ನನ್ನಪ್ಪ ಎಲ್ಲಾ ನೋಡ್ಕೋತಾರೆ, ಮೂವರು ವಿದ್ಯಾರ್ಥಿಗಳನ್ನು ಬಲಿ ಪಡೆದರೂ ಇಳಿಯಲಿಲ್ಲ ಶ್ರೀಮಂತಿಕೆಯ ಅಹಂಕಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಡಿಕ್ಕಿ ಹೊಡೆದ ಕಾರು

[ad_1]

Last Updated:

ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ ಆರೋಪಿಯನ್ನು ಉದ್ರಿಕ್ತ ಗುಂಪೊಂದು ಸುತ್ತುವರೆದಾಗ, ಅವನ ಮುಖದಲ್ಲಿ ಪಶ್ಚಾತ್ತಾಪದ ಬದಲು ನಿರ್ಭೀತ ಭಾವನೆ ಮೂಡಿತು. ಆರೋಪಿಯು ತನ್ನ ತಂದೆ “ಎಲ್ಲವನ್ನೂ ನೋಡಿಕೊಳ್ಳುತ್ತಾರೆ” ಎಂದು ಸ್ಥಳೀಯರಿಗೆ ಸೊಕ್ಕಿನಿಂದ ಹೇಳಿಕೊಂಡಿದ್ದಾನೆ.

ಡಿಕ್ಕಿ ಹೊಡೆದ ಕಾರು
ಡಿಕ್ಕಿ ಹೊಡೆದ ಕಾರು

ನೆಡುಂಬಸ್ಸೇರಿ(ಅ.12): ಕೇರಳದ ನೆಡುಂಬಸ್ಸೇರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ನಂತರ, ಅಧಿಕಾರ ಮತ್ತು ನಿರ್ಲಕ್ಷ್ಯದ ಶಾಕಿಂಗ್ ವಿಚಾರ ಹೊರಬಿದ್ದಿದೆ. ಪ್ರತ್ಯಕ್ಷದರ್ಶಿ ಸಲೀಂ ಪ್ರಕಾರ, ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಪಕ್ಕದಲ್ಲಿದ್ದವರು ಭಯಭೀತರಾಗಿದ್ದರು ಮತ್ತು ತಕ್ಷಣವೇ ಗಾಯಾಳುಗಳ ಸಹಾಯಕ್ಕೆ ಧಾವಿಸಿದರು.

ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ ಆರೋಪಿಯನ್ನು ಉದ್ರಿಕ್ತ ಗುಂಪೊಂದು ಸುತ್ತುವರೆದಾಗ, ಅವನ ಮುಖದಲ್ಲಿ ಪಶ್ಚಾತ್ತಾಪದ ಬದಲು ನಿರ್ಭೀತ ಭಾವನೆ ಮೂಡಿತು. ಆರೋಪಿಯು ತನ್ನ ತಂದೆ “ಎಲ್ಲವನ್ನೂ ನೋಡಿಕೊಳ್ಳುತ್ತಾರೆ” ಎಂದು ಸ್ಥಳೀಯರಿಗೆ ಸೊಕ್ಕಿನಿಂದ ಹೇಳಿಕೊಂಡಿದ್ದಾನೆ. ಈ ಭೀಕರ ಅಪಘಾತವು ಮೂರು ಕುಟುಂಬಗಳನ್ನು ಶೋಕಕ್ಕೆ ದೂಡಿದ್ದಲ್ಲದೆ, ಶ್ರೀಮಂತಿಕಯ ದರ್ಪ ಏನು ಎಂಬುವುದನ್ನು ಬಹಿರಂಗಪಡಿಸಿತು.

ಸಲೀಂ ಈ ಬಗ್ಗೆ ವಿವರಿಸುತ್ತಾ, “ಅಪಘಾತ ಸಂಭವಿಸಿದಾಗ ನಾನು ಹತ್ತಿರದಲ್ಲಿ ನಿಂತಿದ್ದೆ. ದೊಡ್ಡ ಶಬ್ದ ಕೇಳಿ ಬಂತು ಏನಾದರೂ ಸಂಭವಿಸಿದೆಯೇ ಎಂದು ನೋಡಲು ನಾವೆಲ್ಲರೂ ಸ್ಥಳಕ್ಕೆ ಧಾವಿಸಿದೆವು. ರಸ್ತೆಯಲ್ಲಿ ಮೂವರು ಗಾಯಗೊಂಡು ಬಿದ್ದಿದ್ದರು. ಅವರಿಗೆ ಮಿನಿ ಕೂಪರ್ ಡಿಕ್ಕಿ ಹೊಡೆದಿತ್ತು” ಎಂದಿದ್ದಾಎ. ಇನ್ನು ಡಿಕ್ಕಿಯ ನಂತರದ ದೃಶ್ಯವನ್ನು ವಿವರಿಸುತ್ತಾ, ಚಾಲಕ ಘಟನೆಯ ತೀವ್ರತೆಯನ್ನು ನಿರ್ಲಕ್ಷಿಸಲು ಪ್ರಯತ್ನಿಸುವ ಮೊದಲು ಕೋಪಗೊಂಡ ಸ್ಥಳೀಯರು ವಾಹನವನ್ನು ನಿಲ್ಲಿಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಸಲೀಂ ಮುಂದುವರಿಸುತ್ತಾ, “ಜನರು ಅವನನ್ನು ತಡೆದರು, ಮತ್ತು ಸ್ವಲ್ಪ ವಾಗ್ವಾದ ನಡೆಯಿತು. ಚಾಲಕನ ಸೀಟಿನಲ್ಲಿದ್ದ ವ್ಯಕ್ತಿ ತನ್ನ ತಂದೆ ಎಲ್ಲವನ್ನೂ ನಿಭಾಯಿಸುತ್ತಾರೆ ಎಂದು ಹೇಳಿದನು. ನಂತರ ಪೊಲೀಸರು ಮತ್ತು ಆಂಬ್ಯುಲೆನ್ಸ್ ಬಂದಿತು. ಆದರೆ ಆಂಬ್ಯುಲೆನ್ಸ್ ಬರುವ ಹೊತ್ತಿಗೆ, ಗಾಯಾಳುಗಳು ಸಾವನ್ನಪ್ಪಿದ್ದರು ಎಂದಿದ್ದಾರೆ.

ಕೊಚ್ಚಿಯ ನೆಡುಂಬಸ್ಸೇರಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಮೂವರು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ದ್ವಿಚಕ್ರ ವಾಹನಕ್ಕೆ ಮಿನಿ ಕೂಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಅವರು ತಕ್ಷಣವೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ, ಪೊಲೀಸರು ಆಗಮಿಸಿ, ಸುಹೈಲ್ ಸಜೀವ್ ಎಂದು ಗುರುತಿಸಲಾದ ಆರೋಪಿ ಚಾಲಕನನ್ನು ಬಂಧಿಸಿ, ವಾಹನವನ್ನು ವಶಪಡಿಸಿಕೊಂಡರು.

ಮೂಲಗಳ ಪ್ರಕಾರ, ಸಜೀವ್ ಮಿನಿ ಕೂಪರ್ ಅನ್ನು ಅತಿವೇಗದಲ್ಲಿ ಚಲಾಯಿಸುತ್ತಿದ್ದಾಗ ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಆ ಸಮಯದಲ್ಲಿ ಆರೋಪಿಗಳು ಕುಡಿದಿದ್ದರೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಲಿಯಾದವರನ್ನು 21 ವರ್ಷದ ಇಯಾಸ್, ದೇವಿಕಾ ಮತ್ತು ಗೋಪಿಕಾ ಎಂದು ಗುರುತಿಸಲಾಗಿದೆ. ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed