[ad_1]
ಕೊಡಗಿನ ತಪಸ್ವಿನಿ ನಟನೆಗೆ ಫಿದಾ ರಶ್ಮಿಕಾ ಮಂದಣ್ಣ ಫಿದಾ
(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್)
ಈ ಚಿತ್ರದ ಯಶಸ್ಸನ್ನ ಎಲ್ಲರೂ ಕೊಂಡಾಡಿದ್ದಾರೆ. ಇಡೀ ಕನ್ನಡ ಸಿನಿಮಾರಂಗ ಹೆಮ್ಮೆಯಿಂದ ಇದನ್ನ ಹೇಳಿಕೊಳ್ಳುತ್ತಿದೆ. ಇದರ ನಡುವೆ ಇದೀಗ ರಶ್ಮಿಕಾ ಮಂದಣ್ಣ ಈ ಚಿತ್ರದ ಸಕ್ಸಸ್‌ಗೆ ವಿಶ್ ಮಾಡಿದ್ದಾರೆ. ಇಡೀ ತಂಡಕ್ಕೆ ಮನಸಾರೆ ಶುಭ ಹಾರೈಸಿದ್ದಾರೆ.
ಕೊಡಗಿನ ಕುವರಿ ತಪಸ್ವಿನಿ ಪೊಣಚ್ಚ ಅವರ ನಟನೆಗೆ ರಶ್ಮಿಕಾ ಫಿದಾ ಆಗಿದ್ದಾರೆ. ಇಬ್ಬರು ಕೊಡಗಿನವರೇ ಅಲ್ವೇ? ಆ ಪ್ರೀತಿ ಇದ್ದೇ ಇದೆ. ಅದನ್ನ ತಮ್ಮದೇ ರೀತಿಯಲ್ಲಿಯೇ ಹೇಳಿಕೊಂಡಿದ್ದಾರೆ.
“ತಪಸ್ವಿನಿ ಪೊಣಚ್ಚ ಕೊಡಗಿನವರೇ ಆಗಿದ್ದಾರೆ. ಇವರು ಒಂದು ಚಿತ್ರ ಮಾಡಿದ್ದಾರೆ. ಇದು ಥಿಯೇಟರ್ ಅಲ್ಲಿ ಯಶಸ್ವಿಯಾಗಿಯೇ ಪ್ರದರ್ಶನ ಕಾಣುತ್ತಿದೆ. ಇದು ನನಗೆ ಹೆಮ್ಮೆಯ ವಿಷಯವೇ ಆಗಿದೆ. ನಮ್ಮ ಕೊಡಿಗಿನ ಈ ಸುಂದರ ಹುಡುಗಿಗೆ ನನ್ನ ಪ್ರೀತಿಯ ಅಪ್ಪುಗೆ….
ಪ್ರೇಮದ ಊರಲಿ ಸಿನಿಮಾ ಯಶಸ್ವಿಯಾಗಿಯೇ ಓಡ್ತಿದೆ. ಈ ಚಿತ್ರ ಕನ್ನಡ ಸಿನಿಮಾರಂಗಕ್ಕೆ ಹೊಸ ಉತ್ಸಾಹ ತುಂಬಿದೆ. ಥಿಯೇಟರ್‌ಗಳಿಗೆ ಜೀವ ಕಳೆ ತಂದಿದೆ.
ಅದೆಷ್ಟೋ ವರ್ಷದಿಂದ ಸಿನಿಮಾನೇ ನೋಡೋದನ್ನೆ ಬಿಟ್ಟಿರೋ ಹಿರಿಯರು ಥಿಯೇಟರ್‌ಗೆ ಬಂದು ಈ ಚಿತ್ರ ನೋಡ್ತಿದ್ದಾರೆ. ಆ ರೀತಿಯ ಕ್ರೇಜ್ ಅನ್ನೆ ಇದು ಹುಟ್ಟುಹಾಕಿದೆ.
ಪ್ರೇಮದ ಊರಲಿ ಸಿನಿಮಾ ವಿದೇಶದಲ್ಲೂ ರಿಲೀಸ್ ಆಗುತ್ತಿದೆ. ಕೆಆರ್‌ಜಿ ಸಂಸ್ಥೆ ಈ ಚಿತ್ರವನ್ನ ಸಾಗರೋತ್ತರದಲ್ಲಿ ರಿಲೀಸ್ ಮಾಡೋಕೆ ಮುಂದಾಗಿದೆ.
ಪ್ರೇಮದ ಊರಲಿ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ವಿಶ್
(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್)
ಡೈರೆಕ್ಟರ್ ಮನೋಜ್ ಕುಮಾರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ರಂಗಾಯಣ ರಘ, ರಮಿಕಾ ಶಿವು, ಶ್ರೀರಾಮ್, ತಪಸ್ವಿನಿ ಪೊಣಚ್ಚ ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ಮಾಡಿದ್ದಾರೆ. ಟೈಟಲ್ ಟ್ರ್ಯಾಕ್ ಅಂತೂ ಹೆಚ್ಚು ಇಷ್ಟ ಆಗಿದೆ. ಮಕ್ಕಳು ಈ ಹಾಡನ್ನ ಹಾಡಿದ್ದಾರೆ. ರಂಗಾಯಣ ರಘು ಇದನ್ನ ಬಹುವಾಗಿಯೇ ಕೊಂಡಾಡಿದ್ದಾರೆ.
ಅಕ್ಟೋಬರ್-16 ರಂದು ಈ ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಇದೀಗ ಈ ಸಿನಿಮಾ ನವೆಂಬರ್-20 ರಂದು ಬಿಡುಗಡೆ ಆಗುತ್ತಿದೆ ಅಂತಲೇ ಹೇಳಬಹುದು.
[ad_2]
Source link













