Anand Dubey: ದೆಹಲಿಯಲ್ಲಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವಾಗಲೇ UBT ಶಿವಸೇನೆಗೆ ಬಿಗ್ ಶಾಕ್! ಪಕ್ಷ ತ್ಯಜಿಸಿದ ಹಿರಿಯ ನಾಯಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಆನಂದ್ ದುಬೆ

[ad_1]

Last Updated:

ಶಿವಸೇನಾ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ರಾಜಕೀಯ ಆಘಾತ ಎದುರಾಗಿದ್ದು, ಪಕ್ಷದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ ತಮ್ಮ ಪ್ರಾಥಮಿಕ ಸದಸ್ಯತ್ವ ಮತ್ತು ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ.

ಆನಂದ್ ದುಬೆ
ಆನಂದ್ ದುಬೆ

ಶಿವಸೇನಾ (UBT) ಪಕ್ಷದ ರಾಷ್ಟ್ರೀಯ ವಕ್ತಾರ ಮತ್ತು ಪ್ರಮುಖ ಹಿಂದಿ ಭಾಷಿಕ ನಾಯಕರಾದ ಆನಂದ್ ದುಬೆ (Anand Dubey) ಅವರು ಅಕ್ಟೋಬರ್ 12, 2026 ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ವಕ್ತಾರ ಹುದ್ದೆಗೆ ತಢಕಾಫಢಕಿ ರಾಜೀನಾಮೆ ನೀಡಿದ್ದಾರೆ.  ಕಳೆದ ಹಲವು ವರ್ಷಗಳಿಂದ ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಶಿವಸೇನಾ (UBT) ಪಕ್ಷದ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿದ್ದ ಆನಂದ್ ದುಬೆ, ಪಕ್ಷದ ಸೈದ್ಧಾಂತಿಕ ಬದಲಾವಣೆಯಿಂದಾಗಿ ತೀವ್ರ ಅಸಮಾಧಾನಗೊಂಡಿದ್ದರು. ಪಕ್ಷದ ಇತ್ತೀಚಿನ ರಾಜಕೀಯ ನಿಲುವುಗಳು ಮತ್ತು ಕಾರ್ಯವೈಖರಿಯಿಂದ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಪಕ್ಷದಲ್ಲಿ ತಮಗೆ ಹಿಂದುತ್ವ ಮತ್ತು ಸನಾತನ ಧರ್ಮದ ಆದರ್ಶಗಳನ್ನು ಮುಕ್ತವಾಗಿ ಧ್ವನಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆ ಬಳಿಕ ಮಾತನಾಡಿದ ಅವರು, “ಕಳೆದ ನಾಲ್ಕೈದು ವರ್ಷಗಳಿಂದ ಪಕ್ಷದ ನಿಲುವುಗಳನ್ನು ನಾನು ಸಮರ್ಥಿಸಿಕೊಳ್ಳುತ್ತಿದ್ದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ನಾನು ಏನು ಮಾತನಾಡಲು ಸಾಧ್ಯವಾಗದೇ ಮೌನವಾಗಿ ನೊಂದಿದ್ದೇನೆ. ನಾನು ಅತ್ಯಂತ ಪವಿತ್ರವೆಂದು ಭಾವಿಸುವ ಹಿಂದುತ್ವ ಮತ್ತು ಸನಾತನ ಧರ್ಮದ ಆದರ್ಶಗಳನ್ನು ಪಕ್ಷದಲ್ಲಿ ಧ್ವನಿಯೆತ್ತಲು ನನಗೆ ಸಾಧ್ಯವಾಗುತ್ತಿಲ್ಲ. ನನಗೆ ಯಾವುದೇ ರಾಜಕೀಯ ಪಕ್ಷಕ್ಕಿಂತಲೂ ದೇಶವೇ ಮೊದಲು. ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ನಿರ್ಧಾರಗಳಿಂದ ನಾನು ತೀವ್ರವಾಗಿ ನೊಂದಿದ್ದೇನೆ” ಎಂದು ತಮ್ಮ ರಾಜೀನಾಮೆಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ನನ್ನ ಆದರ್ಶಗಳು ಛತ್ರಪತಿ ಶಿವಾಜಿ, ಸಾವರ್ಕರ್

ತಮ್ಮ ವೈಯಕ್ತಿಕ ಸಿದ್ಧಾಂತ ಮತ್ತು ಪಕ್ಷದ ಪ್ರಸ್ತುತ ರಾಜಕೀಯ ನಿಲುವಿನ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದ ದುಬೆ, ತಮ್ಮ ಪಕ್ಷದ ವಿರುದ್ಧವೇ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದರು. “ನಾನು ವೀರ್ ಸಾವರ್ಕರ್ ಮತ್ತು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನಂಬುವ ಕಾರ್ಯಕರ್ತ. ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಛತ್ರಪತಿ ಸಂಭಾಜಿ ಮಹಾರಾಜ್ ನನ್ನ ರೋಲ್ ಮಾಡೆಲ್‌ಗಳೇ ಹೊರತು, ನನ್ನ ಹೀರೋಗಳು ಶರ್ಜೀಲ್ ಇಮಾಮ್, ಉಮರ್ ಖಾಲಿದ್ ಅಥವಾ ಯೂಟ್ಯೂಬರ್ ಧ್ರುವ್ ರಾಠಿ ಅಲ್ಲ” ಎಂದು ದುಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಮಿತ್ ಮಚ್ಚರ್ ಘಟನೆಗೆ ಟ್ವೀಟ್ ಇಲ್ಲ

ಇದೇ ಸಂದರ್ಭದಲ್ಲಿ ಇತ್ತೀಚಿನ ವಿಶ್ವದಲ್ಲೇ ಸದ್ದು ಮಾಡಿದ್ದ ಸ್ಮಿತ್ ಮಚ್ಚರ್ ಘಟನೆಗಳನ್ನು ಪ್ರಸ್ತಾಪಿಸಿದ ಅವರು, “ತಮ್ಮ ಸಾಹಸದಿಂದ ಇಡೀ ಜಗತ್ತಿಗೆ ಬಜರಂಗಬಲಿಯ ಶಕ್ತಿಯನ್ನು ತೋರಿಸಿಕೊಟ್ಟ ಸ್ಮಿತ್ ಮಚ್ಚರ್ ನನ್ನ ಹೀರೋ. ಆದರೆ ಈ ಬಗ್ಗೆ ನಮ್ಮ ಪಕ್ಷದಿಂದ ಒಂದು ಸಣ್ಣ ಟ್ವೀಟ್ ಕೂಡ ಬರಲಿಲ್ಲ” ಎಂದು ಪಕ್ಷದ ನಾಯಕರ ರಾಜಕೀಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

ವೋಟ್ ಚೋರಿ ಅಲ್ಲ, ದಿಲ್ ಚೋರಿ

ಕಳೆದ ಕೆಲವು ಚುನಾವಣೆಯಲ್ಲಿ ವೋಟ್ ಚೋರಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದ ದುಬೆ, “ಇಲ್ಲಿ ಮತಗಳನ್ನು ಕದಿಯುತ್ತಿಲ್ಲ, ಜನರ ಮನಸ್ಸುಗಳನ್ನು ಕದಿಯಲಾಗಿದೆ” ಎಂದು ಮಾರ್ಮಿಕವಾಗಿ ಬಿಜೆಪಿ ಪರವಾಗಿ ಮಾತನಾಡಿದ್ದಾರೆ. ಮಹಾವಿಕಾಸ್ ಅಘಾಡಿ (MVA) ಮೈತ್ರಿಕೂಟವು ಒಗ್ಗಟ್ಟಿನ ಪ್ರದರ್ಶನ ನೀಡುತ್ತಿರುವ ಸಮಯದಲ್ಲಿಯೇ, ಮುಂಬೈನ ಹಿಂದಿ ಭಾಷಿಕ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಆನಂದ್ ದುಬೆ ಅವರ ನಿರ್ಗಮನವು ಉದ್ಧವ್ ಠಾಕ್ರೆ ಬಣಕ್ಕೆ ಆಘಾತ ತಂದಿದೆ. ಅವರ ಮುಂದಿನ ರಾಜಕೀಯ ನಡೆಯ ಕುರಿತು ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed