Last Updated:
ಐಪಿಎಲ್ 2026 ರ ಸೀಸನ್‌ನ 60 ನೇ ಲೀಗ್ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೆಕೆಆರ್ ಬೃಹತ್ ಮೊತ್ತ ಕಲೆ ಹಾಕಿದೆ.
ಐಪಿಎಲ್ (IPL) 2026 ರ ಸೀಸನ್‌ನ 60 ನೇ ಲೀಗ್ ಪಂದ್ಯವು ಈಡನ್ ಗಾರ್ಡನ್ಸ್ (Eden Gardens) ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯುತ್ತಿದೆ. ಈ ರೋಚಕ ಪಂದ್ಯದಲ್ಲಿ ಕೆಕೆಆರ್ ಸ್ಪೋಟಕ ಬ್ಯಾಟರ್ಸ್ (Batters) ರನ್ ಮಳೆ ಹರಿಸಿದ್ದಾರೆ. ಆರಂಭಿಕ ಬ್ಯಾಟರ್ ಫಿನ್ ಅಲೆನ್ (Finn Allen) ಶತಕ (Century) ಮಿಸ್ ಮಾಡಿಕೊಂಡರೆ, ಅಂಗ್‌ಕ್ರಿಶ್ ರಘುವಂಶಿ (Angkrish Raghuvanshi) ಮತ್ತು ಕ್ಯಾಮೆರಾನ್ ಗ್ರೀನ್ (Cameron Green) ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂವರು ಬ್ಯಾಟಿಂಗ್ ಬಲದಿಂದ ಕೆಕೆಆರ್ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿದೆ. ಪ್ಲೇಆಫ್ ರೇಸ್ನಲ್ಲಿ ಉಳಿಯಲು ಗುಜರಾತ್ ತಂಡ 248 ರನ್ಗಳನ್ನು ಚೇಸ್ ಮಾಡಬೇಕಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಜಿಟಿ ನಾಯಕ ಶಭ್ಮನ್ ಗಿಲ್ ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಕೆಕೆಆರ್ ತಂಡ ಮೊದಲು ಬ್ಯಾಟಿಂಗ್ ಆರಂಭಿಸಿತು. ಕೆಕೆಆರ್ ತಂಡಕ್ಕೆ ಇನ್ನಿಂಗ್ಸ್ ತೆರೆದ ನಾಯಕ ಅಜಿಂಕ್ಯ ರಹಾನೆ ಮತ್ತು ಫಿನ್ ಅಲೆನ್ ಉತ್ತಮ ಆರಂಭವನ್ನು ನೀಡಿದರು. ತಾಳ್ಮೆಯುತ ಆಟವಾಡುತ್ತಿದ್ದ ರಹಾನೆ 14 ರನ್ ಗಳಿಸಿ ಔಟಾದರು.
ರಹಾನೆ ವಿಕೆಟ್ ಕಳೆದುಕೊಂಡ ಬಳಿಕ ಯಂಗ್ ಅಂಗ್‌ಕ್ರಿಶ್ ರಘುವಂಶಿ ಅಬ್ಬರ ಶುರುವಾಯಿತು. ಒಂದೆಡೆ ಅಲೆನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರೆ, ಅಂಗ್‌ಕ್ರಿಶ್ ರಘುವಂಶಿ ತಮ್ಮ ಪರಾಕ್ರಮ ತೋರಿಸಿದರು. ಎರಡನೇ ವಿಕೆಟ್ಗೆ ಈ ಜೋಡಿ 41 ಎಸೆತಗಳಲ್ಲಿ 95 ರನ್ ಜೊತೆಯಾಟವಾಡಿದರು. ಈ ಜೊತೆಯಾಟಕ್ಕೆ ಅಲೆನ್ ಕೊಡುಗೆ ಮಹತ್ವದ್ದಾಗಿತ್ತು. ಅಲೆನ್ ಕೇವಲ 35 ಎಸೆತಗಳಲ್ಲಿ 10 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳನ್ನು ಒಳಗೊಂಡಂತೆ 93 ರನ್ ಗಳಿಸಿದರು. ಅವರನ್ನು ಸ್ಪಿನ್ನರ್ ಆರ್ ಸಾಯಿ ಕಿಶೋರ್ ಔಟ್ ಮಾಡಿದರು.
ಅಲೆನ್ ಬಳಿಕ ಬಂದ ಗ್ರೀನ್ ಕೂಡ ಅಂಗ್‌ಕ್ರಿಶ್ ಜೊತೆಗೆ ಭರ್ಜರಿ ಬ್ಯಾಟಿಂಗ್ ಮಾಡಿದರು. ಎಲ್ಲಿಯೂ ಕೆಕೆಆರ್ ಇನ್ನಿಂಗ್ಸ್ ಹಳಿ ತಪ್ಪಲು ಈ ಕಿಲಾಡಿ ಜೋಡಿ ಬಿಡಲಿಲ್ಲ. ಗುಜರಾತ್ ಬೌಲರ್ಗಳಿಗೆ ಬೆವರಿಳಿಸಿದ ಗ್ರೀನ್ ಮತ್ತು ಅಂಗ್‌ಕ್ರಿಶ್ ಅರ್ಧಶತಕಗಳನ್ನು ಬಾರಿಸಿ ಮಿಂಚಿದರು.
ಈ ಜೋಡಿ 52 ಎಸೆತಗಳಲ್ಲಿ 108 ರನ್‌ಗಳ ಜೊತೆಯಾಟವಾಡುವ ಮೂಲಕ ಕೆಕೆಆರ್ ಬೃಹತ್ ಮೊತ್ತ ಕಲೆ ಹಾಕಲು ನೆರವಾದರು.
ರಘುವಂಶಿ 44 ಎಸೆತಗಳಲ್ಲಿ ಏಳು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಒಳಗೊಂಡಂತೆ ಅಜೇಯ 82 ರನ್‌ಗಳ ಕೊಡುಗೆ ನೀಡಿದರು. ಕ್ಯಾಮರೂನ್ ಗ್ರೀನ್ ಕೂಡ 28 ಎಸೆತಗಳಲ್ಲಿ ಮೂರು ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳನ್ನು ಒಳಗೊಂಡಂತೆ 52* ರನ್ ಗಳಿಸಿದರು. ಗುಜರಾತ್ ಪರ ಮೊಹಮ್ಮದ್ ಸಿರಾಜ್ ಮತ್ತು ರವಿಶ್ರೀನಿವಾಸನ್ ಸಾಯಿ ಕಿಶೋರ್ ತಲಾ ಒಂದೊಂದು ವಿಕೆಟ್ ಪಡೆದರು.
KKR vs GT: ಈಡನ್ ಗಾರ್ಡನ್ಸ್ನಲ್ಲಿ ರನ್ ಮಳೆ ಹರಿಸಿದ ಕೆಕೆಆರ್ ಸ್ಪೋಟಕ ಬ್ಯಾಟರ್ಸ್! ಜಿಟಿ ಗೆಲುವಿಗೆ ಬೃಹತ್ ಗುರಿ ನೀಡಿದ ರಹಾನೆ ಪಡೆ













