Last Updated:
ಬಿಗ್ ಬಾಸ್ ಕನ್ನಡ ಸ್ಪರ್ಧಿ ಮಂಜುನಾಥ್ ಪರವಾಗಿ ನಂಜನಗೂಡಿನ ಹಳ್ಳಿ ಮನೆ ಹೋಟೆಲ್ ಮಾಲೀಕರು ಬಿಲ್ ಮೇಲೆ ವೋಟ್ ಮಾಡುವಂತೆ ಮುದ್ರಿಸಿ ವಿಭಿನ್ನ ಪ್ರಚಾರ ನಡೆಸಿದ್ದು ವೈರಲ್ ಆಗಿದೆ.
ಮೈಸೂರು: ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ (Bigg Boss Kannada) ರಿಯಾಲಿಟಿ ಶೋ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ಪರವಾಗಿ ಅಭಿಮಾನಿಗಳು (Fans) ಹತ್ತಾರು ವಿಭಿನ್ನ ದಾರಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, 13ನೇ ಸೀಸನ್ನ ಜನಪ್ರಿಯ ಸ್ಪರ್ಧಿ ‘ಮಾಡರ್ನ್ ಮಹಾಕವಿ ಮಂಜ’ (Madarn Mahakavi Manja) ಎಂದೇ ಖ್ಯಾತಿ ಗಳಿಸಿರುವ ಮಂಜುನಾಥ್ ಅವರಿಗೆ ನಂಜನಗೂಡಿನ ಹೋಟೆಲ್ ಮಾಲೀಕರೊಬ್ಬರು ನೀಡಿರುವ ಬೆಂಬಲ ಸಖತ್ ವೈರಲ್ (Viral) ಆಗುತ್ತಿದೆ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೇ, ಹೋಟೆಲ್ಗೆ (Hotel) ಬರುವ ಗ್ರಾಹಕರ ಕೈಸೇರುವ ಬಿಲ್ನಲ್ಲೇ ವೋಟ್ ಮಾಡುವಂತೆ ಮನವಿ ಮಾಡುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
‘ಮಾಡ್ರನ್ ಕವಿ ಮಂಜು’ ಮೂಲತಃ ವಿಜಯನಗರದವರಾದ್ರೂ ಮೈಸೂರಿನಲ್ಲಿ ಪೂರ ಬೆಂಬಲ ಸಿಗುತ್ತಿದೆ. ಅವರು ತಮ್ಮ ವಿಭಿನ್ನ ಶೈಲಿಯ ಮಾತುಗಳು ಹಾಗೂ ವರ್ತನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚಾಗುತ್ತಿದ್ದು, ನಂಜನಗೂಡಿನ ಹೋಟೆಲ್ ಮಾಲೀಕರ ಈ ದಿಢೀರ್ ಸಾಥ್ ಅವರ ಗೆಲುವಿನ ಹಾದಿಯನ್ನು ಮತ್ತಷ್ಟು ಸುಲಭಗೊಳಿಸಬಹುದು ಎಂದು ಅಭಿಮಾನಿಗಳು ನಂಬಿದ್ದಾರೆ. ಒಟ್ಟಿನಲ್ಲಿ, ಬಿಗ್ ಬಾಸ್ ಸ್ಪರ್ಧಿಯೊಬ್ಬರ ಪರವಾಗಿ ವ್ಯಾಪಾರೀ ಸ್ಥಳದಲ್ಲೇ ಇಂತಹ ಸೃಜನಶೀಲ ಬೆಂಬಲ ಸಿಕ್ಕಿರುವುದು ಸದ್ಯದ ಮಟ್ಟಿಗೆ ಸೋಷಿಯಲ್ ಮೀಡಿಯಾದಲ್ಲೂ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.












