Virat Kohli: ಬಿಸಿಸಿಐನ ರೋಬೋ-ಡಾಗ್ ಬಗ್ಗೆ ಕೊಹ್ಲಿ ಅಸಮಾಧಾನ! ವಿರಾಟ್ ಮೈದಾನದಲ್ಲಿ ಸ್ನೇಹಿತನೊಂದಿಗೆ ಮಾತಾಡುವಾಗ ಏನಾಯಿತು ಗೊತ್ತಾ? | ಕ್ರೀಡಾ ಸುದ್ದಿ | ACTPnews

ವಿರಾಟ್ ಕೊಹ್ಲಿ-ಬಿಸಿಸಿಐ ರೋಬೋ-ಡಾಗ್


Last Updated:

ಐಪಿಎಲ್‌ನಲ್ಲಿ ಬೆಳೆಯುತ್ತಿರುವ ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ವಿಷಯ ಸಂಸ್ಕೃತಿಯ ಬಗ್ಗೆ ವಿರಾಟ್ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ ಓದಿ.

ವಿರಾಟ್ ಕೊಹ್ಲಿ-ಬಿಸಿಸಿಐ ರೋಬೋ-ಡಾಗ್
ವಿರಾಟ್ ಕೊಹ್ಲಿ-ಬಿಸಿಸಿಐ ರೋಬೋ-ಡಾಗ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ ಬ್ಯಾಟರ್ (Batter) ವಿರಾಟ್ ಕೊಹ್ಲಿ (Virat Kohli) ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈಗ ವಿರಾಟ್ ಕೊಹ್ಲಿ ಐಪಿಎಲ್‌ (IPL) ನಲ್ಲಿ ಬೆಳೆಯುತ್ತಿರುವ ಸೋಶಿಯಲ್ ಮೀಡಿಯಾ (Social media) ಮತ್ತು ಡಿಜಿಟಲ್ (Digital) ವಿಷಯ ಸಂಸ್ಕೃತಿಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ (RCB) ಪಾಡ್‌ಕ್ಯಾಸ್ಟ್‌ (Podcast) ನಲ್ಲಿ ಮಾಯಂತಿ ಲ್ಯಾಂಗರ್ (Mayanti Langer) ಅವರೊಂದಿಗೆ ಮಾತನಾಡಿದ ವಿರಾಟ್, ಅಭ್ಯಾಸದ ಸಮಯದಲ್ಲಿ ನಿರಂತರವಾಗಿ ಕ್ಯಾಮೆರಾಗಳು ತಮ್ಮನ್ನು ಅನುಸರಿಸುತ್ತಿರುವುದು ಆಟಗಾರರಿಗೆ ತುಂಬಾ ಅನಾನುಕೂಲಕರವಾಗಿದೆ ಎಂದು ಹೇಳಿದ್ದಾರೆ.

ಪಾಡ್‌ಕ್ಯಾಸ್ಟ್ ಸಮಯದಲ್ಲಿ, ಬಿಸಿಸಿಐನ ರೋಬೋ-ಡಾಗ್ ಚಂಪಕ್ ತನ್ನ ವೈಯಕ್ತಿಕ ಕ್ಷಣಗಳನ್ನು ರೆಕಾರ್ಡ್ ಮಾಡುತ್ತಿದ್ದ ಘಟನೆಯನ್ನು ಸಹ ಅವರು ನೆನಪಿಸಿಕೊಂಡಿದ್ದಾರೆ. ವಿರಾಟ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವಿಚಿತ್ರ ಘಟನೆಯನ್ನು ಹಂಚಿಕೊಂಡರು. ಬಿಸಿಸಿಐನ ‘ಚಂಪಕ್’ ಎಂಬ ರೋಬೋ-ಡಾಗ್​ನಿಂದ ಅವರು ಎಷ್ಟು ಅಸಮಾಧಾನಗೊಂಡಿದ್ದಾರೆಂದು ಅವರು ಹೇಳಿದರು.

ರೋಬೋ-ಡಾಗ್​​ನಿಂದ ವಿರಾಟ್‌ಗೆ ತೊಂದರೆ!

ವಿರಾಟ್ ಹೇಳಿದರು, “ನಾನು ನನ್ನ ಸ್ನೇಹಿತ ಕೇನ್ ವಿಲಿಯಮ್ಸನ್ ಜೊತೆ ತುಂಬಾ ಗಂಭೀರವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದೆ. ಇದ್ದಕ್ಕಿದ್ದಂತೆ, ಚಂಪಕ್ ಎಂಬ ರೋಬೋ-ಡಾಗ್ ಅಲ್ಲಿಗೆ ಬಂದು ನನ್ನತ್ತ ಕೈ ಬೀಸಲಾರಂಭಿಸಿತು. ಅದು ನಮ್ಮ ವೈಯಕ್ತಿಕ ಕ್ಷಣಗಳನ್ನು ರೆಕಾರ್ಡ್ ಮಾಡುತ್ತಿತ್ತು. ದಯವಿಟ್ಟು ರೋಬೋ-ಡಾಗ್ ಅನ್ನು ಇಲ್ಲಿಂದ ಕರೆದುಕೊಂಡು ಹೋಗಿ ನನಗೆ ಶಾಂತಿಯಿಂದ ಮಾತನಾಡಲು ಬಿಡಿ ಎಂದು ಅದನ್ನು ನಿರ್ವಹಿಸುವ ವ್ಯಕ್ತಿಗೆ ನಾನು ಸ್ಪಷ್ಟವಾಗಿ ಹೇಳಿದೆ.

ಈಗ ನಾವು ನಮ್ಮ ಸ್ನೇಹಿತರೊಂದಿಗೆ ಸಾಮಾನ್ಯ ಸಂಭಾಷಣೆಯನ್ನು ಸಹ ಮಾಡಲು ಸಾಧ್ಯವಿಲ್ಲವೇ? ಎಲ್ಲವನ್ನೂ ಸೋಶಿಯಲ್ ಮೀಡಿಯಾದ ಕ್ಷಣವನ್ನಾಗಿ ಮಾಡಲಾಗುತ್ತಿದೆ” ಎಂದು ಕೊಹ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಮೈದಾನದಲ್ಲಿ ತೀರ್ಪು ನೀಡಿ, ನೆಟ್‌ನಲ್ಲಿ ಅಲ್ಲ

ಅಭ್ಯಾಸದ ಸಮಯದಲ್ಲಿ ಕ್ಯಾಮೆರಾಗಳು ನಿರಂತರವಾಗಿ ತನ್ನನ್ನು ಗಮನಿಸುತ್ತಿರುವುದಕ್ಕೆ ವಿರಾಟ್ ಆಕ್ಷೇಪ ವ್ಯಕ್ತಪಡಿಸಿದರು. “ನಾವು ಅಭ್ಯಾಸಕ್ಕೆ ಹೋದಾಗಲೆಲ್ಲಾ, 6 ಕ್ಯಾಮೆರಾಗಳು ನಮ್ಮನ್ನು ಹಿಂಬಾಲಿಸುತ್ತವೆ. ಇದು ಸಂಪೂರ್ಣವಾಗಿ ತಪ್ಪು. ಒಬ್ಬ ಆಟಗಾರನಿಗೆ ತನ್ನ ಆಟದ ಮೇಲೆ ಶಾಂತಿಯಿಂದ ಕೆಲಸ ಮಾಡುವ ಸ್ವಾತಂತ್ರ್ಯ ಇರಬೇಕು. ಎಲ್ಲವನ್ನೂ ಚಿತ್ರೀಕರಿಸಿ ಚರ್ಚಿಸಿದರೆ, ಆಟಗಾರನಿಗೆ ಮುಕ್ತವಾಗಿ ವರ್ತಿಸಲು ಸಾಧ್ಯವಾಗುವುದಿಲ್ಲ. ನೆಟ್ಸ್‌ನಲ್ಲಿ ನನ್ನ ತಯಾರಿಯ ಮೇಲೆ ಅಲ್ಲ, ಪಂದ್ಯದಲ್ಲಿ ನನ್ನ ಪ್ರದರ್ಶನದ ಮೇಲೆ ನನ್ನನ್ನು ನಿರ್ಣಯಿಸಿ” ಎಂದು ವಿರಾಟ್ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports