IND vs WI: ರೋಹಿತ್ 92, ಕನ್ನಡಿಗ ರಾಹುಲ್ ಸಿಡಿಲಬ್ಬರದ ಶತಕ! ವಿಂಡೀಸ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ | ಕ್ರೀಡಾ ಸುದ್ದಿ | ACTPnews

ಕೆಎಲ್ ರಾಹುಲ್-ನಮನ್ ಧೀರ್


Last Updated:

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 351 ರನ್​ಗಳ ಬೃಹತ್ ಮೊತ್ತ ದಾಖಲಿಸಿದೆ. ರೋಹಿತ್ ಶರ್ಮಾ 92 ರನ್​ಗಳಿಸಿದರೆ, ರಾಹುಲ್ ಅಜೇಯ 129 ರನ್​ಗಳಿಸಿ ದಾಖಲೆ ಬರೆದರು.

ಕೆಎಲ್ ರಾಹುಲ್-ನಮನ್ ಧೀರ್
ಕೆಎಲ್ ರಾಹುಲ್-ನಮನ್ ಧೀರ್
ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ (IND vs WI, 3rd ODI) ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ  ಭಾರತದ ಅನುಭವಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ ಕೆ.ಎಲ್. ರಾಹುಲ್ (KL Rahul) ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಅಬ್ಬರಿಸಿದ್ದಾರೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ (92) ಶತಕದ ಸನಿಹ ಬಂದು ಔಟಾದರೆ, ಕನ್ನಡಿಗ ಕೆ.ಎಲ್. ರಾಹುಲ್ ಕ್ರೀಸ್‌ನಲ್ಲಿ ಶತಕ ಸಿಡಿಸಿ ಮಿಂಚಿದರು. ಭಾರತ ತಂಡ ಒಟ್ಟಾರೆ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 351 ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ.
ಭಾರತಕ್ಕೆ ಆರಂಭಿಕ ಆಘಾತ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ, ಆರಂಭದಲ್ಲೇ ಆಘಾತ ಎದುರಾಯಿತು. ಇನ್ನಿಂಗ್ಸ್‌ನ 3ನೇ ಓವರ್‌ನ 3ನೇ ಎಸೆತದಲ್ಲಿ ಕಳೆದ ಪಂದ್ಯ ದ್ವಿಶತಕ ವೀರ ನಾಯಕ ಶುಭ್​ಮನ್ ಗಿಲ್ ಕೇವಲ 1 ರನ್‌ಗಳಿಸಿ ಔಟ್ ಆದರೆ, ನಂತರದ ಎಸೆತದಲ್ಲಿ ವಿರಾಟ್ ಕೊಹ್ಲಿ ಖಾತೆ ತೆರೆಯದೇ ಗೋಲ್ಡನ್ ಡಕ್ ಆದರು.

ಶತಕದ ಜೊತೆಯಾಟ ನೀಡಿ ಚೇತರಿಕೆ ನೀಡಿದ ರೋಹಿತ್-ಗಾಯಕ್ವಾಡ್

ಟೀಮ್ ಇಂಡಿಯಾ ಕೇವಲ 4 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಆಘಾತವನ್ನು ಅನುಭವಿಸಿತ್ತು. ಆದರೆ ರೋಹಿತ್ ಶರ್ಮಾ ಹಾಗೂ ರುತುರಾಜ್ ಗಾಯಕ್ವಾಡ್ 3ನೇ ವಿಕೆಟ್ ಜೊತೆಯಾಟದಲ್ಲಿ 137 ರನ್‌ಗಳ ಅಮೂಲ್ಯ ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ತಂದುಕೊಟ್ಟರು. ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಕೇವಲ 85 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 92 ರನ್ ಸಿಡಿಸಿ, ಶತಕದ ಸನಿಹದಲ್ಲಿ ವಿಕೆಟ್ ಒಪ್ಪಿಸಿದರು. ಶತಕ ಕೈತಪ್ಪಿದರೂ ಸಹ, ಈ ಇನಿಂಗ್ಸ್‌ನಲ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧ 100 ಅಂತಾರಾಷ್ಟ್ರೀಯ ಸಿಕ್ಸರ್ ಮತ್ತು ಅತ್ಯಂತ ವೇಗವಾಗಿ 10,000 ಆರಂಭಿಕ ಒಡಿಐ ರನ್ ಪೂರೈಸಿದ ವಿಶ್ವದಾಖಲೆಯನ್ನು ಬರೆದರು.

