Darshan Case: ದರ್ಶನ್ ಪರ ಅರ್ಜಿ ನೋಡಿ ಸುಪ್ರೀಂ ಕೋರ್ಟ್ ಹೇಳಿದ್ದು ಅದೊಂದೇ ಮಾತು! ವಿಜಯಲಕ್ಷ್ಮಿ ಲಾಯರ್ ಖಡಕ್ ವಾದ, ಸುಪ್ರೀಂ ಅಂಗಳದಲ್ಲಿ ಅರ್ಜಿ ವಿಚಾರಣೆ ಏನಾಯ್ತು? | | ACTPnews

ಏನಾಯ್ತು ವಾದ?

[ad_1]

Last Updated:

Darshan Case: ದರ್ಶನ್ ಪರವಾಗಿ ಲಾಯರ್ ಹಾಗೂ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ಏನಾಯ್ತು? ಸುಪ್ರೀಂ ಅಂಗಳದಲ್ಲಿ ನಡೆದ ವಾದ ಪ್ರತಿವಾದ ಹೇಗಿತ್ತು?

ಏನಾಯ್ತು ವಾದ?
ಏನಾಯ್ತು ವಾದ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy case) ಪ್ರಕರಣಕ್ಕೆ ಸಂಬಂಧಿಸಿ ಈಗ ಆರೋಪಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾನೆ. ಆರೋಪಿಯಾಗಿದ್ದ ಪ್ರದೋಷ್ (Pradosh) ಈಗ ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಕೂಡಾ ಮುಗಿದಿದೆ. ಇನ್ನು ಡಾಕ್ಯುಮೆಂಟ್ ಮಾರ್ಕಿಂಗ್ (Document Marking) ಇಂದು ನಡೆಯಲಿದೆ ಎನ್ನಲಾಗಿದ್ದು, ಈ ನಡುವೆಯೇ ಇಂದಿಗೆ ಲಿಸ್ಟ್ ಆಗಿದ್ದಂತಹ ದರ್ಶನ್ (Darshan) ಹಾಗೂ ವಿಜಯಲಕ್ಷ್ಮಿ (Vijayalakshmi) ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್​ನಲ್ಲಿ (Supreme Court) ವಿಚಾರಣೆ ಆಗಿದೆ.

ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಪ್ರದೋಷ್ ಮಾಫಿ ಸಾಕ್ಷಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸೆಷನ್ಸ್​ ಕೋರ್ಟ್​ನಲ್ಲಿ ರಿಜೆಕ್ಟ್ ಆಗಿತ್ತು. ಸೆಷನ್ಸ್ ಕೋರ್ಟ್​ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಅದರ ನಂತರ ದರ್ಶನ್ ಹಾಗೂ ಪವಿತ್ರಾ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆ ಅರ್ಜಿಯ ವಿಚಾರಣೆ ನಡೆದಿದೆ.

ಹಾಗಿದ್ದರೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿ ಸುಪ್ರೀಂ ಕೋರ್ಟ್ ಹೇಳಿದ್ದೇನು? ಇಂದು ಸುಪ್ರೀಂನಲ್ಲಿ ನಡೆದ ವಾದ ಹೇಗಿತ್ತು? ಸಂಪೂರ್ಣ ವಿವರ ಇಲ್ಲಿದೆ.

ಮಾಫಿ ಸಾಕ್ಷಿ ಪ್ರಶ್ನಿಸಿ ಸಲ್ಲಿಸಿದ್ದ ದರ್ಶನ್ ಅರ್ಜಿ ವಿಚಾರಣೆ ಆರಂಭವಾಗಿದ್ದು ಸುಪ್ರಿಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದೆ. ನ್ಯಾಯಾಮೂರ್ತಿ ಪರ್ದಿವಾಲ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆದಿದೆ. ವಿಜಯಲಕ್ಷ್ಮಿ ಪರವಾಗಿ ವಕೀಲರಿಂದ ವಾದ ಆರಂಭವಾಗಿದ್ದು ಟ್ರಯಲ್ ನಡೆದಿದೆ.

ಟ್ರಯಲ್ ಟೈಮ್​ನಲ್ಲಿ ಆರೋಪಿ ಅಪ್ರೂವರ್ ಆದ

ಟ್ರೈಯಲ್ ಸಂಧರ್ಬದಲ್ಲಿ ಆರೋಪಿತ ವ್ಯಕ್ತಿ ಅಪ್ರೂವರ್ ಆಗಿ ಬಂದಿದ್ದಾನೆ. ವಕೀಲರ ಮೂಲಕ ಅಪ್ರೂವರ್ ಆಗಿ ಬಂದಿದ್ದಾನೆ. ಅದನ್ನ ಪ್ರಾಸಿಕ್ಯೂಷನ್ ಒಪ್ಪಿದ್ದು, ಕೋರ್ಟ್ ಕೂಡ ಒಪ್ಪಿದೆ. ನಾವು ಹೈಕೋರ್ಟ್ ಗೆ ಚಾಲೆಂಜ್ ಮಾಡಿದ್ದೆವು. ಒಬ್ಬ ವಕೀಲರ ಮೂಲಕ ಪ್ರದೂಷ್ ಮಾಫಿ ಸಾಕ್ಷಿ ಅರ್ಜಿ ಸಲ್ಲಿಕೆ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ಪರ ವಕೀಲರು ವಾದಿಸಿದ್ದಾರೆ.

ವಿಜಯಲಕ್ಷ್ಮಿ ಪರ ವಕೀಲ ನಾಗಮುತ್ತು ವಾದ

ವಿಜಯಲಕ್ಷ್ಮಿ ಪರ ವಕೀಲರು ನಾಗಮುತ್ತು ಅವರು ಕೆಲ ಪ್ರಕರಣಗಳ ಜಡ್ಜ್ ಮೆಂಟ್ ಉದಾಹರಣೆ ಕೊಟ್ಟು ಪ್ರದೂಷ್ ಮಾಫಿ ಸಾಕ್ಷಿ ತಡೆಗೆ ಮನವಿ ಮಾಡಿದ್ದಾರೆ. ಮಾಫಿ ಸಾಕ್ಷಿ ಕಾನೂನಾತ್ಮಕ ದೋಷಗಳಿವೆ ಎಂದು ವಿಜಯಲಕ್ಷ್ಮಿ ಪರ ವಕೀಲರ ವಾದ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು? ವಿಚಾರಣೆ ಮುಂದೂಡಿಕೆ

ನೀವು ಸಲ್ಲಿಸಿದ ಜಡ್ಜ್ ಮೆಂಟ್ ಕಾಪಿಗಳನ್ನ ಪರಿಶೀಲನೆ ‌ಮಾಡಿ ವಿಚಾರಣೆ ನಡೆಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಚಾರಣೆ ನಾಳೆಗೆ ಮುಂದೂಡಿರುವ ಕೋರ್ಟ್ ವಿಜಯಲಕ್ಷ್ಮಿ ಪರ ವಕೀಲರು ಸಲ್ಲಿಸಿದ ಜಡ್ಜ್ ಮೆಂಟ್ ಕಾಪಿಗಳನ್ನ ಪರಿಶೀಲನೆ ಮಾಡಲಿದೆ.

ವಿಜಯಲಕ್ಷ್ಮಿ ವಕೀಲರ ಖಡಕ್ ವಾದ

ಈ ಹಿಂದೆ ಅವರು Cr.P.C. ಸೆಕ್ಷನ್ 164 ಅಡಿಯಲ್ಲಿ ಯಾವುದೇ ಹೇಳಿಕೆಯನ್ನೂ ದಾಖಲಿಸಿಲ್ಲ. ಈಗಲೂ ಸೆಕ್ಷನ್ 161ರ ಹೇಳಿಕೆ ದಾಖಲಿಸುತ್ತಿಲ್ಲ. ಸೆಕ್ಷನ್ 164ರ ಹೇಳಿಕೆಯೂ ಇಲ್ಲ. ಸೆಕ್ಷನ್ 364ರ ಪ್ರಕ್ರಿಯೆಯನ್ನೂ ಪಾಲಿಸಲಾಗಿಲ್ಲ. ಯಾವುದೇ ಹಿಂದಿನ ಹೇಳಿಕೆ ಇಲ್ಲ, ಕೇವಲ ಒಬ್ಬ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಕೆಲ ಕಾನೂನಾತ್ಮಕ ತೊಡಕುಗಳಿದ್ದರೂ ಕೋರ್ಟ್ ಮಾಫಿ ಸಾಕ್ಷಿಗೆ ಒಪ್ಪಿಗೆ ನೀಡಿದೆ ಎಂದು ವಿಜಯಲಕ್ಷ್ಮಿ ಪರ ವಕೀಲ ವಾದ ಮಾಡಿದ್ದಾರೆ.

ನಾಳೆಗೆ ವಿಚಾರಣೆ ಮುಂದೂಡಿದ ಸುಪ್ರೀಂ

ಹೈಕೋರ್ಟ್ ಸೆಷನ್ಸ್ ಕೋರ್ಟ್ ನ ಆದೇಶ ಎತ್ತಿ ಹಿಡಿದೆ ಅಲ್ವೇ ಎಂದು ಜಡ್ಜ್ ಪ್ರಶ್ನಿಸಿದ್ದಾರೆ. ಆಗ ವಿಜಯಲಕ್ಷ್ಮಿ ಪರ ವಕೀಲ ಮಾಫಿ ಸಾಕ್ಷಿ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

ವರದಿ: ಮಾದೇಶ್ ಸಿ.ಎನ್ , ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports