ವಿಜಯಲಕ್ಷ್ಮಿ (Vijayalakshmi) ರಿಂದ ಮನವಿ ಮಾಡಲಾಗಿದ್ದು ಜೈಲಿನ ಎಸ್ ಪಿ ಅಂಶುಕುಮಾರ್​ಗೂ ದರ್ಶನ್ ರಿಂದ ಕುಟುಂಬದ ಒಳ ಸಂದರ್ಶನಕ್ಕೆ ಮನವಿ ಮಾಡಲಾಗಿದೆ.

ಸದ್ಯ ಮನವಿಗೆ ಸಂದಿಸಿದ ಜೈಲಾಧಿಕಾರಿಗಳು ಇಂದು ಮಧ್ಯಾಹ್ನದ ವೇಳೆಗೆ ನಟ ದರ್ಶನ್ ಒಳ ಸಂದರ್ಶನ ಭೇಟಿಗೆ ಅವಕಾಶ ನೀಡಿದ್ದಾರೆ. ಓರ್ವ ಅಡಿಷನಲ್ ಸೂಪರ್ಡೆಂಟ್ ಸಮ್ಮುಖದಲ್ಲಿ ದರ್ಶನ್ ಭೇಟಿ ಮಾಡಲಿದೆ ಕುಟುಂಬ.

ಪತ್ನಿ ವಿಜಯಲಕ್ಷ್ಮಿ ಮಗ ಸೇರಿ ಐವರಿಗೆ ಮಾತ್ರ ಅವಕಾಶ ನೀಡಲಾಗಿದ್ದು ಮೂರು ಗಂಟೆ ವೇಳೆಗೆ ಪತ್ನಿ ವಿಜಯಲಕ್ಷ್ಮಿ ರಿಂದ ದರ್ಶನ್ ಒಳ ಸಂದರ್ಶನ ಭೇಟಿ ಸಾಧ್ಯತೆ ಇದೆ. ಮನೆಯಿಂದ ತರುವ ಹಣ್ಣು, ತಿನಿಸುಗಳಿಗೆ ಅವಕಾಶ ಇದ್ದು ಮೂವತ್ತು ನಿಮಿಷಗಳ ಅವಕಾಶವಿದ್ದು, ಮುಕ್ತವಾಗಿ ಭೇಟಿಗೆ ಅವಕಾಶ ನೀಡಲಾಗಿದೆ.

ಬ್ಯಾರಕ್ ರೀತಿಯ ಸ್ಥಳವಿದ್ದು, ಸಂಪೂರ್ಣ ಸಿಸಿಟಿವಿ ಕಣ್ಗಾವಾಲು ಹಾಕಲಾಗಿದೆ. ಡಿಜಿ ಕಚೇರಿಯಲ್ಲೂ ಕಮಾಂಡ್ ಸೆಂಟರ್ ಇದ್ದು, ಮಾನಿಟರಿಂಗ್ ಮಾಡಲಿದ್ದಾರೆ. ದರ್ಶನ್ ಜಾಮೀನು ಸುಪ್ರಿಂಕೋರ್ಟ್ ನಲ್ಲಿ ರಿಜೆಕ್ಟ್ ಬಳಿ ಮಾನಸಿಕವಾಗಿ ಕುಗ್ಗಿದ್ದಾರೆಂದು ಪತ್ನಿ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ.

ಇದೊಂದೇ ಕಾರಣಕ್ಕೆ ಸಿಕ್ತು ಅವಕಾಶ

ಜೈಲಿನ ಮ್ಯಾನ್ಯುಯಲ್ ಪ್ರಕಾರ ಕೈದಿಯು ಮಾನಸಿಕವಾಗಿ ನೊಂದಲ್ಲಿ ಅಂತಹ ಸಂದರ್ಭ ಬಂದಾಗ ವಿಶೇಷವಾಗಿ ಭೇಟಿಗೆ ಅವಕಾಶ ಕೊಡಬಹುದಾಗಿದೆ. ಈ ಮೂಲಕ ಜೈಲಿನಲ್ಲಿ ಪತ್ನಿ ಒಳಸಂದರ್ಶನಕ್ಕೆ ಕೊನೆಗೂ ದರ್ಶನ್ ಅವಕಾಶ ಪಡೆದಿದ್ದಾರೆ. ಜಾಮೀನು ರಿಜೆಕ್ಟ್ ಆದ ನಂತರ ಮಾನಸಿಕವಾಗಿ ಕುಗ್ಗಿದ ಕಾರಣ ಭೇಟಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಆರೋಪಿ ದರ್ಶನ್ ಕುಟುಂಬಸ್ಥರ ಒಳ ಸಂದರ್ಶನ ವಿಚಾರವಾಗಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪತ್ನಿ ಹಾಗೂ ಮಗನ ಭೇಟಿ ಸಾಧ್ಯತೆ ಇದೆ. ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ಭೇಟಿಗೆ ಅವಕಾಶ ನೀಡಲಾಗಿದೆ. ಈಗಾಗಲೇ ಜೈಲು ಅಧೀಕ್ಷಕರ ಬಳಿ ದರ್ಶನ್ ಮನವಿ ಪತ್ರ ಇದೆ.