ಶತಕ ಸಿಡಿಸಿದ ಆಪತ್ಭಾಂಧವ ರಾಹುಲ್

ಇವರಿಗೆ ಸಾಥ್ ನೀಡುತ್ತಿದ್ದ ಗಾಯಕ್ವಾಡ್ 69 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್‌ಗಳ ಸಹಿತ 57 ರನ್‌ಗಳಿಸಿ ಔಟ್ ಆದರು. ಇವರಿಬ್ಬರ ಪತನದ ನಂತರ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕನ್ನಡಿಗ ರಾಹುಲ್ ತೆಗೆದುಕೊಂಡರು. ಕೊನೆಯ ಎಸೆತದವರೆಗೂ ಆಡಿದ ರಾಹುಲ್ ಕೇವಲ 87 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್‌ಗಳ ಸಹಿತ 129 ರನ್‌ಗಳಿಸಿ ಅಜೇಯರಾಗಿ ಉಳಿದರು. ನಮನ್ ಧೀರ್ 21 ಎಸೆತಗಳಲ್ಲಿ 30, ನಿತೀಶ್ ಕುಮಾರ್ ರೆಡ್ಡಿ 9, ಅನ್ಶುಲ್ ಕಾಂಬೋಜ್ 17, ಗುರ್ನೂರ್ ಬ್ರಾರ್ ಅಜೇಯ 8 ರನ್‌ಗಳಿಸಿದರು.

3 ವಿಕೆಟ್ ಪಡೆದ ಜೇಡನ್ ಸೀಲ್ಸ್

ವಿಂಡೀಸ್ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಜೇಡನ್ ಸೀಲ್ಸ್ 10 ಓವರ್‌ಗಳಲ್ಲಿ 62 ರನ್ ನೀಡಿ 3 ಪ್ರಮುಖ ವಿಕೆಟ್ ಕಸಿದುಕೊಂಡರೆ, ಮಧ್ಯಮ ಓವರ್‌ಗಳಲ್ಲಿ ಸಾಥ್ ನೀಡಿದ ಕೀಮೋ ಪೌಲ್ 9 ಓವರ್‌ಗಳಲ್ಲಿ 71 ರನ್‌ಗಳಿಗೆ 2 ವಿಕೆಟ್ ಮತ್ತು ಎಡಗೈ ಸ್ಪಿನ್ನರ್ ಗುಡಕೇಶ್ ಮೋಟಿ 10 ಓವರ್‌ಗಳಲ್ಲಿ 67 ರನ್ ನೀಡಿ 1 ವಿಕೆಟ್ ಪಡೆದರು. ಇನ್ನುಳಿದಂತೆ ವೇಗಿ ಅಲ್ಜಾರಿ ಜೋಸೆಫ್ 10 ಓವರ್‌ಗಳಲ್ಲಿ 1 ಮೇಡನ್ ಸಹಿತ 70 ರನ್ ನೀಡಿದರೂ ವಿಕೆಟ್ ಶೂನ್ಯರಾದರು. ತಂಡದ ಪರ ಅತ್ಯಂತ ಎಕಾನಮಿ ಬೌಲಿಂಗ್ ಪ್ರದರ್ಶಿಸಿದ ಮ್ಯಾಥ್ಯೂ ಫೋರ್ಡ್ 6 ಓವರ್‌ಗಳಲ್ಲಿ ಕೇವಲ 26 ರನ್ ನೀಡಿದರೆ, ವಿಟೆಲ್ ಲಾವ್ಸ್ 5 ಓವರ್‌ಗಳಲ್ಲಿ 54 ರನ್ ಬಿಟ್ಟುಕೊಟ್ಟು ದುಬಾರಿಯಾದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed