Lord Gaaga: ವಿಭಿನ್ನ ಪೋಸ್ಟರ್‌ನಿಂದ ಗಮನ ಸೆಳೆದ ‘ಲಾರ್ಡ್ ಗಾಗ’; ನಾಯಕ ಶೂನ್ಯ ಹೇಳಿದ್ದೇನು? | | ACTPnews

Kannada Lord Gaga Movie Hero Shunya Exclusive Interview with news 18 kannada Digital


ಉಪ್ಪಿ ನೆನಪಿಸೋ ಸಿನಿಮಾ

ಲಾರ್ಡ್ ಗಾಗ ಚಿತ್ರ ವಿಶೇಷವಾಗಿದೆ. ಪೋಸ್ಟರ್ ನೊಡಿದ್ರೆ ಅದು ತಿಳಿಯುತ್ತದೆ. ಚಿತ್ರದ ನಾಯಕ ಶೂನ್ಯ ಇಲ್ಲಿ ಲೇಡಿ ಅವತಾರ್ ಅಲ್ಲಿಯೇ ಇದ್ದಾರೆ.

ಉಪ್ಪಿ ನೆನಪಿಸೋ ಸಿನಿಮಾ
(ಚಿತ್ರ ಕೃಪೆ: ನಾಯಕ ಶೂನ್ಯ)

ಆದರೆ, ಇವರು ಹುಡುಗನ ರೀತಿನೂ ಕಾಣುತ್ತಾರೆ. ಅರ್ಧನಾರೀಶ್ವರನ ಮಾಡರ್ನ್ ರೂಪ ಅನಿಸುತ್ತಾರೆ. ಮೆದುಳಿನ ಪೋಸ್ಟರ್ ಅಲ್ಲೂ ಒಂದು ಹುಡುಗಿ ಮತ್ತೊಂದು ಹುಡುಗನ ಚಪ್ಪಲಿ ಇವೆ. ಇದು ಇಡೀ ಚಿತ್ರದ ಒಟ್ಟು ಕಾನ್ಸೆಪ್ಟ್ ಕಟ್ಟಿಕೊಡುತ್ತಿದೆ.

ಶೂನ್ಯ ಹೇಳೋದು ಏನು

ಈ ಒಂದು ಚಿತ್ರದಲ್ಲಿ ಮನುಷ್ಯನ ಮನಸ್ಥಿತಿಯ ಬಗ್ಗೆ ಹೇಳುತ್ತಿದ್ದೇವೆ. ಪೋಸ್ಟರ್ ಅಲ್ಲಿರೋವಂತೆ ಮನುಷ್ಯನ ಮೆದುಳು ಒಂದು ಎಮೋಷನಲ್, ಮತ್ತೊಂದು ಲಾಜಿಕಲ್ ಆಗಿಯೇ ಇರುತ್ತದೆ.

ಇದನ್ನ ಇಲ್ಲಿ ಹುಡುಗಿ ಮತ್ತು ಹುಡುಗನಿಗೆ ಹೋಲಿಸಿದ್ದೇವೆ. ಚಿತ್ರದ ಕೊನೆಯಲ್ಲಿ ಲೈಫ್ ಬಗ್ಗೇನೆ ಹೇಳಿದ್ದೇವೆ. 6 ಹಾಡುಗಳಿವೆ. ಈ ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ.

ಐದು ಭಾಷೆಯಲ್ಲಿ…

ನಮ್ಮ ಈ ಚಿತ್ರ ಐದು ಭಾಷೆಯಲ್ಲಿ ರಿಲೀಸ್ ಆಗುತ್ತದೆ. ಆಯಾ ಭಾಷೆಯಲ್ಲಿ ಇದನ್ನ ಡಬ್ ಮಾಡುತ್ತೇವೆ. ಡಬ್ ಮಾಡಿಯೇ ಇದನ್ನ ರಿಲೀಸ್ ಮಾಡುತ್ತೇವೆ.

ಸಿನಿಮಾದ ಒಂದು ಟೀಸರ್ ರಿಲೀಸ್ ಆಗಿದೆ. ಇದನ್ನ 8 ಭಾಷೆಯಲ್ಲಿ ರಿಲೀಸ್ ಮಾಡಿದ್ದೇವೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ.

ಚಿತ್ರದ ಆರ್.ಆರ್.ಕೆಲಸ

ನಮ್ಮ ಈ ಚಿತ್ರದ ಹಿನ್ನೆಲೆ ಸಂಗೀತದ ಕೆಲಸ ನಡೀತಾ ಇದೆ. ಡಿಐ ಕೂಡ ಆಗುತ್ತಿದೆ. ಸಿನಿಮಾ ಚೆನ್ನಾಗಿ ಬಂದಿದೆ. ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ.

Kannada Lord Gaga Movie Hero Shunya Exclusive Interview with news 18 kannada Digital

ಉಪ್ಪಿ ನೆನಪಿಸೋ ಸಿನಿಮಾ
(ಚಿತ್ರ ಕೃಪೆ: ನಾಯಕ ಶೂನ್ಯ)

ಹೆಡ್‌ಬುಷ್ ಚಿತ್ರವನ್ನ ಡೈರೆಕ್ಷನ್ ಮಾಡಿದ್ದೇನೆ. ಆದರೆ, ಈ ಸಿನಿಮಾದಲ್ಲಿ ನಾಯಕ ಪಾತ್ರ ಆಗಿದ್ದೇನೆ. ವೈ.ಕೆ.ಈ ಚಿತ್ರವನ್ನ ಬರೆದಿದ್ದಾರೆ.

ಇವರೇ ಈ ಸಿನಿಮಾದ ಡೈರೆಕ್ಟರ್ ಆಗಿದ್ದಾರೆ. ಮುಕಿ ರೆಘುನಾಥನ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ ಅಂತ ಶೂನ್ಯ ಹೇಳಿಕೊಂಡಿದ್ದಾರೆ.

ಪೋಸ್ಟರ್ ಇಂಟ್ರಸ್ಟಿಂಗ್

ಲಾರ್ಡ್ ಗಾಗ ಚಿತ್ರದ ಪೋಸ್ಟರ್ ತುಂಬಾನೆ ಚೆನ್ನಾಗಿದೆ. ಒಂದು ರೀತಿ ಉಪೇಂದ್ರ ಅವರ ಸಿನಿಮಾ ತರವೇ ಇದೆ. ಮನುಷ್ಯನಲ್ಲಿ ಹುಡುಗ ಮತ್ತು ಹುಡುಗಿ ಮನಸ್ಸು ಇರುತ್ತವೆ ಅನ್ನೋದನ್ನ ತೋರಿಸಿದ್ದೇವೆ ಅಂತಲೇ ಶೂನ್ಯ ಹೇಳಿದ್ದಾರೆ.

ಒಟ್ಟಾರೆ, ಈ ಚಿತ್ರದ ಪೋಸ್ಟರ್ ಇಂಟ್ರಸ್ಟಿಂಗ್ ಆಗಿದೆ. ಎಲ್ಲರ ಗಮನ ಸೆಳೆಯುವಂತೇನೆ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed