Dhruva Sarja: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್ ನ್ಯೂಸ್; ಹುಟ್ಟುಹಬ್ಬದಂದೇ ಹೊಸ ಸಿನಿಮಾ ಘೋಷಣೆ! | | ACTPnews

tollywood people media factory movie dhruva sarja announce on birthday


ಧ್ರುವ ಸರ್ಜಾ ಸಿನಿಮಾ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಪೊಗರು, ಮಾರ್ಟಿನ್, ಕೆಡಿ ಆದ್ಮೇಲೆ ಧ್ರುವ ಸರ್ಜಾ ಈ ಚಿತ್ರ ಒಪ್ಪಿಕೊಂಡಿದ್ದಾರೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾ

(ಚಿತ್ರ ಕೃಪೆ: ಧ್ರುವ ಸರ್ಜಾ ಇನ್​ಸ್ಟಾಗ್ರಾಮ್)

ಟಾಲಿವುಡ್‌ನ ಹೆಸರಾಂತ ಪೀಪಲ್ಸ್ ಮೀಟಿಯಾ ಫ್ಯಾಕ್ಟರಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದೆ. ಈ ಒಂದು ವಿಷಯ ಬಿಟ್ರೆ, ಬೇರೆ ಇನ್ನು ಏನೂ ಅನೌನ್ಸ್ ಆಗಿಲ್ಲ. ಕಾರಣ, ಎಲ್ಲವನ್ನೂ ಧ್ರುವ ಸರ್ಜಾ ಜನ್ಮ ದಿನದಂದೇ ಹೇಳೋಕೆ ಸಿನಿಮಾ ತಂಡ ಪ್ಲಾನ್ ಮಾಡಿದೆ.

38 ನೇ ಜನ್ಮ ದಿನ

ಧ್ರುವ ಸರ್ಜಾ ಈ ಅಕ್ಟೋಬರ್-6 ರಂದು 38ನೇ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ದಿನವೇ ಇವರ ಹೊಸ ಚಿತ್ರ ಅನೌನ್ಸ್ ಆಗುತ್ತಿದೆ.

ಡೈರೆಕ್ಟರ್ ಯಾರು

ಈ ಚಿತ್ರವನ್ನ ಯಾರು ಡೈರೆಕ್ಷನ್ ಮಾಡ್ತಿದ್ದಾರೆ ಅನ್ನುವ ಕುತೂಹಲ ಇದೆ. ಇದರ ಬೆನ್ನಲ್ಲಿಯೇ ಒಂದು ಹೆಸರು ಕೇಳಿ ಬರ್ತಿದೆ. ಈ ಹಿಂದೆ ಪೊಗರು ಚಿತ್ರ ಡೈರೆಕ್ಷನ್ ಮಾಡಿರೋ ನಂದ್ ಕಿಶೋರ್ ಇರಬಹುದೇ ಅನ್ನುವ ಗೆಸ್ಸಿಂಗ್ ಕೂಡ ಶುರು ಆಗಿದೆ.

ಮೊನ್ನೆಯಿಂದಲೇ ಈ ಒಂದು ಸುದ್ದಿ ಇದೆ. ಆದರೆ, ನಂದ್ ಕಿಶೋರ್ ಈ ಬಗ್ಗೆ ಇನ್ನು ಏನು ಹೇಳಿಕೊಂಡಿಲ್ಲ. ಇನ್ನುಳಿದಂತೆ ಈ ಚಿತ್ರದ ಬಗ್ಗೆ ಈಗ ಕುತೂಹಲ ಹೆಚ್ಚಾಗಿದೆ.

tollywood people media factory movie dhruva sarja announce on birthday

ಈ ಜನ್ಮ ದಿನಕ್ಕೆ ಅನೌನ್ಸ್

(ಚಿತ್ರ ಕೃಪೆ: ಸಿನಿಮಾ ಟೀಮ್)

ಜನ್ಮ ದಿನದಂದು ರಿವೀಲ್

ಧ್ರುವ ಸರ್ಜಾ ಅವರ ಜನ್ಮ ದಿನದಂದೇ ಈ ಚಿತ್ರದ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಆ ದಿನವೇ ಈ ಸಿನಿಮಾದ ಇತರ ವಿವರಗಳು ಹೊರ ಬೀಳುವ ನಿರೀಕ್ಷೆನೂ ಇದೆ.

ಈ ಚಿತ್ರದಲ್ಲಿ ಯಾರು ನಾಯಕಿ? ವಿಲನ್ ಯಾರು? ಮ್ಯೂಸಿಕ್ ಯಾರದ್ದು? ಚಿತ್ರದ ಟೈಟಲ್ ಏನು? ಈ ಎಲ್ಲ ಕುತೂಹಲ ಈಗಲೇ ಶುರು ಆಗಿದೆ.

ಕ್ರಿಮಿನಲ್ ಸಿನಿಮಾ ಏನಾಯಿತು?

ಧ್ರುವ ಸರ್ಜಾ ಸಿನಿಮಾಗಳ ಪಟ್ಟಿಯಲ್ಲಿ ಕ್ರಿಮಿನಲ್ ಚಿತ್ರವೂ ಇದೆ. ಈ ಚಿತ್ರ ಉತ್ತರ ಕರ್ನಾಟಕದ ಕಥೆಯನ್ನ ಆಧರಿಸಿದೆ. ಕೆರೆಬೇಟೆ ಚಿತ್ರದ ಡೈರೆಕ್ಟರ್ ರಾಜ್ ಗುರು ಈ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದಾರೆ.

ಈ ಚಿತ್ರ ಹಾವೇರಿ ಹಾಗೂ ಹಾನಗಲ್ ಭಾಗದಲ್ಲಿ ನಡೆದ ನೈಜ ಘಟನೆಗಳಯನ್ನ ಆಧರಿಸಿದೆ. ಈ ಪ್ರೇಮಕತೆಯ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿದ್ದಾರೆ.

ಧ್ರುವ ಸರ್ಜಾ ಈ ಚಿತ್ರದಲ್ಲಿ ಭರ್ಜರಿಯಾಗಿಯೇ ಕಾಣಿಸುತ್ತಿದ್ದಾರೆ. ಅಷ್ಟೆ ಖಡಕ್ ಡೈಲಾಗ್ ಕೂಡ ಇದರಲ್ಲಿವೆ. ಮುಹೂರ್ತದ ದಿನವೇ ಈ ಡೈಲಾಗ್‌ನ ಝಲಕ್ ಸಿಕ್ಕಿತ್ತು. ಆದರೆ, ಈ ಚಿತ್ರದ ಕೆಲಸ ಸದ್ಯಕ್ಕೆ ನಡೀತಿಲ್ಲ ಅನ್ನುವ ಸುದ್ದಿನೂ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed