ಮ್ಯಾಂಗೋ ಪಚ್ಚ ಹೊಸಬರ ಸಿನಿಮಾನೇ ಆಗಿದೆ. ಆದರೆ, ಚಿತ್ರದ ನಾಯಕ ವಿಶೇಷವಾಗಿದ್ದಾರೆ. ಅರೆಕ್ಷಣದಲ್ಲಿ ಸುದೀಪ್ ನೋಡಿದ ಅನುಭವ ಆಗುತ್ತದೆ. ಸ್ಟೈಲ್ ಮತ್ತು ಮ್ಯಾನರಿಸಂ ಸುದೀಪ್ ಅವರನ್ನೆ ಹೋಲುತ್ತದೆ.
ಕನ್ನಡದ ಪಚ್ಚ, ತೆಲುಗು ಪೆದ್ದಿ, ಬಂದರ್ ಶೆಟ್ರು; ಈ ವಾರ ಇವರೆಲ್ಲ ಬರ್ತಿದ್ದಾರೆ!
ಯಾಕಂದ್ರೆ ಈ ಚಿತ್ರದ ಸಂಚಿತ್ ಸಜೀವ್ ಬೇರೆ ಯಾರೋ ಅಲ್ಲ. ಸುದೀಪ್ ಅವರ ಅಕ್ಕನ ಮಗನೇ ಆಗಿದ್ದಾರೆ. ಪ್ರಿಯಾ ಸುದೀಪ್ ಅವರು ತಮ್ಮ ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಮೂಲಕವೇ ಅಳಿಯನನ್ನ ಲಾಂಚ್ ಮಾಡುತ್ತಿದ್ದಾರೆ. ವಿವೇಕ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ.
ಮ್ಯಾಗೋ ಪಚ್ಚ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಸುದೀಪ್ ಪುತ್ರಿ ಸಾನ್ವಿ ಸುದೀಪ್ ಈ ಚಿತ್ರದಲ್ಲಿ ಅರಗಿಣಿ ಅನ್ನುವ ಹಾಡು ಹಾಡಿದ್ದಾರೆ.
ಈ ಚಿತ್ರದ ನಾಯಕಿ ಕಾಜಲ್ ಕುಂದರ್ ಅವರನ್ನ ತೆಗೆದುಕೊಳ್ಳಬಹುದು ಅಂತ ಸಲಹೆ ಕೊಟ್ಟಿದ್ದು ಬೇರೆ ಯಾರೋ ಅಲ್ಲ. ಅದು ಸುದೀಪ್ ಅವರೇ ಆಗಿದ್ದಾರೆ. ಚಿತ್ರದಲ್ಲಿ ನಾಗಪ್ಪ ಅನ್ನೋ ರೋಲ್ ಬರುತ್ತದೆ.
ಇದಕ್ಕೆ ಮಯೂರ್ ಪಟೇಲ್ ಸೂಟೇಬಲ್ ಅಂತ ಹೇಳಿದವರು ಇದೇ ಸುದೀಪ್ ಅವರೇ ಆಗಿದ್ದಾರೆ. ಹಾಗೆ ಈ ಚಿತ್ರದಲ್ಲಿ ಹಲವು ಪಾತ್ರಗಳು ಇವೆ. ಇವರ ಈ ಚಿತ್ರ ಇದೇ ಜೂನ್-5 ರಂದು ರಿಲೀಸ್ ಆಗುತ್ತಿದೆ.
ತೆಲುಗು ಪೆದ್ದಿ ಸಿನಿಮಾ
(ಚಿತ್ರ ಕೃಪೆ: ರಾಮ್ ಚರಣ್ ಇನ್‌ಸ್ಟಾಗ್ರಾಮ್)
ಬುಚಿ ಬಾಬು ಸನಾ ಈ ಚಿತ್ರ ಡೈರೆಕ್ಷನ್ ಮಾಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಕೊಟ್ಟಿದ್ದಾರೆ. ರತ್ನವೇಲು ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದ ಪ್ರೀಮಿಯರ್ ಶೋ ಜೂನ್-3 ರಂದು ಪ್ಲಾನ್ ಆಗಿವೆ. ಆದರೆ, ಈ ಚಿತ್ರ ಜೂನ್-4 ರಂದು ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ.
ರಾಜ್ ಬಿ ಶೆಟ್ರು ಫಸ್ಟ್ ಟೈಮ್ ಹಿಂದಿ ಚಿತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಬಂದರ್ ಅನ್ನೋ ಹೆಸರಿದೆ. ಅನುರಾಗ್ ಕಶ್ಯಪ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಸತ್ಯ ಘಟನೆಗಳನ್ನೆ ಆಧರಿಸಿ ಈ ಚಿತ್ರ ರೆಡಿ ಆಗಿದೆ. ಬಾಬಿ ಡಿಯೋಲ್ ಈ ಚಿತ್ರದ ನಾಯಕರಾಗಿದ್ದಾರೆ. ರಾಜ್ ಬಿ ಶೆಟ್ರು ಇಲ್ಲಿ ಲಿಜಾರ್ಡ್ ಮ್ಯಾನ್ ಅನ್ನುವ ಪಾತ್ರ ಮಾಡಿದ್ದಾರೆ. ಈ ಪಾತ್ರದ ಪಿಂಜಾರ್ ಹಾಡು ಈಗಾಗಲೇ ವೈರಲ್ ಆಗಿದೆ. ಈ ಚಿತ್ರ ಜೂನ್-5 ರಂದು ತೆರೆಗೆ ಬರ್ತಿದೆ.
ಕನ್ನಡದ ಪಚ್ಚ ಸಿನಿಮಾ
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್‌ಸ್ಟಾಗ್ರಾಮ್)
ತುಂಬಾಡ್ಚಿ ಮಂಜುಳಾ ಚಿತ್ರವೂ ಜೂನ್-5 ರಂದು ರಿಲೀಸ್ ಆಗುತ್ತಿದೆ. ಈ ಮರಾಠಿ ಚಿತ್ರವನ್ನ ವಿವಿಧ್ ಕೊರಗಾವ್ಕರ್ ಡೈರೆಕ್ಷನ್ ಮಾಡಿದ್ದಾರೆ.
ಈ ಚಿತ್ರ ಕನ್ನಡದ ಸು ಫ್ರಮ್ ಸೋ ಚಿತ್ರದ ರೀಮೇಕ್ ಸಿನಿಮಾನೇ ಆಗಿದೆ. ಮರಾಠಿ ಚಿತ್ರರಂಗದಲ್ಲಿ ಈ ಚಿತ್ರ ಕಮಾಲ್ ಮಾಡುವ ಹಾಗೇನೆ ಇದೆ. ಚಿತ್ರದ ವಿಷಯ ಹಾಗಿದೆ.
ಈ ಸಿನಿಮಾಗಳು ಅಲ್ಲದೆ ಹಿಂದಿಯಲ್ಲಿ ಹೈ ಜವಾನಿ ತೋ ಇಷ್ಕ್ ಹೋನಾ ಹೈ ಚಿತ್ರವೂ ರಿಲೀಸ್ ಆಗುತ್ತಿದೆ. ವರುಣ್ ಧವನ್, ಪೂಜಾ ಹೆಗ್ಡೆ, ಮೃಣಾಲ್ ರಾಕೂರ್ ಈ ಚಿತ್ರದಲ್ಲಿದ್ದಾರೆ. ಡೇವಿಡ್ ಧವನ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ ಅಂತ ಹೇಳಬಹುದು.












