SRH vs RR: ODI ವಿಶ್ವಕಪ್, WTC ಟೂರ್ನಿ ಗೆದ್ದ ಕಮಿನ್ಸ್​​​ಗೆ ಭೀತಿ ಹುಟ್ಟಿಸಿದ್ದಾನೆ ಯುವ ಆಟಗಾರ! ಎಲಿಮಿನೇಟರ್​ಗೂ ಮುನ್ನ SRH ನಾಯಕ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews

ಯಶಸ್ವಿ ಜೈಸ್ವಾಲ್-ವೈಭವ್ ಸೂರ್ಯವಂಶಿ


Last Updated:


ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹಾಗಾಗಿ ಪ್ರತೀ ತಂಡವೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡುವಾಗ ಈತನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಯುವ ಆಟಗಾರರನ್ನ ನಿಯಂತ್ರಿಸಲು ಹೈದರಾಬಾದ್ ತಂಡವು ಒಂದೇ ತಂತ್ರವಲ್ಲ, ಪ್ಲಾನ್ ಬಿ ಮತ್ತು ಪ್ಲಾನ್ ಸಿ ಯೊಂದಿಗೆ ಸಿದ್ಧವಾಗಿದೆ.

ಯಶಸ್ವಿ ಜೈಸ್ವಾಲ್-ವೈಭವ್ ಸೂರ್ಯವಂಶಿ
ಯಶಸ್ವಿ ಜೈಸ್ವಾಲ್-ವೈಭವ್ ಸೂರ್ಯವಂಶಿ

2026ರ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2026 ಎಲಿಮಿನೇಟರ್ ಪಂದ್ಯ ಬುಧವಾರ ನ್ಯೂ ಚಂಡೀಗಢದ ಮಹಾರಾಜ ಯಾದವಿಂದ್ರ ಸಿಂಗ್ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಒಬ್ಬ ಆಟಗಾರನ ಹೆಸರು ಕ್ರಿಕೆಟ್​ ವಲಯದಲ್ಲಿ ಪ್ರಜ್ವಲಿಸುತ್ತಿದೆ. ಅವರೇ ವೈಭವ್ ಸೂರ್ಯವಂಶಿ. ಈ 15 ವರ್ಷದ ಹುಡುಗ ಎದುರಾಳಿ ತಂಡಕ್ಕೆ ಸಿಂಹಸ್ವಪ್ನರಾಗಿದ್ದಾರೆ. ಏಕದಿನ ವಿಶ್ವಕಪ್, ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಅಂತಹ ದೊಡ್ಡ ಟೂರ್ನಮೆಂಟ್​​ ಗೆದ್ದ ನಾಯಕ ಪ್ಯಾಟ್ ಕಮಿನ್ಸ್ ಇಂದು ಆ ಯುವ ಆಟಗಾರನನ್ನ ಔಟ್ ಮಾಡಲು ಪಂದ್ಯಕ್ಕೆ ಮುನ್ನ ಪ್ಲಾನ್ ಮಾಡಿಕೊಳ್ಳುತ್ತಿರುವುದಾಗಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹಾಗಾಗಿ ಪ್ರತೀ ತಂಡವೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡುವಾಗ ಈತನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಯುವ ಆಟಗಾರನನ್ನ ನಿಯಂತ್ರಿಸಲು ಹೈದರಾಬಾದ್ ತಂಡವು ಒಂದೇ ತಂತ್ರವಲ್ಲ, ಪ್ಲಾನ್ ಬಿ ಮತ್ತು ಪ್ಲಾನ್ ಸಿ ಯೊಂದಿಗೆ ಸಿದ್ಧವಾಗಿದೆ. ಕಮ್ಮಿನ್ಸ್ ಈ ಋತುವಿನಲ್ಲಿ ವೈಭವ್ ಪ್ರದರ್ಶಿಸಿರುವ ವಿನಾಶಕಾರಿ ಬ್ಯಾಟಿಂಗ್ ಶೈಲಿಯು ಅವರ ತಂಡಕ್ಕೆ ಗಮನಾರ್ಹ ಸವಾಲನ್ನು ಒಡ್ಡುತ್ತದೆ ಎಂದು ಒಪ್ಪಿಕೊಂಡಿದ್ದಾರೆ.

2026ರಲ್ಲಿ ವಂಡರ್ ಬಾಯ್​​ ಪ್ರಾಬಲ್ಯ

ರಾಜಸ್ಥಾನ್ ರಾಯಲ್ಸ್‌ನ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಈ ಐಪಿಎಲ್ ಋತುವಿನಲ್ಲಿ ಬಿರುಗಾಳಿ ಇನ್ನಿಂಗ್ಸ್ ಆಡುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿರ್ಭಯವಾಗಿ ಬ್ಯಾಟಿಂಗ್ ಮಾಡುವ ಅವರು ಪವರ್‌ಪ್ಲೇ ಓವರ್‌ಗಳಲ್ಲಿ ಎದುರಾಳಿ ಬೌಲರ್‌ಗಳಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ. 15 ವರ್ಷದ ಈ ಅದ್ಭುತ ಬೌಲರ್ ಲೀಗ್ ಹಂತದಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 232.27ರ ಅದ್ಭುತ ಸ್ಟ್ರೈಕ್ ರೇಟ್‌ನೊಂದಿಗೆ 583 ರನ್ ಗಳಿಸುವ ಮೂಲಕ ಹಲವಾರು ಐಪಿಎಲ್ ದಾಖಲೆಗಳನ್ನು ಮುರಿದಿದ್ದಾರೆ.

ಈ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ವೈಭವ್ ಗೋಲ್ಡನ್ ಡಕ್​ಗೆ ಒಳಗಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಅವರು ಮತ್ತೆ ಪುಟಿದೆದ್ದರು, ಎಸ್‌ಆರ್‌ಹೆಚ್ ಬೌಲರ್‌ಗಳ ಮೇಲೆ ಉಗ್ರ ದಾಳಿ ನಡೆಸಿ ಅದ್ಭುತ ಶತಕ ಸಿಡಿಸಿದ್ದರು. ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಹೈದರಾಬಾದ್ ಜಯಗಳಿಸಿದರೂ, ವೈಭವ್ ಸೂರ್ಯವಂಶಿ ಅವರ ಪ್ರಸ್ತುತ ಫಾರ್ಮ್ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್​​ಗೆ ಬೆದರಿಕೆಯನ್ನು ಒಡ್ಡಬಹುದು ಎಂದು ಪ್ಯಾಟ್ ಕಮ್ಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.

ವೈಭವ್ ನಿಯಂತ್ರಿಸಲು ಮೈಂಡ್ ಗೇಮ್

ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಸಂದರ್ಶನದಲ್ಲಿ ಮಾತನಾಡಿದ ಪ್ಯಾಟ್ ಕಮ್ಮಿನ್ಸ್, “ಒಬ್ಬ ಬೌಲರ್ ಆಗಿ, ಒಬ್ಬರ ಸ್ವಂತ ಸಾಮರ್ಥ್ಯಗಳನ್ನು ಗುರುತಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಬೌಲಿಂಗ್ ಮಾಡುವುದು ಒಂದು ವಿಷಯ. ಆದರೂ ಎದುರಾಳಿ ತಂಡವು ಏಕಾಂಗಿಯಾಗಿ ಪಂದ್ಯವನ್ನು ತಮ್ಮ ಪರವಾಗಿ ತಿರುಗಿಸುವ ಸಾಮರ್ಥ್ಯವಿರುವ ಒಂದು ಅಥವಾ ಇಬ್ಬರು ಆಟಗಾರರನ್ನು ಹೊಂದಿರುವಾಗ, ನಾವು ಅವರಿಗೆ ನಿರ್ದಿಷ್ಟವಾಗಿ ‘ಪ್ಲಾನ್ ಬಿ’ ಅಥವಾ ‘ಪ್ಲಾನ್ ಸಿ’ ಅನ್ನು ರೂಪಿಸಲು ಹೆಚ್ಚುವರಿ ಸಮಯವನ್ನು ಮೀಸಲಿಡುತ್ತೇವೆ. ವೈಭವ್ ಸೂರ್ಯವಂಶಿ ಅವರನ್ನು ಎದುರಿಸಲು ನಾವು ವಿಶೇಷ ತಂತ್ರಗಳನ್ನು ರೂಪಿಸುತ್ತಿದ್ದೇವೆ. ಹಿಂದಿನ ಪಂದ್ಯದಲ್ಲಿ ಅವರು ನಮ್ಮ ವಿರುದ್ಧ ಶತಕ ಗಳಿಸಿದ್ದರೂ, ಕೆಲವು ಓವರ್‌ಗಳಲ್ಲಿ ನಾವು ಅವರನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಯಿತು. ಆ ಪಂದ್ಯದಿಂದ ನಾವು ಕಲಿತ ಪಾಠಗಳು ಈ ಎಲಿಮಿನೇಟರ್‌ನಲ್ಲಿ ಬಳಸಿಕೊಳ್ಳುತ್ತೇವೆ” ಎಂದು ಪ್ಯಾಟ್ ಕಮ್ಮಿನ್ಸ್ ಬಹಿರಂಗಪಡಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

SRH vs RR: ODI ವಿಶ್ವಕಪ್, WTC ಟೂರ್ನಿ ಗೆದ್ದ ಕಮಿನ್ಸ್​​​ಗೆ ಭೀತಿ ಹುಟ್ಟಿಸಿದ್ದಾನೆ ಯುವ ಆಟಗಾರ! ಎಲಿಮಿನೇಟರ್​ಗೂ ಮುನ್ನ SRH ನಾಯಕ ಅಚ್ಚರಿ ಹೇಳಿಕೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed