[ad_1]
ಕಾಗೆ ಬಂಗಾರ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಚಿತ್ರದ ಟೀಸರ್ ಕೂಡ ಅಷ್ಟೆ ಇಂಟ್ರ್ಟಿಂಗ್ ಆಗಿದೆ. ಸೂರ್ಯ ಪ್ರಖ್ಯಾತ್ ಈ ಚಿತ್ರದ ಮೂಲಕ ಒಂದು ರಗಡ್ ರೋಲ್ ಮಾಡಿದ್ದಾರೆ.
ಕಾಗೆ ಬಂಗಾರ ಫಸ್ಟ್ ಲುಕ್
(ಚಿತ್ರ ಕೃಪೆ: ಕಾಗೆ ಬಂಗಾರ ಸಿನಿಮಾ ಟೀಮ್)
ಪ್ರಶಾಂತ್ ಸಿದ್ದಿ ಈ ಚಿತ್ರದಲ್ಲೂ ಇದ್ದಾರೆ. ಸೂರ್ಯ ಪ್ರಖ್ಯಾತ್ ಹಾಗೂ ಪ್ರಶಾಂತ್ ಸಿದ್ದಿ ಈ ಟೀಸರ್ ಅಲ್ಲಿ ಗಮನ ಸೆಳೆದ್ದಾರೆ. ಸಹಜವಾಗಿಯೇ ಇವರು ತಮ್ಮ ಪಾತ್ರಗಳನ್ನ ಜೀವಿಸಿದ್ದಾರೆ.
ಕಾಗೆ ಬಂಗಾರ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಭಾನುವಾರ ಅಕ್ಟೋಬರ್-11 ರಂದು ಬೆಳಗ್ಗೆ 8.8 ಗಂಟೆಗೆ ಇದು ರಿಲೀಸ್ ಆಗಿದೆ.
ಇದರಲ್ಲಿ ನಾಯಕ ನಟ ಸೂರ್ಯ ಪ್ರಖ್ಯಾತ್ ಪಾತ್ರದ ಪರಿಚಯ ಇದೆ. ಸಹಜ ಮತ್ತು ನೈಜ ಫೀಲ್ ಕೊಡುತ್ತದೆ. ಈ ಚಿತ್ರದಲ್ಲಿ ಒಂದು ಇಂಟ್ರಸ್ಟಿಂಗ್ ಕತೆ ಇದೆ.
ದುನಿಯಾ ವಿಜಯ್ ಹಿರಿಯ ಮಗಳು ರಿತನ್ಯಾ ಈ ಚಿತ್ರದಲ್ಲಿದ್ದಾರೆ. ಡೈರೆಕ್ಟರ್ ಸೂರಿ ಅವರ ಡೈರೆಕ್ಷನ್ ಅಲ್ಲಿಯೇ ಫಸ್ಟ್ ಟೈಮ್ ಕೆಲಸ ಮಾಡಿದ್ದಾರೆ.
ಚಿತ್ರದ ಫಸ್ಟ್ ಲುಕ್ ಟೀಸರ್ ಅಲ್ಲಿ ಒಂದು ಫ್ರೇಮ್ ಅಲ್ಲಿ ಬಂದು ಹೋಗ್ತಾರೆ. ಅಷ್ಟರಲ್ಲಿಯೇ ಇವರು ಗಮನ ಸೆಳೆಯುತ್ತಾರೆ. ಆ ರೀತಿನೇ ಇವರ ಪಾತ್ರ ಇಲ್ಲಿದೆ ಅನಿಸುತ್ತದೆ. ಲ್ಯಾಂಡ್ಲಾರ್ಡ್ ಆದ್ಮೇಲೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ದುನಿಯಾ ಸೂರಿ ‘ಕಾಗೆ ಬಂಗಾರ’ ಫಸ್ಟ್ ಲುಕ್ ಔಟ್
(ಚಿತ್ರ ಕೃಪೆ: ದುನಿಯಾ ಸೂರಿ ಇನ್ಸ್ಟಾಗ್ರಾಮ್)
ಈ ಚಿತ್ರವನ್ನ ಹರ್ಷಿತ್ ಆರ್.ಗೌಡ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಸುರೇಂದ್ರನಾಥ್, ಅಮ್ರಿ ಕೇಸರಿ ಅವರು ಕತೆ ಮತ್ತು ಚಿತ್ರಕತೆ ಮಾಡಿದ್ದಾರೆ.
ಇವರ ಈ ಚಿತ್ರದ ಬಗ್ಗೆ ಕುತೂಹಲ ಶುರು ಆಗಿದೆ. ಫಸ್ಟ್ ಲುಕ್ ಟೀಸರ್ ಆ ಒಂದು ಕ್ಯೂರಿಯೋಸಿಟಿ ಹೆಚ್ಚಿಸಿದೆ ಅಂತ ಹೇಳಬಹುದು.
[ad_2]
Source link













