Last Updated:
Shah Rukh Khan: ಶಾರುಖ್ ಖಾನ್ ಅಭಿನಯದ ಕಿಂಗ್ ಸಿನಿಮಾಗೆ ಖ್ಯಾತ ಸ್ಟಾರ್ ನಟಿಯೊಬ್ಬರು ಎಂಟ್ರಿ ಕೊಡ್ತಿದ್ದಾರಂತೆ. ದೀಪಿಕಾ ಅಲ್ಲ, ಯಾರು ಗೊತ್ತಾ?
ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅವರು ಕಿಂಗ್ ಸಿನಿಮಾದ (King Movie) ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ. ಮಗಳು ಸುಹಾನಾ ಹಾಗೂ ಅವರ ನೆಚ್ಚಿನ ಕೋಸ್ಟಾರ್ ದೀಪಿಕಾ ಪಡುಕೋಣೆ (Deepika Padukone), ನಟ ಅಭಿಷೇಕ್ ಬಚ್ಚನ್ ನಟಿಸಿರುವ ಈ ಬಿಗ್ ಪ್ರಾಜೆಕ್ಟ್ ಶಾರುಖ್ ಕೆರಿಯರ್ನ ಪ್ರಮುಖ ಸಿನಿಮಾ ಆಗಲಿದೆ ಎನ್ನಲಾಗಿದೆ. ಈಗ ಈ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದು ರಿವೀಲ್ ಆಗಿದೆ.
ನಟಿ ದೀಪಿಕಾ ಪಡುಕೋಣೆ ಅವರು ಶಾರುಖ್ ಅವರ ಸಿನಿಮಾಗಳಲ್ಲಿ ಇದ್ದೇ ಇರುತ್ತಾರೆ. ದೀಪಿಕಾ ಕಿಂಗ್ ಖಾನ್ಗೆ ಒಂಥರಾ ಲಕ್ಕಿ ಚಾರ್ಮ್. ಆದರೆ ಈ ಇಬ್ಬರ ಜೊತೆ ಇನ್ನೊಬ್ಬ ಬ್ಯೂಟಿ ಸೇರಿಕೊಳ್ಳಲಿದ್ದಾರೆ.
ಕರೀನಾ ಕಪೂರ್ ಖಾನ್ ಅವರು 15 ವರ್ಷಗಳ ನಂತರ ಶಾರುಖ್ ಖಾನ್ ಅವರ ಜೊತೆ ಮತ್ತೊಮ್ಮೆ ತೆರೆ ಹಂಚಿಕೊಳ್ಳೋಕೆ ರೆಡಿಯಾಗಿದ್ದಾರೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ. ಕಿಂಗ್ನಲ್ಲಿ ನಟಿ ಸ್ಪೆಷಲ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದ್ದು ಶಾರುಖ್ ಅವರ ಜೊತೆ ಡ್ಯಾಡಿ ಕೂಲ್ ಎನ್ನುವ ಸಾಂಗ್ ಮಾಡಲಿದ್ದಾರಂತೆ. ಇದು ಸಿನಿಮಾದ ಪ್ರಮುಖ ಹೈಲೈಟ್ ಎನ್ನಲಾಗಿದೆ.
ನಟಿ ಈ ತಿಂಗಳ ಕೊನೆಯಲ್ಲಿ ಶಾರುಖ್ ಖಾನ್ ಅವರ ಜೊತೆ ಸೌತ್ ಆಫ್ರಿಕಾರದಲ್ಲಿ ಈ ಹಾಡಿನ ಶೂಟಿಂಗ್ ಮಾಡಲಿದ್ದಾರಂತೆ. ನಟಿ ಈ ಶೂಟ್ಗೆ 5 ದಿನಗಳ ಡೇಟ್ ಕೊಟ್ಟಿದ್ದು ಇದನ್ನು ತುಂಬಾ ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.
ಡ್ಯಾಡಿ ಕೂಲ್ ಶಾರುಖ್ ಖಾನ್ ಹಾಗೂ ಕರೀನಾ ಅವರನ್ನು ಒಳಗೊಂಡ ಸ್ಪೆಷಲ್ ಸಾಂಗ್ ಆಗಿದ್ದು, ಅವರಿಬ್ಬರನ್ನೂ ಪ್ರೇಕ್ಷಕರು ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಲಿದ್ದಾರೆ. ಇದು ಕಿಂಗ್ ಸಿನಿಮಾದ ದೊಡ್ಡ ಹೈಲೈಟ್ ಆಗಲಿದೆ. ಈ ಹಾಡಿಗಾಗಿ ಇಂಡಿಯಾದ ಸ್ಪೆಷಲ್ ಆರ್ಟಿಸ್ಟ್ ಹಾಗೂ ಇಂಟರ್ನ್ಯಾಷನಲ್ ಆರ್ಟಿಸ್ಟ್ ಕೂಡಾ ಒಟ್ಟಿಗೆ ಕೆಲಸ ಮಾಡಲಿದ್ದಾರೆ.