ಈ ಬಗ್ಗೆ ಜೈಲು ಅಧೀಕ್ಷಕರು ಇನ್ನೂ ಕೆಲವೇ ಹೊತ್ತಿನಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದಾರೆ. ಜೈಲು ಅಧೀಕ್ಷಕ ಅಂಶುಕುಮಾರ್ ರಿಂದ ನಿರ್ಧಾರ ಮಾಡಲಾಗಿದ್ದು ಇಂದು ದರ್ಶನ್ ಹಾಗೂ ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವ ಇದೆ.

ಅಲ್ಲದೇ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಸಿಗದೆ ಹಿನ್ನೆಲೆ ಇದರಿಂದ ನಟ ದರ್ಶನ್ ತೀವ್ರ ಬೇಸರಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಪುತ್ರನ ಒಳ ಸಂದರ್ಶನಕ್ಕೆ ಮನವಿ ಮಾಡಿರುವ ದರ್ಶನ್​ಗೆ ಅಂತೂ ಮನವಿ ಸಿಕ್ಕಿದೆ.

ಯಾವ ಸಂದರ್ಭದಲ್ಲಿ ಒಳ ಸಂದರ್ಶನಕ್ಕೆ ಅವಕಾಶವಿದೆ ಗೊತ್ತಾ..?

  • ಆರೋಪಿ ಅಥವಾ ಕೈದಿ ಮಾನಸಿಕ ಆರೋಗ್ಯ ತೊಂದರೆಗೆ ಒಳಗಾದ ವೇಳೆ.
  • ಪತಿ, ಪತ್ನಿ, ಪೋಷಕರು, ಮಕ್ಕಳು ಹತ್ತಿರದ ಸಂಬಂಧಿಕರಿಗೆ ನಿಯಮಿತ ಭೇಟಿಗೆ ಅವಕಾಶ.
  • ಕುಟುಂಬದಲ್ಲಿ ಯಾರಾದ್ರೂ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರೆ
  • ಅಥವಾ ಮದುವೆ, ಶುಭ ಕಾರ್ಯಗಳಿದ್ದರೆ, ಮರಣ ಹೊಂದಿದರೆ ತುರ್ತು ಮಾಹಿತಿ ನೀಡಲು ಅವಕಾಶ.
  • ಕೈದಿಯೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ
  • ಜೈಲು ಅಥವಾ ಹೊರಗಿನ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಕುಟುಂಬದವರಿಗೆ ಅವಕಾಶ
  • ಕೌಟುಂಬಿಕ ಆಸ್ತಿ ನಿರ್ವಹಣೆ, ನೋಂದಣಿ, ಬ್ಯಾಂಕ್ ವ್ಯವಹಾರ, ಮಕ್ಕಳ ವಿದ್ಯಾಭ್ಯಾಸ ಇಂತಹ ಅನಿವಾರ್ಯ ಸಂಧರ್ಭಗಳಲ್ಲಿ ಭೇಟಿಗೆ ಅವಕಾಶ.
  • ಜೈಲು ಅಧೀಕ್ಷಕರ ಅನುಮತಿ ಮೇರೆಗೆ ಒಳ ಸಂದರ್ಶನಕ್ಕೆ ಅವಕಾಶ.

ಇಂದು ವಿಜಯಲಕ್ಷ್ಮಿ ಹಾಗೂ ದರ್ಶನ್ ಮದುವೆಯಾಗಿ 23 ವರ್ಷವಾಗಿದೆ. ಇದೇ ದಿನ 23 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ದರ್ಶನ್-ವಿಜಯಲಕ್ಷ್ಮಿ ಸತಿಪತಿಯಾಗಿದ್ದರು.

ವರದಿ: ಗಂಗಾಧರ ವಾಗಟ, ನ್ಯೂಸ್​18 ಕನ್ನಡ ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports