[ad_1]
Last Updated:
ಪ್ರೇಮದ ಊರಲಿ ಸಿನಿಮಾ ಒಟಿಟಿಗೆ ಯಾವಾಗ ಬರುತ್ತದೆ? ಈ ಪ್ರಶ್ನೆಗೆ ನಾಯಕ ನಟ ಶ್ರೀರಾಮ್ ಉತ್ತರ ಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಪ್ರೇಮದ ಊರಲಿ ಚಿತ್ರ (Premada Oorali Movie) ಯಶಸ್ವಿ ಆಗಿಯೇ ಪ್ರದರ್ಶನ ಆಗುತ್ತಿದೆ. ಜನ ಚಿತ್ರವನ್ನ ಥಿಯೇಟರ್‌ಗೆ (Theater) ಹೋಗಿಯೇ ನೋಡ್ತಿದ್ದಾರೆ. ಇದರ ಬೆನ್ನಲ್ಲಿಯೆ ಈ ಚಿತ್ರ ಒಟಿಟಿಗೆ (Ott) ಬರ್ತಿದೆ ಅನ್ನುವ ಸುದ್ದಿನು ಇದೆ. ಆದರೆ, ಈ ಚಿತ್ರದ ನಾಯಕ ನಟ ಶ್ರೀರಾಮ್ (Shree Ram) ಈಗೊಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನ ಚಿತ್ರ ತಂಡದ ಪರವಾಗಿಯೇ ನೀಡಿದ್ದಾರೆ. ಅದೇನು ಅನ್ನುವುದು ಇಲ್ಲಿದೆ ಓದಿ.
ನಮ್ಮ ಚಿತ್ರವನ್ನ ಜನ ನೋಡ್ತಿದ್ದಾರೆ. ಥಿಯೇಟರ್‌ಗೆ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದರೆ, ಈ ಚಿತ್ರವನ್ನ ಜನ ಥಿಯೇಟರ್ ಅಲ್ಲಿಯೇ ನೋಡ್ಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ.
ಥಿಯೇಟರ್ ಮೊದಲ ಆದ್ಯತೆ
(ಚಿತ್ರ ಕೃಪೆ: ಚಿತ್ರದ ನಾಯಕ ಶ್ರೀರಾಮ್ ಇನ್ಸ್ಟಾಗ್ರಾಮ್)
ನಮ್ಮ ಈ ಚಿತ್ರವನ್ನ ನಾವು ಇನ್ನು ಯಾವುದೆ ಪ್ಲಾಟ್‌ಫಾರ್ಮ್‌ಗೆ ಕೊಟ್ಟೇ ಇಲ್ಲ. ಟಿವಿಗೂ ಕೊಟ್ಟಿಲ್ಲ. ಈ ಬಗೆಗಿನ ಅಧಿಕೃತ ಮಾಹಿತಿಯನ್ನ ಚಿತ್ರ ತಂಡವೇ ಕೊಡುತ್ತದೆ.
ಆ ರೀತಿ ಏನಾದರೂ ಇದ್ದರೆ ಸಿನಿಮಾ ತಂಡವೇ ಈ ವಿಷಯ ಹೇಳುತ್ತದೆ. ಸದ್ಯಕ್ಕೆ ಆ ರೀತಿ ಏನೂ ಇಲ್ಲ ಅನ್ನೋದನ್ನ ಚಿತ್ರದ ನಾಯಕ ಶ್ರೀರಾಮ್ ಚಿತ್ರ ತಂಡದ ಪರವಾಗಿಯೇ ಹೇಳಿದ್ದಾರೆ.
ಚಿತ್ರದ ನಾಯಕ ನಟ ಶ್ರೀರಾಮ್ ಈ ವಿಷಯವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿ ಇದನ್ನ ಶೇರ್ ಮಾಡಿಕೊಂಡಿದ್ದಾರೆ.
ಈ ಚಿತ್ರ 3ನೇ ವಾರಕ್ಕೆ ಕಾಲಿಟ್ಟಿದೆ. ಆದರೂ ಇದರ ಓಟ ನಿಂತಿಲ್ಲ. ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡ್ತಿದ್ದಾರೆ. ಟಿಕೆಟ್ ಸೇಲ್ ಕೂಡ ಚೆನ್ನಾಗಿದೆ. ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಅಲ್ಲೂ ಈ ಸಿನಿಮಾ ಓಡ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ
(ಚಿತ್ರ ಕೃಪೆ: ಚಿತ್ರದ ನಾಯಕ ಶ್ರೀರಾಮ್ ಇನ್ಸ್ಟಾಗ್ರಾಮ್)
ಆದರೆ, ದಿನಗಳದಂತೆ ಈ ಚಿತ್ರದ ಓಟ ಜಾಸ್ತಿ ಆಗಿದೆ. ಶೋಗಳು ಹೆಚ್ಚಾಗಿವೆ. ಥಿಯೇಟರ್ ಸಂಖ್ಯೆನೂ ಡಬಲ್ ಆಗಿವೆ. ಜನ ಥಿಯೇಟರ್‌ಗೆ ಮುಗಿಬಿದ್ದು ಸಿನಿಮಾ ನೋಡ್ತಾ ಇದ್ದಾರೆ.
ಈ ಚಿತ್ರದಲ್ಲಿ ರಂಗಾಯಣ ರಘು ಅದ್ಭುತವಾಗಿ ನಟಿಸಿದ್ದಾರೆ. ರಮಿಕಾ ಶಿವು ಸಖ್ ಸ್ಕೋರ್ ಮಾಡಿದ್ದಾರೆ. ತಪಸ್ವಿನಿ ಪೊಣಚ್ಚ ಕಮಾಲ್ ಗಮನ ಸೆಳೆದಿದ್ದಾರೆ.
ಪ್ರೇಮದ ಊರಲಿ ಸಿನಿಮಾ ಒಟಿಟಿಗೆ ಯಾವಾಗ ಅನ್ನುವ ಪ್ರಶ್ನೆನೂ ಇದೆ. ಇದಕ್ಕೆ ಉತ್ತರ ಅನ್ನುವ ಹಾಗೆ ಶ್ರೀರಾಮ್ ಪೋಸ್ಟ್ ಹಾಕಿದ್ದಾರೆ. ಸದ್ಯಕ್ಕೆ ಒಟಿಟಿ ಪ್ಲಾನ್ ಏನು ಇಲ್ಲ. ಥಿಯೇಟರ್‌ಗೆ ಆದ್ಯತೆ ಕೊಡ್ತೀವಿ ಅಂತಲೇ ಇಡೀ ಚಿತ್ರ ತಂಡದ ಪರವಾಗಿಯೇ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.
[ad_2]
Source link














