House Wash: ಫೈರ್ ಟ್ರಕ್​ನಿಂದ ಮನೆ ತೊಳೆಸಿದ BJP ಶಾಸಕ! ದೀಪಾವಳಿಗೆ ಮನೆ ಕ್ಲೀನಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ಎಐ)


Last Updated:

BJP MLA: ದೀಪಾವಳಿ ಹತ್ತಿರ ಬಂತು. ಮನೆ ಕ್ಲೀನ್ ಮಾಡ್ಬೇಕಲ್ಲಾ? ಈ ಬಿಜೆಪಿ ಶಾಸಕ ಏನ್ಮಾಡಿದ್ರು ಗೊತ್ತಾ? ಫೈರ್ ಟ್ರಕ್ ತಂದು ತಮ್ಮ ಬಂಗಲೆ ತೊಳೆದಿದ್ದಾರೆ.

ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ಎಐ)
ಪ್ರಾತಿನಿಧಿಕ ಚಿತ್ರ (ಚಿತ್ರ ಕೃಪೆ: ಎಐ)

ಕೆಲವೊಂದು ಘಟನೆಗಳನ್ನು ಕೇಳಿದಾಗ ಇದು ನಿಜಾನಾ ಅಂತ ಅನಿಸುತ್ತೆ. ಇನ್ನು ಕೆಲವೊಮ್ಮೆ ಇಂಥಹ ಐಡಿಯಾ ಹೇಗಪ್ಪಾ ಬರುತ್ತೆ ಅಂತ ಅನಿಸುತ್ತೆ. ದಿಢೀರ್ ಆಗಿ ಎಲ್ಲಾದರೂ ಅಗ್ನಿ ಅವಘಡ ಸಂಭವಿಸಿದರೆ, ಮನೆಗೋ, ಫ್ಯಾಕ್ಟರಿಗೋ ಬೆಂಕಿ ಬಿದ್ದರೆ ಅಥವಾ ಬೆಂಕಿಗೆ ಸಂಬಂಧಿಸಿ ಇನ್ಯಾವುದೇ ಅನಾಹುತ ಆದರೆ ಸೈರನ್ ಮಾಡ್ತಾ ಓಡುತ್ತಾ ಬರೋ ಫೈರ್ ಟ್ರಕ್ ಥಟ್ ಅಂತ ಭಾರೀ ಪ್ರಮಾಣದಲ್ಲಿ ನೀರು ಹಾಯಿಸಿ ಬೆಂಕಿ ನಂದಿಸೋದನ್ನು ನೀವು ನೋಡಿರಬಹುದು, ಆದರೆ ಮನೆ ತೊಳೆಯೋದನ್ನು ನೋಡಿದ್ದೀರಾ?

ಹೌದು, ಬಿಜೆಪಿ ಶಾಸಕರೊಬ್ಬರು ತಮ್ಮ ಮನೆ ದೊಡ್ಡ ಬಂಗಲೆಯನ್ನು ತೊಳೆಯೋದಕ್ಕೆ ಈ ಫೈರ್ ಟ್ರಕ್ ಬಳಸಿರೋದು ಈಗ ಭಾರೀ ಸುದ್ದಿಯಾಗಿರೋದಷ್ಟೆ ಅಲ್ಲದೆ ಜನರ ಹುಬ್ಬೇರಿಸಿದೆ.

ದಾಹೊಡ್ ಜಿಲ್ಲೆಯ ದೇವಗಡ್ ಬರಿಯಾ ಮುನ್ಸಿಪಾಲಿಟಿಯಲ್ಲಿ ಫೈರ್ ಟ್ರಕ್ ಬಳಸಿ ಬಿಜೆಪಿ ಶಾಸಕ ಮನೆ ತೊಳೆದಿರುವ ಸಂಗತಿ ಈಗ ಭಾರೀ ಸುದ್ದಿಯಾಗಿದೆ. ಮೊದಲೇ ಮಳೆ ಇಲ್ಲದೆ ಬರಗಾಲದ ಎಲ್ಲಾ ಸೂಚನೆ ಇರುವಾಗಲೇ ಶಾಸಕರು ಮನೆ ತೊಳೆದಿದ್ದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಶಾಸಕರ ಮನೆ ಫೈರ್ ಸ್ಟೇಷನ್​ನಿಂದ ಸುಮಾರು 25 ಕಿಮೀ ದೂರ ಇದೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಯಾವುದೇ ಬೆಂಕಿಯೇ ಇಲ್ಲದ ಶಾಸಕರ ಬಂಗಲೆಗೆ ನೀರು ಹಾಯಿಸುವ ದೃಶ್ಯ ವೈರಲ್ ಆಗಿವೆ.

ಬಿಜೆಪಿ ಮುಖಂಡ ಹಾಗೂ ದೇವಗಡ್ ಬರಿಯಾ ಮುನ್ಸಿಪಾಲಿಟಿಯ ಅಧ್ಯಕ್ಷ ಧರ್ಮೇಶ್ ಕಲಾಲ್ ಅವರು ಮಾತನಾಡಿದ್ದು, ಈ ಕ್ಲೀನಿಂಗ್ ಬರೀ 15 ಸೆಕೆಂಡ್ಸ್​ನಲ್ಲಿ ನಿಲ್ಲಿಸಲಾಗಿದೆ.  ಅಧಿಕಾರಿಗಳು ಹೇಳಿದ ತಕ್ಷಣ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.

ಈ ವಿವಾದದ ನಂತರ ಶಾಸಕರಿಂದ 2700 ರೂಪಾಯಿಯನ್ನು ಪಡೆಯಲಾಗಿದೆ ಎನ್ನಲಾಗಿದೆ. ದೀಪಾವಳಿಗೂ ಮುನ್ನ ದೇವಗಢ ಬಾರಿಯಾ ಪಟ್ಟಣದ ಧನ್‌ಪುರ್-ಪಿಪೆರೊ ಪ್ರದೇಶದಲ್ಲಿರುವ ಮಾಜಿ ಸಚಿವ ಖಬಾದ್ ಅವರ ಮನೆಯನ್ನು ‘ತೊಳೆಯಲು’ ಟ್ರಕ್ ಅನ್ನು ಕರೆಸುವ ಸಂದರ್ಭದಲ್ಲಿ ಅವರು ಗಂಭೀರ ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

ದೀಪಾವಳಿ ಸಮಯದಲ್ಲಿ ಬಹುತೇಕ ಗುಜರಾತಿಗಳು ತಮ್ಮ ಮನೆಯನ್ನು ಡೀಪ್ ಕ್ಲೀನ್ ಮಾಡುತ್ತಾರೆ. ಕೆಲವೊಮ್ಮೆ ಇಡೀ ಮನೆಯನ್ನು ತೊಳೆಯುತ್ತಾರೆ. ಈಗಾಗಲೇ ಗುಜರಾತಿನಲ್ಲಿ ಮಳೆಯ ಕೊರತೆ ಇದ್ದು, ಬರಗಾಲದ ಛಾಯೆ ಮೂಡಿದೆ. ಹಲವಾರು ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವಾಗ ಶಾಸಕರ ವರ್ತನೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed