Last Updated:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜೂನ್ 1ರಂದು ಕ್ರೀಡಾ ವಸತಿ ಶಾಲೆ ಪ್ರವೇಶಕ್ಕೆ ವಿಶೇಷ ಆಯ್ಕೆ, 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಕ್ರೀಡಾಪಟುಗಳಿಗೆ ಕೊನೆಯ ಅವಕಾಶ.
ಮೈಸೂರು: ನಿಮ್ಮ ಮಗು ಕ್ರೀಡೆಯಲ್ಲಿ ಅದ್ಭುತ ಪ್ರತಿಭೆಯನ್ನು (Talent) ಹೊಂದಿದೆಯೇ? ರಾಜ್ಯ ಮಟ್ಟದ ಕ್ರೀಡಾ ತರಬೇತಿ (Sports Training) ಪಡೆದು ದೇಶಕ್ಕೆ ಕೀರ್ತಿ ತರಬೇಕೆಂಬ ಕನಸು ನಿಮ್ಮದಾಗಿದೆಯೇ? ಹಾಗಿದ್ದರೆ ಈ ಸುದ್ದಿ ನಿಮಗಾಗಿಯೇ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ವಸತಿ ಶಾಲೆ (Sports School) ಮತ್ತು ನಿಲಯಗಳಿಗೆ ಪ್ರವೇಶ ಪಡೆಯಲು ಜೂನ್ 1 ರಂದು ವಿಶೇಷ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತಿದೆ.
8ನೇ ತರಗತಿ: ಜೂನ್ 2026ಕ್ಕೆ 14 ವರ್ಷದೊಳಗಿನವರಾಗಿರಬೇಕು.
ಪ್ರಥಮ ಪಿ.ಯು.ಸಿ: 18 ವರ್ಷದೊಳಗಿನವರಾಗಿರಬೇಕು.
ಬೆಳಗಾವಿ: ವಾಲಿಬಾಲ್, ಸೈಕ್ಲಿಂಗ್, ಕುಸ್ತಿ, ಜುಡೋ.
ತುಮಕೂರು: ಅಥ್ಲೆಟಿಕ್ಸ್, ಕಬಡ್ಡಿ, ಜಿಮ್ನಾಸ್ಟಿಕ್ಸ್, ಫುಟ್‍ಬಾಲ್.
ಬೆಂಗಳೂರು (ಕಂಠೀರವ ಕ್ರೀಡಾಂಗಣ): ಬಾಸ್ಕೆಟ್‍ಬಾಲ್, ಬಾಕ್ಸಿಂಗ್, ಆರ್ಚರಿ, ಫೆನ್ಸಿಂಗ್.
ಬೆಂಗಳೂರು (ಹಾಕಿ ಕ್ರೀಡಾಂಗಣ): ಹಾಕಿ.
ಜೂನ್ 1 ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಕ್ರೀಡಾಂಗಣಕ್ಕೆ ಹಾಜರಾಗಿ. ಬರುವಾಗ ಇತ್ತೀಚಿನ ಭಾವಚಿತ್ರ, ವೈದ್ಯಕೀಯ ದೃಢೀಕರಣ ಪತ್ರ, ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ತನ್ನಿ. ದಾಖಲೆಗಳಿಲ್ಲದಿದ್ದರೆ ಅವಕಾಶ ಸಿಗುವುದಿಲ್ಲ, ನೆನಪಿಡಿ.
Mysore,Mysore,Karnataka











