Pavithra Gowda: ನೈಜಿರಿಯನ್ ಪ್ರಜೆಗಳ ಕಾಟದಿಂದ ಪವಿತ್ರಾಗೆ ಮುಕ್ತಿ ಸಿಗುತ್ತಾ? ಇಂದು ಆದೇಶ | Renukaswamy darshan pavithra plea court verdict today | | ACTPnews

ಪವಿತ್ರಾ ಗೌಡ


Last Updated:

Renukaswamy Case: ಪವಿತ್ರಾ ಗೌಡ ಬಗ್ಗೆ ವರದಿ ನೋಡಿ ಏನು ಹೇಳಲಿದೆ ಕೋರ್ಟ್? ಅರ್ಜಿಗೆ ಅಸ್ತು ಅಂತ ಹೇಳುತ್ತಾ?

ಪವಿತ್ರಾ ಗೌಡ
ಪವಿತ್ರಾ ಗೌಡ

ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೇಸ್​ಗೆ ಸಂಬಂಧಿಸಿ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡಗೆ (Pavithra Gowda) ನೈಜಿರಿಯನ್ ಪ್ರಜೆಗಳ ಕಾಟ ಜೋರಾಗಿದೆ. ಈ ಹಿಂದೆಯೇ ಜಡ್ಜ್​ (Judge) ಬಳಿ ಇದನ್ನು ಹೇಳಿ ಪವಿತ್ರಾ ಗೌಡ ಕಣ್ಣೀರಿಟ್ಟಿದ್ದು ವರದಿ ಕೇಳಿದರೂ ಕೊಡದೇ ಇದ್ದ ಜೈಲಾಧಿಕಾರಿಗಳ ಬಗ್ಗೆ ಕೋರ್ಟ್ ಗರಂ ಆಗಿತ್ತು.

ಸದ್ಯ ಇಂದಾದರೂ ಪವಿತ್ರಾ ಗೌಡಗೆ ನೈಜಿರಿಯನ್ ಕಾಟದಿಂದ ಮುಕ್ತಿ ಸಿಗುತ್ತಾ ಎನ್ನುವ ಕುತೂಹಲ ಶುರುವಾಗಿದೆ. ಕೊನೆಗೂ ಪವಿತ್ರಾ ಗೌಡ ಬ್ಯಾರಕ್ ಶಿಫ್ಟ್ ಬಗ್ಗೆ ಅಕ್ಟೋಬರ್ 6ರಂದು ವರದಿ ನೀಡಿದ ಜೈಲಾಧಿಕಾರಿಗಳು ಪವಿತ್ರ ಗೌಡ ಬ್ಯಾರಕ್ ಬದಲಾವಣೆ ಹಾಗೂ ಆರೋಗ್ಯ ಬಗ್ಗೆ ವರದಿಯನ್ನು ಇ-ಮೇಲ್ ಮುಖಾಂತರ ಸಲ್ಲಿಸಿದ್ದಾರೆ.

ಸದ್ಯ ಜೈಲಾಧಿಕಾರಿಗಳು ಕೋರ್ಟ್ ಗೆ ವರದಿ ಸಲ್ಲಿಸಿದ್ದು ಇವತ್ತು ಬ್ಯಾರಕ್ ಶಿಫ್ಟ್ ಬಗ್ಗೆ 59ನೇ ಸಿಸಿಹೆಚ್ ಕೋರ್ಟ್ ಆದೇಶ ನೀಡಲಿದೆ.

ನೈಜಿರಿಯನ್ ಪ್ರಜೆಗಳ ಕಾಟಕ್ಕೆ ರೋಸಿ ಹೋಗಿ ಜಡ್ಜ್ ಮುಂದೆ ಅಳಲು ತೋಡಿಕೊಂಡಿದ್ದ ಪವಿತ್ರಾ ಗೌಡ ಮನವಿಯನ್ನು ಪುರಸ್ಕರಿಸಿದ್ದ ಕೋರ್ಟ್ ಜೈಲಾಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿತ್ತು. ಬ್ಯಾರಕ್ ಶಿಫ್ಟ್ ಬಗ್ಗೆ ವರದಿ ನೀಡದೆ‌ ಜೈಲಾಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದು ಕೋರ್ಟ್ ಗರಂ ಆಗಿತ್ತು.

ಶೀಘ್ರ ವರದಿ ಸಲ್ಲಿಸುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ಡೆಡ್ ಲೈನ್ ಕೊಟ್ಟಿತ್ತು. ಸೆ.7ರಂದು ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡುವಂತೆ ಜಡ್ಜ್ ಆದೇಶ ನೀಡಿದ್ದರು. ಇನ್ನೊಂದು ದಿನ ಕಳೆದರೆ ಆದೇಶ ಬಂದು ಒಂದು ತಿಂಗಳೇ ಕಳೆದುಬಿಡುತ್ತದೆ. ಆದರೆ ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡಿಲ್ಲ ಅಂತ ಸೆ.22ರಂದು ಪವಿತ್ರಾ ಗೌಡ ಮತ್ತೆ ಅರ್ಜಿ ಸಲ್ಲಿಸಿದ್ದರು.

ವರದಿ: ಮಂಜುನಾಥ್ ಎನ್, ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports